ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂಕನಬೆಟ್ಟ ಜಾತ್ರೆ ರದ್ದು

ಜಾನುವಾರುಗಳಿಗೆ ಕಾಲುಬಾಯಿ ಜ್ವರ
Last Updated 20 ಡಿಸೆಂಬರ್ 2013, 5:18 IST
ಅಕ್ಷರ ಗಾತ್ರ

ಹಿರೀಸಾವೆ: ಹೋಬಳಿಯ ಬೂಕನಬೆಟ್ಟದ ರಂಗನಾಥಸ್ವಾಮಿಯ 83ನೇ ಜಾನುವಾರು ಜಾತ್ರೆಯನ್ನು ತಾಲ್ಲೂಕು ಆಡಳಿತವು ರದ್ದುಪಡಿಸಲಾಗಿದ್ದು, ಈ ಬಗ್ಗೆ ಹೋಬಳಿಯ ರೈತರಲ್ಲಿ ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತವಾಗಿವೆ.

‘ಕಾಲುಬಾಯಿ ಜ್ವರದಿಂದ ಇದುವರೆಗೆ ತಾಲ್ಲೂಕಿನಲ್ಲಿ 107 ರಾಸುಗಳು ಮೃತಪಟ್ಟಿವೆ. ಜಾತ್ರೆಗೆ ರಾಸುಗಳು ರಾಜ್ಯದ ಇತರೆ ಪ್ರದೇಶಗಳಿಂದ ಬರುವುದರಿಂದ ರೋಗವು ಉಲ್ಬಣವಾಗುವ ಸಾಧ್ಯತೆ ಇದೆ. ಆದ್ದರಿಂದ ರಾಸುಗಳ ಜಾತ್ರೆಯನ್ನು ರದ್ದುಪಡಿಸುವುದು ಸೂಕ್ತ’ ಎಂದು ಪಶು ಸಂಗೋಪನೆ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದರು.

‘ಹಿರೀಸಾವೆ ಹೋಬಳಿಯಲ್ಲಿ ಈ ರೋಗವು ನಿಯಂತ್ರಣದಲ್ಲಿ ಇದೆ ಮತ್ತು ರೈತರು ರಾಸುಗಳಿಗೆ ಮುಂಜಾಗ್ರತವಾಗಿ ಲಸಿಕೆಯನ್ನು ಹಾಕಿಸಿರುವುದರಿಂದ ಜಾತ್ರೆ ನಡೆದರೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ಕೆಲವು ರೈತರು ಹೇಳುತ್ತಾರೆ.

ಜಿಲ್ಲಾಧಿಕಾರಿಗಳ ಆದೇಶ ಮತ್ತು ಸ್ಥಳಿಯ ರೈತರ ಪರಿಸ್ಥಿತಿಯನ್ನು ಅರಿತು ತಾಲ್ಲೂಕು ಆಡಳಿತವು ಕ್ರಮ ಕೈಗೊಂಡಿದೆ. ಜಾತ್ರೆ ರದ್ದುಪಡಿಸುವ ಬಗ್ಗೆ ಹಲವು ಬಾರಿ ಅಧಿಕಾರಿಗಳು, ರೈತರು ಮತ್ತು ಜಾತ್ರಾ ಸಮಿತಿಯ ಸಭೆ ನಡೆಸಲಾಗಿದೆ ಎನ್ನುತ್ತಾರೆ ಶಾಸಕ ಸಿ.ಎನ್. ಬಾಲಕೃಷ್ಣ.

‘ಬೂಕನ ಬೆಟ್ಟದ ರಂಗನಾಥಸ್ವಾಮಿಯ ರಥೋತ್ಸವ ಮತ್ತು ಗ್ರಾಮೀಣಾ ಕ್ರೀಡೆಗಳನ್ನು ಪ್ರತಿ ವರ್ಷದಂತೆ ನಡೆಸಲಾಗುವುದು. ಜಾನುವಾರುಗಳನ್ನು ಜಾತ್ರೆಗೆ ಬರಾದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಡಾ.ಎಚ್.ಎಲ್. ನಾಗರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT