ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿ ರೇಷ್ಮೆಗೂಡಿಗೆ ದಾಖಲೆ ಬೆಲೆ

Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೊಳಕಾಲ್ಮುರು(ಚಿತ್ರದುರ್ಗ ಜಿಲ್ಲೆ): ರೇಷ್ಮೆ ಸೀರೆ ಹೆಸರಿನೊಂದಿಗೆ ನಂಟು ಹೊಂದಿರುವ ಊರುಗಳಲ್ಲಿ ಒಂದಾದ ಮೊಳಕಾಲ್ಮುರು ತಾಲ್ಲೂಕು ರೇಷ್ಮೆ ಗೂಡು ಉತ್ಪಾದನೆಯಲ್ಲಿಯೂ ಇದೇ ಹಾದಿಯಲ್ಲಿ ಸಾಗುತ್ತಿದೆ.

ಜಿಲ್ಲೆಯಲ್ಲಿ ಮೊಳಕಾಲ್ಮುರು, ಚಳ್ಳ ಕೆರೆ ಮತ್ತು ಹಿರಿಯೂರು ತಾಲ್ಲೂಕಿ ನಲ್ಲಿ ಮುಖ್ಯವಾಗಿ ರೇಷ್ಮೆಗೂಡು ಉತ್ಪಾದಿಸಲಾಗುತ್ತಿದೆ. 3–4 ವರ್ಷಗ ಳಿಂದ ಮೊಳಕಾಲ್ಮುರು ತಾಲ್ಲೂಕಿನಲ್ಲಿ ವ್ಯಾಪಕವಾಗಿ ರೇಷ್ಮೆ ಕೃಷಿ ಅಭಿವೃದ್ಧಿ ಕಾಣುತ್ತಿದ್ದು, ಬಿಳಿಗೂಡು (ಬೈವೋ ಲ್ಟೇನ್‌) ಉತ್ಪಾದನೆಯಲ್ಲಿ ಗಮ ನಾರ್ಹ ಸಾಧನೆ ಮಾಡಿದೆ. ಮೂಲಗಳ ಪ್ರಕಾರ ಮಾಸಿಕ 21 ಸಾವಿರ ಮೊಟ್ಟೆ ಚಾಕಣಿ ಮಾಡಲಾಗುತ್ತಿದ್ದು, 12 ಸಾವಿರ ಕೆ.ಜಿ ಬಿಳಿಗೂಡು ಉತ್ಪಾದನೆ ಆಗುತ್ತಿದೆ.

‘ದೇಶದಲ್ಲಿ ವಾರ್ಷಿಕ 25 ಸಾವಿರ ಮೆಟ್ರಿಕ್‌ ಟನ್‌ ಕಚ್ಚಾ ಬಿಳಿಗೂಡು ರೇಷ್ಮೆಗೆ ಬೇಡಿಕೆಯಿದೆ. ಆದರೆ 16 ಸಾವಿರ ಮೆಟ್ರಿಕ್‌ ಟನ್‌ ಮಾತ್ರ ಉತ್ಪಾ ದನೆಯಾಗುತ್ತಿದ್ದು, 9 ಸಾವಿರ ಮೆಟ್ರಿಕ್‌ ಟನ್‌ ಕೊರತೆಯಿದೆ. ಇಲ್ಲಿಂದ ಕಚ್ಛಾ ರೇಷ್ಮೆಯನ್ನು ವಿವಿಧ ರಾಷ್ಟ್ರಗಳಿಗೆ ಗಾರ್ಮೆಂಟ್ಸ್ ಉದ್ಯಮಕ್ಕೆ ಕಳುಹಿಸ ಲಾಗುತ್ತಿದೆ’ ಎಂದು ರೇಷ್ಮೆ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಕಪನಿಪತಿ ಶಾಸ್ತ್ರಿ ಮಾಹಿತಿ ನೀಡಿದ್ದಾರೆ.

ದೇಶದಲ್ಲಿಯೇ ಕರ್ನಾಟಕ ರೇಷ್ಮೆ ಗೂಡು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಚಿತ್ರದುರ್ಗ ಜಿಲ್ಲೆ ರಾಜ್ಯ ದಲ್ಲಿ 4ನೇ ಸ್ಥಾನದಲ್ಲಿದೆ. ಮೊಳಕಾ ಲ್ಮುರು ಭಾಗದಲ್ಲಿ ಉತ್ಪಾದನೆಯಾ ಗುವ ರೇಷ್ಮೆ ಗೂಡು ಅಂತರರಾಷ್ಟ್ರೀಯ ಗುಣಮಟ್ಟ ಹೊಂದಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಯಿದೆ. ಮಾಮೂಲಿ ದರಕ್ಕಿಂತ ತಾಲ್ಲೂ ಕಿನ ಗೂಡು ಕೆ.ಜಿಗೆ ರೂ।35ರಿಂದ ರೂ।40 ರಷ್ಟು ಹೆಚ್ಚಿನ ದರಕ್ಕೆ ಮಾರಾಟವಾಗು ತ್ತಿದೆ. ಜಿಲ್ಲೆಯಲ್ಲಿ ಮಾಸಿಕ 25 ಸಾವಿರ ಕೆ.ಜಿ ಬಿಳಿಗೂಡು ಉತ್ಪಾದನೆಯಾಗು ತ್ತದೆ. ಶೇ 50ರಷ್ಟು ಮೊಳಕಾಲ್ಮುರು ತಾಲ್ಲೂಕಿನಲ್ಲೇ ಉತ್ಪಾದನೆಯಾಗು ತ್ತಿದೆ ಎಂದರು.

ಪ್ರಸ್ತುತ ಕೆ.ಜಿ ಬಿಳಿಗೂಡು ರೂ।450 ರಿಂದ ರೂ।510ರಷ್ಟಿದೆ. ಕೊಂಡ್ಲಹಳ್ಳಿಯ ಬಿ.ತಿಪ್ಪೇರುರುದ್ರಪ್ಪ ಎಂಬ ರೈತ ರೂ।543 ನಂತೆ  ಮಾರಾಟ ಮಾಡಿದ್ದಾರೆ. ಈಗ ಮಾರಾಟವಾಗುತ್ತಿರುವ ದರ ರಾಜ್ಯದ ರೇಷ್ಮೆಕೃಷಿ ಇತಿಹಾಸದಲ್ಲಿಯೇ ದಾಖಲೆ ದರ. ಮೊಳಕಾಲ್ಮುರು ತಾಲ್ಲೂಕಿನ ಬಿಸಿಲು ವಾತಾವರಣ ನೂಲು ಬಿಚ್ಚಾಣಿ ಕೆಗೆ ಸಹಕಾರಿ. ಜತೆಗೆ ಬೆಳೆಗಾರರು ಆಧುನಿಕ ತಂತ್ರಜ್ಞಾನ ಅಳವಡಿಸಿ ಕೊಂಡಿರುವ ಜತೆಗೆ ‘ತಿರುಗುವ ಚಾಕಿ ಪದ್ಧತಿ’ ಪಾಲಿಸುತ್ತಿರುವುದು ಉತ್ತಮ ಗುಣಮಟ್ಟದ ಗೂಡು ಉತ್ಪಾದನೆಗೆ ಮುಖ್ಯ ಕಾರಣವಾಗಿದೆ ಎನ್ನುತ್ತಾರೆ ಕಪನಿಪತಿ ಶಾಸ್ತ್ರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT