ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳ್ಹಾರ ಗ್ರಾಮದಲ್ಲಿ ವಿಶೇಷ ಅಭಿಯಾನ

Last Updated 23 ಫೆಬ್ರುವರಿ 2011, 8:35 IST
ಅಕ್ಷರ ಗಾತ್ರ

ಯಾದಗಿರಿ: ಸಾಮಾಜಿಕ ಭದ್ರತೆ ಯೋಜನೆಯ ಅಡಿಯಲ್ಲಿ ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನ, ವಿಧವಾ ವೇತನಕ್ಕೆ ಅರ್ಹ ಫಲಾನುಭವಿಗಳ ಆಯ್ಕೆಗೆ ವಡಗೇರಾ ವಿಶೇಷ ತಹ ಸೀಲ್ದಾರ ಇ.ಸತ್ಯನಾರಾಯಣ ನೇತೃತ್ವ ದಲ್ಲಿ ಅಧಿಕಾರಿಗಳು ಶಹಾಪುರ ತಾಲ್ಲೂ ಕಿನ ಬಿಳ್ಹಾರ ಗ್ರಾಮದಲ್ಲಿ ವಿಶೇಷ ಅಭಿಯಾನ ನಡೆಸಿದರು.

ಗ್ರಾಮದ ಮನೆ ಮನೆಗೆ ತೆರಳಿದ ಅಧಿಕಾರಿಗಳ ತಂಡ, ಅರ್ಹ ಫಲಾ ನುವಿಗಳ ಆಯ್ಕೆ ಪ್ರಕ್ರಿಯೆ ನಡೆಸಿತು. ಅಂಗವಿಕಲ ಮಾಶಾಸನದಿಂದ ವಂಚಿತ ರಾದವರ ಹೆಸರು ನೋಂದಾಯಿಸುವ ಮೂಲಕ ಅರ್ಹರಿಗೆ ಸರ್ಕಾರ ಸೌಲಭ್ಯ ದೊರೆಯುವಂತೆ ಮಾಡಲಾಯಿತು.

ಸಂಧ್ಯಾ ಸುರಕ್ಷಾ ಯೋಜನೆಯಡಿ 10 ಫಲಾನುಭವಿಗಳು, ವಿಧವಾ ವೇತನದಲ್ಲಿ ಮೂರು ಫಲಾನುಭವಿ ಗಳನ್ನು ಆಯ್ಕೆ ಮಾಡಲಾಯಿತು. ವಿಶೇಷ ಅಭಿಯಾನ ಫೆ.22 ರವರೆಗೆ ನಡೆಯಲಿದ್ದು, ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ವಿಶೇಷ ತಹಸೀಲ್ದಾರ ಇ. ಸತ್ಯನಾರಾ ಯಣ ತಿಳಿಸಿದರು.

ಈಗಾಗಲೇ ಬಿಳ್ಹಾರ ಗ್ರಾಮದಲ್ಲಿ 139 ಸಂಧ್ಯಾಸುರಕ್ಷ, 11 ವೃದ್ಧಾಪ್ಯ ವೇತನ, 16 ಅಂಗವಿಕಲ ವೇತನ, 19 ವಿಧವಾ ವೇತನ ಫಲಾನುಭವಿಗಳದ್ದು, ಒಟ್ಟು 185 ಫಲಾನುಭವಿಗಳು ಮಾಶಾಸನ ಪಡೆಯುತ್ತಿದ್ದಾರೆ ಎಂದು ಹೇಳಿದರು. ಕೆಲವು ಮಾಶಾಸನಗಳು ರದ್ದಾಗಿರುವುದರಿಂದ ನವೀಕರಣಕ್ಕಾಗಿ ಮತ್ತೆ ಅರ್ಜಿ ಸಲ್ಲಿಸುವಂತೆ ಈ  ಅವರು ಸೂಚನೆ ನೀಡಿದರು.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ. ಮುಮ್ತಾಜ್ ಅಲಿಖಾನ್ ಅವರು ಬಿಳ್ಹಾರ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಲಾಗಿತ್ತು. ಈ ಕುರಿತು ತಕ್ಷಣ ಕಾರ್ಯಪ್ರವೃತ್ತರಾದ ವಿಶೇಷ ತಹಸೀಲ್ದಾರ ಸತ್ಯನಾರಾ ಯಣ, ಅಧಿಕಾರಿಗಳ ತಂಡ ರಚಿಸಿ ವಿಶೇಷ ಅಭಿಯಾನ ಆರಂಭಿಸಿದ್ದಾರೆ. ಗ್ರಾಮಲೆಕ್ಕಾಧಿಕಾರಿ ಅಮೀರಅಲಿ, ರಾಘವೇಂದ್ರ, ಮಲ್ಲಪ್ಪ, ಗ್ರಾಮಸ್ಥ ರಾದ ಮರೆಪ್ಪ, ನಿಂಗಪ್ಪ ಸೇರಿದಂತೆ ಹಲವಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT