ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರದಿಂದ ಅವಳಿ ಜಿಲ್ಲೆಗೆ ಸಂಕ್ರಾಂತಿ ಕೊಡುಗೆ

Last Updated 6 ಜನವರಿ 2012, 8:45 IST
ಅಕ್ಷರ ಗಾತ್ರ

ವಿಜಾಪುರ: `ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ 17,207 ಕೋಟಿ ರೂಪಾಯಿ ಕಾಮಗಾರಿಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಐತಿಹಾಸಿಕ ನಿರ್ಧಾರ. ಅವಳಿ ಜಿಲ್ಲೆಯ ಜನತೆಗೆ ನೀಡಿದ ಸಂಕ್ರಾಂತಿಯ ಕೊಡುಗೆ ಇದು~ ಎಂದು ಬಸವನ ಬಾಗೇವಾಡಿ ಶಾಸಕ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.

ಸಮಗ್ರ ನೀರಾವರಿ ಯೋಜನೆ ಜಿಲ್ಲೆಯ ಜನತೆಯ ಕನಸಾಗಿತ್ತು. ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮೋಯಿ ಅವರ ಶ್ರಮದಿಂದ ಈ ಯೋಜನೆ ಜೀವ ಪಡೆದುಕೊಂಡಿದೆ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮುಳವಾಡ ಗ್ರಾಮದಲ್ಲಿ ಮಾರ್ಚ್ ತಿಂಗಳಲ್ಲಿ ಬ್ರಹತ್ ಸಮಾವೇಶ ನಡೆಸಿ, ನೀರಾವರಿ ಕಾಮಗಾರಿಗೆ ರಾಜ್ಯದ ಮುಖ್ಯಮಂತ್ರಿಗಳಿಂದ ಚಾಲನೆ ನೀಡ ಲಾಗುವುದು. ಇದಕ್ಕೂ ಮುನ್ನ ಆಲಮಟ್ಟಿಯಲ್ಲಿ ಮುಖ್ಯಮಂತ್ರಿಗಳನ್ನು ಸನ್ಮಾನಿಸಿ ಬರಮಾಡಿಕೊಳ್ಳಲಾಗುವುದು ಎಂದರು.

ಈ ಯೋಜನೆಗಳ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಇಲ್ಲಿಯವರೆಗೆ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಗುಲ್ಬರ್ಗ ಹಾಗೂ ರಾಯ ಚೂರು ಜಿಲ್ಲೆಗಳ ಜನತೆ ಲಾಭ ಪಡೆಯು ತ್ತಿದ್ದರು. ಆದರೆ, ಈ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡ ನಮ್ಮ ಜಿಲ್ಲೆಯ ಜನರಿಗೆ ತ್ಯಾಗದ ಫಲ ದೊರೆತಿರಲಿಲ್ಲ. ಕೊನೆಗೂ ಸರ್ಕಾರ ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂದಿಸಿದೆ ಎಂದು ಹೇಳಿದರು.

`ಸಿಂದಗಿ ಪಟ್ಟಣದಲ್ಲಿ ಪಾಕ್ ಧ್ವಜ ಹಾರಿಸಿದ ಶ್ರಿರಾಮ ಸೇನೆಯ ಕಾರ್ಯಕರ್ತರ ಕಾರ್ಯ ಅಕ್ಷಮ್ಯ ಅಪರಾಧ. ತಪ್ಪಿತಸ್ಥರು ಯಾವುದೇ ಧರ್ಮದವರಾಗಿರಲಿ ಶಿಕ್ಷೆಯಾಗಬೇಕು. ಇದನ್ನು ಬಿಜೆಪಿ ಪಕ್ಷವು ಕೂಡ ಸಹಿಸುವುದಿಲ್ಲ~ ಎಂದರು.

ಸಿಂದಗಿ ಶಾಸಕ ರಮೇಶ ಭೂಸನೂರ ಮಾತನಾಡಿ, `ಸಿಂದಗಿ ಪಟ್ಟಣದಲ್ಲಿ ಪಾಕ್ ಧ್ವಜ ಹಾರಿಸಿದ ಶ್ರಿರಾಮ ಸೇನೆ ಸಂಘಟನೆ ದುಷ್ಕೃತ್ಯ ಖಂಡನೀಯ. ಇಂಥ ದೇಶದ್ರೋಹಿ ಕೃತ್ಯ ನಡೆಸಿದವರು ಯಾವುದೇ ಧರ್ಮದವರಾಗಿರಲಿ ಶಿಕ್ಷೆಯಾಗಬೇಕು. ಪಾಕ್ ಧ್ವಜ ಹಾರಿಸಿದವರಿಗೂ ನನಗೂ ಯಾವುದೇ ಸಂಬಂಧವಿಲ್ಲ~ ಎಂದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT