ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ವಿರುದ್ಧ ಪ್ರತಿಪಕ್ಷ ಆರೋಪ-ಬಡ್ತಿ, ಸೌಲಭ್ಯ ನೀಡಿಲ್ಲ ಕಾಯಂ ದಿನಗೂಲಿ ನೌಕರರಿಗೆ ಅನ್ಯಾಯ.

Last Updated 8 ಫೆಬ್ರುವರಿ 2011, 18:35 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾಯಂ ದಿನಗೂಲಿ ನೌಕರರಿಗೆ ಕಾಲ ಕಾಲಕ್ಕೆ ದೊರೆಯುವ ಬಡ್ತಿ ಮತ್ತು ಇತರ ಸೌಲಭ್ಯಗಳನ್ನು ನೀಡದೇ ಅನ್ಯಾಯ ಎಸಗಲಾಗಿದೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎಂ.ನಾಗರಾಜ್ ಮತ್ತು ಜೆಡಿಎಸ್ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದರು.ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಾಲಿಕೆಯ ಅಧಿಕಾರಿಗಳು ಮೂಲ ಕಡತಗಳನ್ನು ಬಚ್ಚಿಟ್ಟು, ಆಯುಕ್ತರಿಗೆ ಸುಳ್ಳು ಮಾಹಿತಿಯನ್ನು ನೀಡುವ ಮೂಲಕ ಕಾಯಂ ದಿನಗೂಲಿ ನೌಕರರಿಗೆ ನ್ಯಾಯ ಸಿಗದಂತೆ ಮಾಡಿದ್ದಾರೆ’ ಎಂದು ದೂರಿದರು.‘

1986ಕ್ಕೂ ಹಿಂದೆ ನೇಮಕವಾಗಿದ್ದ ಪಾಲಿಕೆಯ 105 ಮಂದಿ ದಿನಗೂಲಿ ನೌಕರರನ್ನು ಕಾಯಂಗೊಳಿಸಲಾಗಿತ್ತು. ಸೇವಾ ಜೇಷ್ಠತೆ ಪ್ರಕಾರ ಅವರಿಗೆ ಬಡ್ತಿ ಮತ್ತಿತರ ಸೌಲಭ್ಯಗಳು ದೊರೆಯ    ಬೇಕಿತ್ತು.ಆದರೆ ಅವರ ನಂತರದಲ್ಲಿ ನೇಮಕಗೊಂಡ ನೌಕರರಿಗೆ ಸೌಲಭ್ಯಗಳನ್ನು ನೀಡಲಾಗಿದೆ’ ಎಂದು ಅವರು ಹೇಳಿದರು.‘ಈಗಲಾದರೂ ಕೋರ್ಟ್ ನೀಡಿರುವ ಆದೇಶದ   ಗಡುವಿನೊಳಗೆ ಕಾಯಂ ದಿನಗೂಲಿ ನೌಕರರಿಗೆ ಸೌಲಭ್ಯಗಳನ್ನು ಕೊಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.‘ಪಾಲಿಕೆಯಲ್ಲಿ ಕಾಯ್ದೆಗಾಗಲಿ, ವೃಂದ ಮತ್ತು ನೇಮಕಾತಿ ನಿಯಮಗಳಿಗಾಗಲಿ ಬೆಲೆಯೇ ಇಲ್ಲ. ತುಘಲಕ್ ದರ್ಬಾರ್ ನಡೆದಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಪಾಲಿಕೆ ಆಡಳಿತ ಕಣ್ಣುಮುಚ್ಚಿ ಕುಳಿತಿದೆ’ ಎಂದು ಅವರು ಆಪಾದಿಸಿದರು
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT