ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ದಂಪತಿಯ ಮಹತ್ವದ ಸಾಧನೆ

Last Updated 15 ಜೂನ್ 2011, 19:30 IST
ಅಕ್ಷರ ಗಾತ್ರ

ಕೊಯಮತ್ತೂರು: ಬೆಂಗಳೂರಿನ ದಂಪತಿಯೊಬ್ಬರು ಇಲ್ಲಿ ನಡೆಯುತ್ತಿರುವ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ರ‌್ಯಾಲಿಯಲ್ಲಿ ಪಾಲ್ಗೊಂಡು ಅಚ್ಚರಿಯ ಪ್ರದರ್ಶನ ನೀಡುತ್ತಿದ್ದಾರೆ.

ಸಾಫ್ಟ್‌ವೇರ್ ಎಂಜಿನಿಯರ್ ಸತೀಶ್ ಗೋಪಾಲಕೃಷ್ಣನ್ (36) ಹಾಗೂ ಅವರ ಪತ್ನಿ ಸಂಪರ್ಕ ಸಲಹೆಗಾರ್ತಿ ಸವೇರಾ ಡಿಸೋಜಾ (34) ಅವರು ದಕ್ಷಿಣ ಮೋಟಾರ್ ರ‌್ಯಾಲಿಯಲ್ಲಿ ಕಠಿಣ ಸ್ಪರ್ಧೆ ಎನಿಸಿರುವ ಸಾಮರ್ಥ್ಯ ಪರೀಕ್ಷೆಯ (ಎಂಡ್ಯೂರೆನ್ಸ್) ರೇಸ್ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿ ಮುನ್ನಡೆದಿದ್ದಾರೆ.

ಇದು 2100 ಕಿ.ಮೀ.ರ‌್ಯಾಲಿಯಾಗಿದ್ದು ಮೂರನೇ ದಿನ ಅಂತ್ಯಗೊಂಡಿದೆ. ಮೊದಲ ಸ್ಥಾನದಲ್ಲಿರುವ ಕೆ.ಪ್ರಸಾದ್ ಹಾಗೂ ಮುಸ್ತಾಫ ಅವರಿಗಿಂತ ಕೇವಲ ಮೂರು ಸೆಕೆಂಡರ್ ಅಂತರದಲ್ಲಿ ಹಿಂದೆ ಇದ್ದಾರೆ. ಎರಡನೇ ದಿನ ಮೊದಲ ಸ್ಥಾನದಲ್ಲಿದ್ದರು ಎನ್ನುವುದು ವಿಶೇಷ.

ಈ ವರ್ಷದ ಆರಂಭದಲ್ಲಿ ರೇಸಿಂಗ್ ಅಂಗಳಕ್ಕೆ ಇಳಿದಿರುವ ಸತೀಶ್, `ಇಷ್ಟು ಬೇಗ ಇಷ್ಟೊಂದು ಉತ್ತಮ ಸಾಧನೆ ಮೂಡಿಬರಲಿದೆ ಎಂಬ ನಿರೀಕ್ಷೆ ಇರಲಿಲ್ಲ~ ಎಂದು ಪ್ರತಿಕ್ರಿಯಿಸಿದ್ದಾರೆ.

ಕಾರು ರೇಸ್ ವಿಭಾಗದಲ್ಲಿ ನಾಸಿಕ್‌ನ ಮನೋಜ್ ವೈದ್ಯ ಹಾಗೂ ಉದಯಕುಮಾರ್ (2:45.25) ಮೊದಲ ಸ್ಥಾನದಲ್ಲಿ ಮುನ್ನಡೆದಿದ್ದಾರೆ. ಬೈಕ್ ವಿಭಾಗದಲ್ಲಿ ಪ್ರಮೋದ್ ಜೋಶುವಾ ಅಗ್ರಸ್ಥಾನದಲ್ಲಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT