ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಸ್ಪಷ್ಟನೆ

Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

*ಅಕ್ಟೋಬರ್‌ ೨೯ರಂದು ಜೆ.ಆರ್. ಆದಿನಾರಾಯಣಮುನಿ ಅವರ ‘ಬಸ್ ತಂಗುದಾಣ ನಿರ್ಮಿಸಿ’ ಎಂಬ ದೂರು.
ಬಸ್ ತಂಗುದಾಣದ ನಿರ್ಮಾಣ, ನಿರ್ವಹಣೆಯು ಸಹಾಯಕ ಆಯುಕ್ತರು, ಜಾಹೀರಾತು ವಿಭಾಗ, ಬಿಬಿಎಂಪಿ, ಎನ್.ಆರ್.ವೃತ್ತ, ರವರ ವ್ಯಾಪ್ತಿಗೆ ಒಳಪಡುತ್ತದೆ.

*ನವೆಂಬರ್‌ ೧೨ರಂದು ಎಲ್.ಎನ್. ಅವರ ‘ಜಯನಗರಕ್ಕೆ ನೇರ ಬಸ್ ಬೇಕು’ ಎಂಬ ದೂರು.
ಪ್ರಸ್ತುತ ವಿವೇಕನಗರ, ಆಸ್ಟಿನ್ ಟೌನ್ ಮಾರ್ಗವಾಗಿಮಾರ್ಗ ಸಂಖ್ಯೆ:೨೦೧ರಲ್ಲಿ ಸುಮಾರು ೫೦ ಬಸ್ಸುಗಳ ಸಾರಿಗೆ ಸೌಲಭ್ಯವಿದ್ದು, ಅವುಗಳಲ್ಲಿ ಜಯನಗರ ೯ನೇ ಬ್ಲಾಕ್, ೫ನೇ ಬ್ಲಾಕ್ ಹಾಗೂ ಬನಶಂಕರಿ ಕಡೆಗೆ ಪ್ರಯಾಣಿಸಬಹುದಾಗಿದೆ. ಹಾಗೂ ಪ್ರಮುಖ ಬಸ್ ನಿಲ್ದಾಣಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆ ಮತ್ತು ಶಿವಾಜಿನಗರಗಳಿಂದ ವಿವೇಕನಗರ, ಈಜಿಪುರಕ್ಕೆ ಸುಮಾರು ೧೮ ಬಸ್ಸುಗಳು ಸಂಚರಿಸುತ್ತವೆ. ಸಾರ್ವಜನಿಕ ಪ್ರಯಾಣಿಕರು ಸದರಿ ಸಾರಿಗೆ ಸೌಲಭ್ಯವನ್ನು ಪಡೆಯಲು ಕೋರಲಾಗಿದೆ.

*ನವೆಂಬರ್‌ ೧೨ರಂದು ಕೆ.ಎಂ.ರಾಘವೇಂದ್ರ ರಾವ್ ಅವರ ಸಾರಿಗೆ ಸಂಸ್ಥೆ ಅಧಿಕಾರಿಗಳ ಗಮನಕ್ಕೆ ಎಂಬ ದೂರು.
ಕೆಂಗೇರಿ ಉಪನಗರದಿಂದ ಜಯನಗರಕ್ಕೆ ಮಾರ್ಗ ಸಂಖ್ಯೆ:೩೭೫ ಮತ್ತು ೩೭೫ಬಿ ನಲ್ಲಿ ಈಗಾಗಲೇ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. ಪ್ರಯಾಣಿಕರು ಸಿರ್ಸಿ ಸರ್ಕಲ್ ಬಳಿ ಒಂದು ಬಸ್ ಬದಲಾಯಿಸುವ ಮೂಲಕ ಚಾಮರಾಜಪೇಟೆ, ಗಾಂಧೀ ಬಜಾರ್‌ಗೆ ಪ್ರಯಾಣಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT