ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಸ್ಟನ್: ಮಂದಾರ ಕನ್ನಡಕ್ಕೆ 40ರ ಸಂಭ್ರಮ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬಾಸ್ಟನ್: `ಹೊರನಾಡಿನಲ್ಲಿದ್ದರೂ ಹೊಸ ಪೀಳಿಗೆಯ ಕನ್ನಡಿಗರಲ್ಲಿರುವ ಕನ್ನಡ ಪ್ರೀತಿಯ ಚಿಲುಮೆ ಬತ್ತದಿರಲಿ~ ಎಂದು ಹಾಸ್ಯ ಸಾಹಿತಿ,  ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆ ಆಶಿಸಿದರು.1970ರ ದಶಕದಲ್ಲಿ ಅಮೆರಿಕಾಗೆ ವಲಸೆ ಬಂದ ಕನ್ನಡಿಗರು ಮಾತೃಭೂಮಿ, ಮಾತೃಭಾಷೆ ನಂಟು ಉಳಿಸಿ-ಬಲಪಡಿಸಿಕೊಳ್ಳಲು ಕಟ್ಟಿದ ಬಾಸ್ಟನ್ ನಗರದ `ಮಂದಾರ ಕನ್ನಡ ಕೂಟ~ ಇಲ್ಲಿ ಅ. 6-7ರಂದು ಹಮ್ಮಿಕೊಂಡಿದ್ದ 40ನೇ ವರ್ಷಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಅರ್ಥ ವ್ಯವಸ್ಥೆಗೆ ಹೊಸ ವ್ಯಾಖ್ಯೆ ನೀಡಿದ ಮಾಹಿತಿ ತಂತ್ರಜ್ಞಾನದ ಪ್ರತಿಭೆಗಳಲ್ಲಿ ಕನ್ನಡಿಗರ ಕೊಡುಗೆ ಹಿರಿದಾದುದು ಎಂದು ಪ್ರಶಂಸಿಸಿದರು.ನಂತರ ಸಂಘಟನೆಯ ಸ್ಮರಣ ಸಂಚಿಕೆ `ದೀವಿಗೆ~ ಬಿಡುಗಡೆ ಮಾಡಿದ ಅವರು ಪ್ರೇಕ್ಷಕರ ಜತೆ ಸಂವಾದ ನಡೆಸಿದರು. ಅಮೆರಿಕನ್ನಡಿಗರ ಕನ್ನಡಾಭಿಮಾನ ಕಂಡು ಮೂಕಳಾಗಿದ್ದೆೀನೆ ಎಂದರು.

ಎರಡು ದಿನ ಬಾಸ್ಟನ್ ಸಮೀಪದ ಮಾರ್ಲ್‌ಬರೋದಲ್ಲಿ ಮಂಜೂಶ ತಂಡದವರಿಂದ ಶ್ರೀಕೃಷ್ಣ ಪಾರಿಜಾತ- ನರಕಾಸುರ ವಧೆ ಯಕ್ಷಗಾನ ಹಾಗೂ `ಮಂದಾರ~ ಸದಸ್ಯರು ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT