ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬಗ್ಗೆ ಜನರಿಗೆ ಬೇಸರ ಮೂಡಿದೆ: ಅಡ್ವಾಣಿ

Last Updated 31 ಮೇ 2012, 8:20 IST
ಅಕ್ಷರ ಗಾತ್ರ

 ನವ ದೆಹಲಿ (ಪಿಟಿಐ): ಭ್ರಷ್ಟಾಚಾರ ಆರೋಪ ಹೊತ್ತಿರುವ ಬಿಎಸ್ಪಿ ನಾಯಕನನ್ನು ಪಕ್ಷಕ್ಕೆ ಕರೆಯಿಸಿಕೊಳ್ಳುವ ಮೂಲಕ ಬಿಜೆಪಿ ವರ್ಚಸ್ಸು ಹಾಳಾಗಿರುವುದಲ್ಲದೇ, ಜನರಿಗೆ ಪಕ್ಷದ ಮೇಲೆ ಬೇಸರ ಮೂಡಿದೆ ಎಂದು ಅಡ್ವಾಣಿ ಪರೋಕ್ಷವಾಗಿ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮೇಲೆ ಹರಿಹಾಯ್ದಿದ್ದಾರೆ.

~ಯುಪಿಎ ಸರ್ಕಾರದ ಬಹಳಷ್ಟು ಹಗರಣಗಳ ವಿರುದ್ಧ ಎಲ್ಲೆಲ್ಲೂ ಆಕ್ರೋಶ ಮುಗಿಲು ಮುಟ್ಟಿದ್ದ ಸಂದರ್ಭದಲ್ಲಿ ಸಕಾಲಕ್ಕೆ ಬಿಜೆಪಿ ಧ್ವನಿ ಎತ್ತಲೇ ಇಲ್ಲ. ಇಂದು ಜನರು ಯುಪಿಎ ಸರ್ಕಾರದ ವಿರುದ್ಧ ಸಿಟ್ಟಾಗಿರುವುದರ ಜತೆಗೆ ಅವರಿಗೆ ನಮ್ಮ ಮೇಲೂ ಅಷ್ಟೇ ಅಸಮಾಧಾನವಿದೆ~ ಎಂದು ಅಡ್ವಾಣಿ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿರುವ ಮೂಲಕ ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಂತರ ಬಿಜೆಪಿ ನಾಯಕರ ನಡುವಿನ ಭಿನ್ನಮತ ಸ್ಫೋಟಗೊಂಡಂತಾಗಿದೆ.

~ಇಂದು ಯುಪಿಎ ಸರ್ಕಾರದ ಸರಣಿ ಹಗರಣಗಳ ಕುರಿತು ಮಾಧ್ಯಮಗಳು ಸರ್ಕಾರದ ಮೇಲೆ ಆಕ್ರಮಣ ಮಾಡುತ್ತಿವೆ. ಈ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಕಾಲಕಾಲಕ್ಕೆ ಯುಪಿಎ ಹಗರಣಗಳ ಕುರಿತು ಧ್ವನಿ ಎತ್ತದೇ ಇರುವುದು ರಾಜಕೀಯ ಪಕ್ಷಗಳು ಮಾಡಿದ್ದನ್ನು ಮಾಧ್ಯಮಗಳು ಮಾಡುತ್ತಿವೆ ಎಂದು ಒಬ್ಬ ಮಾಜಿ ಪತ್ರಕರ್ತನಾಗಿ ನನಗನಿಸುತ್ತಿದೆ~ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪಕ್ಷದಲ್ಲಿದ್ದುಕೊಂಡು ಪಕ್ಷದ ಮನಃಸ್ಥಿತಿಯನ್ನು ಗಮನಿಸಿದರೆ ಯಾವುದೂ ಯೋಜನಾಬದ್ಧವಾಗಿಲ್ಲ ಎಂದೆನಿಸುತ್ತದೆ. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾಯಾವತಿ ಅವರು ಭ್ರಷ್ಟಾಚಾರದ ಆರೋಪ ಹೊತ್ತ ಬಿಎಸ್ ಪಿ ಸಚಿವನನ್ನು ಹೊರಹಾಕಿದರೆ, ಬಿಜೆಪಿ ಆತನನ್ನು ಸ್ವಾಗತಿಸಿದ ರೀತಿ ಹಾಗೂ ಜಾರ್ಖಂಡ್ ಹಾಗೂ ಕರ್ನಾಟಕದ ಪರಿಸ್ಥಿತಿಯನ್ನು ನಿಭಾಯಿಸಿದ ಪರಿ ಈ ಎಲ್ಲಾ ಘಟನೆಗಳಲ್ಲೂ ಭ್ರಷ್ಟಾಚಾರದ ವಿರುದ್ಧ ಪಕ್ಷದ ಹೋರಾಟದ ವರ್ಚಸ್ಸು ಕುಂದುವಂತೆ ಮಾಡಿದೆ.

1984ನರಲ್ಲಿ ಇಬ್ಬರೇ ಸಂಸದರನ್ನು ಹೊಂದಿದ್ದ ಬಿಜೆಪಿ ಇಂದು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಸಂಖ್ಯಾಬಲದ ಆಧಾರದಲ್ಲಿ ವೃದ್ಧಿ ಕಂಡಿದೆ. ಸುಷ್ಮಾ ಹಾಗೂ ಅರುಣ್ ಜೇಟ್ಲಿ ನೇತೃತ್ವದಲ್ಲಿ ಎರಡೂ ಮನೆಯಲ್ಲಿ ಉತ್ತಮವಾಗಿ ಸಂಸದರು ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ ಒಂಬತ್ತು ರಾಜ್ಯಗಳಲ್ಲಿ ಪಕ್ಷ ಅಧಿಕಾರದಲ್ಲಿದೆ.

ಆದರೆ ಆಗಿರುವ ಬದ್ಧತೆಯ ಲೋಪಕ್ಕೆ ಯಾವುದೇ ರೀತಿಯ ಪರಿಹಾರವಿಲ್ಲ ಎಂದು ಅಡ್ವಾಣಿ ಬೇಸರದಿಂದ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT