ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಹತ್ ಆಭರಣ ಪ್ರದರ್ಶನ ರಮ್ಯಾಭರಣ

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು ಆಭರಣ ಮಾರಾಟಗಾರರ ಸಂಘ (ಜೆಎಬಿ) ಮತ್ತು ‘ದಿ ಆರ್ಟ್ ಆಫ್ ಜುವೆಲರಿ’ ನಿಯತಕಾಲಿಕ ಜಂಟಿಯಾಗಿ ಏ. 15ರಿಂದ 17ರ ವರೆಗೆ ಅರಮನೆ ಮೈದಾನದಲ್ಲಿ ಬೆಸ್ಟ್ ಆಫ್ ಇಂಡಿಯಾ ಆಭರಣ ಪ್ರದರ್ಶನ (ಆಐಒಖ2011)ಏರ್ಪಡಿಸಲಿವೆ. ನಟಿ ರಮ್ಯಾ ಇದರ ಪ್ರಚಾರ ರಾಯಭಾರಿ. ರಾಜ್ಯದ ಸಾಂಸ್ಕೃತಿಕ  ಹಿನ್ನೆಲೆಯನ್ನು ಲಾಸ್ಯಯುತವಾಗಿ ಬಿಂಬಿಸುವ ಇಂದಿನ ಯುವಜನತೆಯ ಆಶೋತ್ತರದ ಪ್ರತಿನಿಧಿಯಾಗಲಿದ್ದಾರೆ.

ಅಕ್ಷಯ ತೃತೀಯದ ಸಂದರ್ಭಕ್ಕೆ ಸರಿಯಾಗಿ ಈ ಪ್ರದರ್ಶನ ನಡೆಯಲಿದೆ.  ಆಭರಣ, ಸಿ. ಕೃಷ್ಣಯ್ಯ ಚೆಟ್ಟಿ ಆ್ಯಂಡ್ ಸನ್ಸ್, ನೀಲಕಂಠ್, ಅರ್ಣವ್ ಸೇರಿದಂತೆ ಬೆಂಗಳೂರಿನ ಮತ್ತು ದೇಶದ ವಿವಿಧೆಡೆಯ 150ಕ್ಕೂ  ಹೆಚ್ಚು ಆಭರಣ ವರ್ತಕರು ಇದರಲ್ಲಿ ಭಾಗವಹಿಸಲಿದ್ದಾರೆ.

ಅಪ್ಪಟ ಚಿನ್ನದ, ವಜ್ರದ, ಅಮೂಲ್ಯ ಮಣಿ, ಹರಳುಗಳಿಂದ ಕೂಡಿದ ಚಿನ್ನದ ಆಭರಣಗಳು, ಬೆಳ್ಳಿ ಆಭರಣಗಳು, ಬೆಳ್ಳಿ ಪರಿಕರಗಳು ಪ್ರದರ್ಶನದ ಆಕರ್ಷಣೆಯಾಗಲಿವೆ. ಇದರೊಂದಿಗೆ ಗ್ರಾಹಕ- ಮಾರಾಟಗಾರರ ಭೇಟಿ ಹಾಗೂ ಹೊಸ ಉತ್ಪನ್ನಗಳ ಬಿಡುಗಡೆಯೂ ಇರುತ್ತದೆ.

ಏಷ್ಯದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾದ ಬೆಂಗಳೂರಲ್ಲಿ ಆಭರಣ ವ್ಯಾಪಾರಕ್ಕೆ ಈ ಪ್ರದರ್ಶನ ವಿಶ್ವಾಸಾರ್ಹ ವೇದಿಕೆ ಒದಗಿಸಲಿದೆ ಎನ್ನುತ್ತಾರೆ ದಿ ಆರ್ಟ್ ಆಫ್ ಜುವೆಲರಿ ನಿರ್ವಾಹಕ ನಿರ್ದೇಶಕರಾದ ಸುಮೇಶ್ ವಧೇರಾ.
 ಬೆಂಗಳೂರು ಅತ್ಯಂತ ಹೆಚ್ಚು ಖರೀದಿ ಸಾಮರ್ಥ್ಯದ ಗ್ರಾಹಕರಿರುವ ಊರು. ಇಲ್ಲಿ ಇಂತಹದೊಂದು ಪ್ರದರ್ಶನದ ಅಗತ್ಯವಿತ್ತು ಎಂದು ಜೆಎಬಿ ಅಧ್ಯಕ್ಷ ಮಹೇಶ್ ಪತಿ ಅಭಿಪ್ರಾಯಪಡುತ್ತಾರೆ.

 ಬೆಂಗಳೂರು ಮಾತ್ರವಲ್ಲ, ದೇಶದ, ವಿದೇಶಗಳ ವಿಶಿಷ್ಟ ಆಭರಣಗಳ ಸಂಗ್ರಹದ ವಿಸ್ತೃತ ಶ್ರೇಣಿಯನ್ನು ಇದು ಒಂದೇ ಛಾವಣಿಯಡಿ ಅನಾವರಣಗೊಳಿಸಲಿದೆ ಎನ್ನುತ್ತಾರೆ ಸಂಚಾಲಕರಾದ ಜಿ.ಆರ್. ಚೇತನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT