ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಯರ್‌ಗೂ ದಿನಾಚರಣೆ!

Last Updated 31 ಜುಲೈ 2013, 19:59 IST
ಅಕ್ಷರ ಗಾತ್ರ

ಆಗಸ್ಟ್ ಎಂದರೆ ಹಬ್ಬಗಳ ಮಾಸ. ಸ್ನೇಹಿತರ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ ಎಲ್ಲರಿಗೂ ಗೊತ್ತೇ ಇದೆ. `ಅಂತರರಾಷ್ಟ್ರೀಯ ಬಿಯರ್ ದಿನಾಚರಣೆ' ಕೂಡ ಇದೇ ತಿಂಗಳ ಮೊದಲ ಶುಕ್ರವಾರದಂದು ಆಚರಿಸಲಾಗುತ್ತದೆ. ಈ ಬಿಯರ್ ಹಬ್ಬಕ್ಕೆ ಕಿಂಗ್‌ಫಿಷರ್ ಸಕಲ ಸಿದ್ಧತೆ ನಡೆಸಿದ್ದು, ಅದರ ಹೊಣೆಯನ್ನು ತನ್ನ ಗ್ರಾಹಕರಿಗೇ ನೀಡಿರುವುದು ವಿಶೇಷ.

ಉತ್ಸಾಹಿ ಹಾಗೂ ಸಾಮಾಜಿಕ ತಾಣಗಳನ್ನು ಹೆಚ್ಚಾಗಿ ಬಳಸುವ ಕಿಂಗ್‌ಫಿಷರ್ ಅಭಿಮಾನಿಗಳು ನಗರದ ಮಂದಿಗೆ ತಮ್ಮ ಸಂದೇಶಗಳ ಮೂಲಕ ಬಿಯರ್ ಹಬ್ಬಕ್ಕೆ ಕರೆ ನೀಡುವ ಮೂಲಕ ಬಿಯರ್ ಗೆಲ್ಲುವ ಸದವಕಾಶವನ್ನು ಅದು ನೀಡಿದೆ.

`ನಮಗೇಕೆ ಬಿಯರ್ ಬೇಕು?' ಎಂಬ ಸರಳ ಪ್ರಶ್ನೆಗೆ ಗ್ರಾಹಕರು ಉತ್ತರ ಕಳುಹಿಸಬೇಕು. ಅವರು ಉತ್ತರ ಕಳುಹಿಸುವುದು ಬಿಯರ್ ದೇವರಿಗೆ ಎಂಬುದು ವಿಶೇಷ. ೞಈಛಿಚ್ಟಆಛಿಛ್ಟಿಎಟ ಎಂದು ಸಂಬೋಧಿಸಿ ತಮ್ಮ ಸಂದೇಶಗಳನ್ನು ಟ್ವಿಟ್ಟರ್ ಮೂಲಕ ಕಳುಹಿಸಬೇಕು. ಹೀಗೆ ಕಳುಹಿಸಿದ ಪ್ರತಿಯೊಂದು ಸಂದೇಶವೂ ಒಂದೊಂದು ಎಂಎಲ್ ಬಿಯರ್ ಅನ್ನು ಕಳುಹಿಸುವವರ ಖಾತೆಗೆ ವರ್ಗಾಯಿಸುತ್ತದೆ. ಟ್ವೀಟ್‌ಗಳು ಎಷ್ಟು ಹೆಚ್ಚಾಗುತ್ತವೆಯೋ ಅಷ್ಟೂ ಅಧಿಕ ಬಿಯರ್ ಸಿಗುತ್ತದೆ ಎಂದರ್ಥ.

ಹೀಗಾಗಿ ಅಧಿಕ ಟ್ವೀಟ್ ಮಾಡಿದ ಗ್ರಾಹಕರಿಗೆ ಅದಕ್ಕೆ ಸರಿಸಮನಾದ ಅಳತೆಯ ಬಿಯರ್ ಹೀರುವ ಅವಕಾಶ ಸಿಗಲಿದೆ. ಈ ಸ್ಪರ್ಧೆ ಈಗಾಗಲೇ ಆರಂಭವಾಗಿದ್ದು, ಆಗಸ್ಟ್ 1ರಂದು ಕೊನೆಗೊಳ್ಳಲಿದೆ. ಇದರ ವಿಜೇತರ ಹೆಸರುಗಳನ್ನು ಆ.2ರಂದು ಘೊಷಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT