ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಪಿಎಲ್: ಪ್ರಧಾನಿ ಭೇಟಿ ಮಾಡಿದ ಮೊಂಟೆಕ್‌ಸಿಂಗ್

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರತಿ ದಿನ 32 ರೂಪಾಯಿಗಳ ಆದಾಯವನ್ನು ಬಡತನ ರೇಖೆಯ ಕೆಳಗಿರುವ (ಬಿಪಿಎಲ್) ವ್ಯಕ್ತಿಗಳನ್ನು ಗುರುತಿಸಲು ಮಾನದಂಡವಾಗಿ ರೂಪಿಸಿರುವ ಬಗ್ಗೆ ಎದ್ದಿರುವ ವಿವಾದಗಳ ಹಿನ್ನೆಲೆಯಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಭಾನುವಾರ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಿದರು.

ಈ ನಿಟ್ಟಿನಲ್ಲಿ ಯೋಜನಾ ಆಯೋಗದ ನಿಲುವನ್ನು ಅವರು  ಸೋಮವಾರ ಹೇಳಿಕೆಯಲ್ಲಿ ತಿಳಿಸುವ ಸಾಧ್ಯತೆ ಇದೆ.

ಪ್ರಮಾಣ ಪತ್ರದ ಪ್ರಕಾರ ಬಡತನ ರೇಖೆಗಿಂತ ಕೆಳಗಿನವರಿಗೆ ನೀಡುವ ಸವಲತ್ತುಗಳನ್ನು ದೇಶದ 40.74 ಕೋಟಿ ಜನರು ಪಡೆಯುತ್ತಿದ್ದಾರೆ. ಈ ಸಂಖ್ಯೆ ತೆಂಡೂಲ್ಕರ್ ಸಮಿತಿ ನೀಡಿದ ವರದಿಗಿಂತ ಅಧಿಕವಾಗಿದೆ. ತೆಂಡೂಲ್ಕರ್ ಸಮಿತಿಯ ಪ್ರಕಾರ 37.2 ಕೋಟಿ ಜನರು ಬಿಪಿಎಲ್ ಸೌಲಭ್ಯ ಪಡೆಯುತ್ತಿದ್ದರು.

ಎನ್‌ಎಸಿ ತೀವ್ರ ಆಕ್ಷೇಪ: ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿ ಸಲು ರೂಪಿಸಿರುವ ಮಾನದಂಡದ ಬಗ್ಗೆ ರಾಷ್ಟ್ರೀಯ ಸಲಹಾ ಮಂಡಳಿ (ಎನ್‌ಎಸಿ) ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಯಾವುದೇ ವ್ಯಕ್ತಿ ದಿನವೊಂದಕ್ಕೆ 32 ರೂಪಾಯಿಗಳಷ್ಟೇ ವೆಚ್ಚ ಮಾಡಿ ಬದುಕಲು ಸಾಧ್ಯವಿಲ್ಲ ಎಂದು ಮಂಡಳಿ ಸದಸ್ಯ ಎನ್.ಸಿ.ಸಕ್ಸೇನಾ ಹೇಳಿದ್ದಾರೆ.

ಎನ್‌ಎಸಿ ಮುಖ್ಯಸ್ಥೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಸಹ ಈ ಮಾನದಂಡ ಆಕ್ಷೇಪಿಸಿದ್ದಾರೆ.್ರತಿ ದಿನ 32 ರೂಪಾಯಿಗಳ ಆದಾಯವನ್ನು ಬಡತನ ರೇಖೆಯ ಕೆಳಗಿರುವ (ಬಿಪಿಎಲ್) ವ್ಯಕ್ತಿಗಳನ್ನು ಗುರುತಿಸಲು ಮಾನದಂಡವಾಗಿ ರೂಪಿಸಿರುವ ಬಗ್ಗೆ ಎದ್ದಿರುವ ವಿವಾದಗಳ ಹಿನ್ನೆಲೆಯಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಭಾನುವಾರ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಿದರು.

ಈ ನಿಟ್ಟಿನಲ್ಲಿ ಯೋಜನಾ ಆಯೋಗದ ನಿಲುವನ್ನು ಅವರು  ಸೋಮವಾರ ಹೇಳಿಕೆಯಲ್ಲಿ ತಿಳಿಸುವ ಸಾಧ್ಯತೆ ಇದೆ.

ಪ್ರಮಾಣ ಪತ್ರದ ಪ್ರಕಾರ ಬಡತನ ರೇಖೆಗಿಂತ ಕೆಳಗಿನವರಿಗೆ ನೀಡುವ ಸವಲತ್ತುಗಳನ್ನು ದೇಶದ 40.74 ಕೋಟಿ ಜನರು ಪಡೆಯುತ್ತಿದ್ದಾರೆ. ಈ ಸಂಖ್ಯೆ ತೆಂಡೂಲ್ಕರ್ ಸಮಿತಿ ನೀಡಿದ ವರದಿಗಿಂತ ಅಧಿಕವಾಗಿದೆ. ತೆಂಡೂಲ್ಕರ್ ಸಮಿತಿಯ ಪ್ರಕಾರ 37.2 ಕೋಟಿ ಜನರು ಬಿಪಿಎಲ್ ಸೌಲಭ್ಯ ಪಡೆಯುತ್ತಿದ್ದರು.

ಎನ್‌ಎಸಿ ತೀವ್ರ ಆಕ್ಷೇಪ: ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿ ಸಲು ರೂಪಿಸಿರುವ ಮಾನದಂಡದ ಬಗ್ಗೆ ರಾಷ್ಟ್ರೀಯ ಸಲಹಾ ಮಂಡಳಿ (ಎನ್‌ಎಸಿ) ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಯಾವುದೇ ವ್ಯಕ್ತಿ ದಿನವೊಂದಕ್ಕೆ 32 ರೂಪಾಯಿಗಳಷ್ಟೇ ವೆಚ್ಚ ಮಾಡಿ ಬದುಕಲು ಸಾಧ್ಯವಿಲ್ಲ ಎಂದು ಮಂಡಳಿ ಸದಸ್ಯ ಎನ್.ಸಿ.ಸಕ್ಸೇನಾ ಹೇಳಿದ್ದಾರೆ. ಎನ್‌ಎಸಿ ಮುಖ್ಯಸ್ಥೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಸಹ ಈ ಮಾನದಂಡ ಆಕ್ಷೇಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT