ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ರೈತರ ರ್‍ಯಾಲಿಗೆ ಅನುಮತಿ ರದ್ದು

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಆಗ್ರಾದಲ್ಲಿ ಭಾನು­ವಾರ ಪಕ್ಷದ ನಾಯ­ಕ­­ರಾದ ಎಲ್‌.ಕೆ. ಅಡ್ವಾಣಿ ಮತ್ತು ವರುಣ್‌ ಗಾಂಧಿ ಅವರ ನೇತೃ­ತ್ವದಲ್ಲಿ ‘ರೈತರ ರ್‍ಯಾಲಿ’ ಆಯೋಜಿ­ಸಲು ಬಿಜೆಪಿಗೆ ನೀಡಿದ್ದ ಅನು­ಮತಿಯನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿ­ಕೃತ ಮೂಲಗಳು ಶುಕ್ರವಾರ ತಿಳಿಸಿವೆ.

ಬಿಜೆಪಿ ಮೂಲಗಳ ಪ್ರಕಾರ, ಆಗ್ರಾದ ಫತೇಪುರ್‌ ಸಿಕ್ರಿ ಪ್ರದೇಶದ ಅಲೋಕಾ ಗ್ರಾಮದಲ್ಲಿ ‘ರೈತರ ಸ್ವಾಭಿಮಾನಿ’ ರ್‍ಯಾಲಿ ಏರ್ಪಡಿಸಲು ಎಂಟು ತಿಂಗಳ ಹಿಂದೆಯೇ ಜಿಲ್ಲಾ­ಡಳಿತ ಲಿಖಿತ ಅನುಮತಿ ನೀಡಿತ್ತು. ಆದರೆ ದಿಢೀರ್‌ ಆಗಿ ಗುರುವಾರ ರಾತ್ರಿ ಹಿರಿಯ ಪೊಲೀಸ್‌ ಅಧಿಕಾರಿಗಳು ಕಾನೂನು ಮತ್ತು ಸುವ್ಯ­ವಸ್ಥೆ ಸಮಸ್ಯೆಯಿಂದ ಅನುಮತಿ ರದ್ದು­ಗೊ­ಳಿ­ಸಿರುವ ಮಾಹಿತಿಯನ್ನು ಪಕ್ಷಕ್ಕೆ ನೀಡಿದ್ದಾರೆ.

‘ಇದೊಂದು ರೈತರ ರ್‍ಯಾಲಿಯಾಗಿದ್ದು, ಯಾವುದೇ ರಾಜಕೀಯ ಅಜೆಂಡಾ ಇರ­ಲಿಲ್ಲ. ಆದರೆ ಈಗ ಅನುಮತಿ ನಿರಾಕರಿಸಿ­ರು­ವುದು ಪ್ರಜಾ­ಪ್ರಭುತ್ವ ಸ್ವಾತಂತ್ರ್ವವನ್ನು ತುಳಿಯುವ ಹುನ್ನಾರ­ವಾಗಿದೆ’ ಎಂದು ಬಿಜೆಪಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT