ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ ಜಾಗೃತಿ ಮ್ಯಾರಥಾನ್‌

Last Updated 12 ಡಿಸೆಂಬರ್ 2013, 6:30 IST
ಅಕ್ಷರ ಗಾತ್ರ

ಗದಗ: ಬಾಲ್ಯ ವಿವಾಹದ ನಿಷೇಧ ಬಗ್ಗೆ ಸಾರ್ವಜನಿರಲ್ಲಿ ಜಾಗೃತಿ ಹಾಗೂ ಕಾನೂನು ತಿದ್ದುಪಡಿ ಅಗತ್ಯವಿದೆ ಎಂದು ಜಿಲ್ಲಾ ಸೆಷನ್ಸ್  ನ್ಯಾಯಾಧಿೀಶ ಟಿ.ಎಚ್.ಆವಿನ ಹೇಳಿದರು. ನಗರದ ಮಹಾತ್ಮಾಗಾಂಧಿ ವೃತ್ತ­ದಲ್ಲಿ  ಬಾಲ್ಯ ವಿವಾಹ ನಿಷೇದ ಕುರಿತು ಅರಿವು ಹಾಗೂ ಜಾಗೃತಿಗಾಗಿ ನಡೆದ ಮ್ಯಾರ­ಥಾನ್ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾಧಿ­ಕಾರಿ ಎನ್.ಎಸ್. ಪ್ರಸನ್ನ­ಕುಮಾರ ಮಾತನಾಡಿ, ಬಾಲ್ಯ ವಿವಾಹ­ದಿಂದಾಗುವು ಅಪಾಯ, ಅಪರಾಧ ಕುರಿತು ಜಿಲ್ಲೆಯಾದ್ಯಾಂತ ಜಾಗೃತಿ  ಕಾರ್ಯಕ್ರಮ ಹಮ್ಮಿಕೊಳ್ಳಲಾಗು­ವುದು. ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿಯೊಂದು ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಮನೆ-ಮನೆಗೆ ತೆರಳಿ ಅರಿವು ಮೂಡಿಸ­ಲಾ­ಗುವುದು ಎಂದರು.

ಡಿವೈಎಸ್ ಪಿ. ವಿಜಯ ಡಂಬಳ, ಮಕ್ಕಳ ಕಲ್ಯಾಣಾಧಿ­ಕಾರಿ ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿ­ಕಾರಿ ಐ.ಬಿ.ಬೆನಕೊಪ್ಪ, ಹೂಗಾರ, ಜಿ.ಸಿ.ರೇಷ್ಮೇ, ಜಿಲ್ಲಾ ಮಕ್ಕಳ ರಕ್ಷಣಾಧಿ­ಕಾರಿ ಭಾರತಿ ಶೆಟ್ಟರ ಹಾಜರಿದ್ದರು.  ವಿವಿಧ ಶಾಲಾ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಬಾಲ್ಯ ವಿವಾಹ ನಿಷೇದ ಕುರಿತ ಘೋಷಣೆ­ಗಳನ್ನು ಕೂಗುತ್ತಾ ಬಿತ್ತಿ ಪತ್ರಗಳನ್ನು ಹಿಡಿದುಕೊಂಡು   ಮ್ಯಾರಥಾನ್ ದಲ್ಲಿ ಪಾಲ್ಗೊಂಡಿದ್ದರು.

ನಗರದ ಮಹಾತ್ಮಾ ಗಾಂಧಿವೃತ್ತದಿಂದ ಪ್ರಾರಂಭಗೊಂಡ ಮ್ಯಾರಥಾನ್ ಭೂಮರಡ್ಡಿ ವೃತ್ತ,ಹಳೇ ಡಿಸಿ ಆಪೀಸ್ ವೃತ್ತ, ಕಿತ್ತೂರ ಚನ್ನಮ್ಮ ರಾಣಿ ವೃತ್ತ, ಮುಳಗುಂದ ನಾಕಾದ ಮೂಲಕ ತೆರಳಿ ಜಿಲ್ಲಾಧಿಕಾರಿ ಆಡಳಿತ ಭವನದಲ್ಲಿ ಮುಕ್ತಾಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT