ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಗ ಮುರಿದು 1.20 ಲಕ್ಷ ಮೌಲ್ಯದ ಆಭರಣ ಕಳವು

Last Updated 22 ಜೂನ್ 2011, 6:55 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪಟ್ಟಣದ ಆದರ್ಶನಗರದ ಶಿಕ್ಷಕರ ಮನೆಯ ಬೀಗವನ್ನು ಮಂಗಳವಾರ ಹಾಡಹಗಲೇ ಮುರಿದು ಒಳ ನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ರೂ. 1.20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳುವು ಮಾಡಿದ್ದಾರೆ.

ನಾಡನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಡಿ. ಕೃಷ್ಣೇಗೌಡ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕೃಷ್ಣೇಗೌಡ ಅವರು ಶಾಲೆಗೆ ತೆರಳಿದ್ದರು. ಇವರ ಪತ್ನಿ ಮಂಜುಳಾ, ಮಧ್ಯಾಹ್ನ 1.45ಕ್ಕೆ ಮನೆಗೆ ಬೀಗ ಹಾಕಿಕೊಂಡು ಕಿಕ್ಕೇರಿ ಹೋಬಳಿ ಕಲ್ಲನಕಟ್ಟೆ ಗ್ರಾಮದಲ್ಲಿ ಸಂಬಂಧಿಕರೊಬ್ಬರ ಬೀಗರ ಔತಣ ಕೂಟಕ್ಕೆ ತೆರಳಿದ್ದರು. ಮಧ್ಯಾಹ್ನ 3.45ಕ್ಕೆ ಹಿಂದಿರುಗಿದರು. ಅಷ್ಟರಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತು.

ಕಳ್ಳರು ಮನೆಯ ಬೀಗ ಮುರಿದಿದ್ದಾರೆ. ನಂತರ ಇಂಟರ್‌ಲಾಕ್ ಅನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಒಳ ನುಗ್ಗಿದ್ದಾರೆ. ಬೀರುವನ್ನು ಹೊಡೆದು ಹಾಕಿ 57 ಗ್ರಾಂ. ಚಿನ್ನಾಭರಣ, 450 ಗ್ರಾಂ. ಬೆಳ್ಳಿ ಆಭರಣ ಕಳ್ಳತನ ಮಾಡಲಾಗಿದೆ. ಮತ್ತೊಂದು ಕೊಠಡಿಯ ಬೀರು ತೆರೆದು ಅದರಲ್ಲಿದ್ದ 2 ಸಾವಿರ ರೂ. ನಗದು ಕದಿಯಲಾಗಿದೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲಿಸಿತು. ಸಬ್‌ಇನ್ಸ್‌ಪೆಕ್ಟರ್ ಶಿವರಾಜ್ ಆರ್. ಮುಧೋಳ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT