ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್‌ ಬ್ಯಾಡ್ಮಿಂಟನ್: ಬನಶಂಕರಿ, ಆಳ್ವಾಸ್‌ಗೆ ಪ್ರಶಸ್ತಿ

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಬೆಂಗಳೂರಿನ ಬನಶಂಕರಿ ಸ್ಪೋರ್ಟ್ಸ್‌ ಕ್ಲಬ್ ಮತ್ತು ಮೂಡುಬಿದರೆಯ ಆಳ್ವಾಸ್ ‘ಎ‘ ತಂಡವು ಭಾನುವಾರ ಇಲ್ಲಿ ಮುಕ್ತಾಯವಾದ ರಾಜ್ಯಮಟ್ಟದ ಬಾಲ್‌ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ.

ಮಹಿಳೆಯರ ವಿಭಾಗದಲ್ಲಿ ಮೂಡುಬಿದರೆಯ ಆಳ್ವಾಸ್ ‘ಎ’ ತಂಡವು 21–11ರಿಂದ ಆಳ್ವಾಸ್ ಬಿ ತಂಡದ ವಿರುದ್ಧ ಜಯಿಸಿ ಪ್ರಶಸ್ತಿ ಗಳಿಸಿತು. ಮೂರನೇ ಸ್ಥಾನವನ್ನು ಆಳ್ವಾಸ್ ಸಿ ತಂಡವು ಪಡೆಯಿತು. ಪುರುಷರ ವಿಭಾಗದ ಫೈನಲ್‌ನಲ್ಲಿ ನಾಯಕ ವಿಜಯಕುಮಾರ್ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಬೆಂಗಳೂರಿನ ಬನಶಂಕರಿ ಸ್ಪೋರ್ಟ್ಸ್ ಕ್ಲಬ್‌ 29–21ರಿಂದ ಬೆಂಗಳೂರಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ತಂಡವನ್ನು ಸೋಲಿಸಿತು. ವಿಜಯನಗರ ಸ್ಪೋರ್ಟ್ಸ್‌ ಕ್ಲಬ್ ತಂಡವು ಮೂರನೇ ಸ್ಥಾನ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT