ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬೆಳಕಿಂಡಿ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

* ಇಂದು ಮಹಾನಗರ ಸಾರಿಗೆ ಎಂಬ ಹೆಸರಿನಲ್ಲಿ ಸಂಚಾರ ಸೇವೆ ನಿರ್ವಹಿಸುತ್ತಿರುವ ಬಿಎಂಟಿಸಿ 1940 ರಲ್ಲಿ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಹೊಂದಿದ್ದ ಬಸ್‌ಗಳ ಸಂಖ್ಯೆ ಕೇವಲ 20.

* ಬೆಂಗಳೂರು ಈಗ ಪ್ರಮುಖ ಕೈಗಾರಿಕಾ ನಗರವೆಂದು ಪ್ರಸಿದ್ಧಿ ಪಡೆದಿದೆ. ಕೇಂದ್ರ ಸರ್ಕಾರದ ಹಲವು ಕಾರ್ಖಾನೆಗಳು ಇಲ್ಲಿವೆ. ಬೆಂಗಳೂರಿನಲ್ಲಿ ಮೊದಲ ಕಾರ್ಖಾನೆ ಅಸ್ತಿತ್ವಕ್ಕೆ ಬಂದಿದ್ದು 1877 ರಲ್ಲಿ. ಇದು ಬೆಂಗಳೂರು ಉಣ್ಣೆ (ಉಲನ್) ಫ್ಯಾಕ್ಟರಿ.

* ಸ್ವಾಮಿ ವಿವೇಕಾನಂದರು 1882 ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದರು. ಅದೇ ವರ್ಷ ಬೆಂಗಳೂರು - ಮೈಸೂರು ನಡುವೆ ರೈಲು ಸಂಚಾರ ಶುರುವಾಗಿತ್ತು.

* ಬಿಹಾರ 1934 ರಲ್ಲಿ ಭೂಕಂಪದಿಂದ ತತ್ತರಿಸಿ ಹೋಗಿತ್ತು. ಆಗ ಬೆಂಗಳೂರಿನಲ್ಲಿ ಭೂಕಂಪ ನಿಧಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು (193* ಫೆಬ್ರುವರಿ 17). ಇದರ ನೇತೃತ್ವ ವಹಿಸಿದ್ದವರು ಬಾಬು ರಾಜೇಂದ್ರ ಪ್ರಸಾದ್, ಇವರು ಸ್ವಾತಂತ್ರ್ಯಾ ನಂತರ ಭಾರತದ ಮೊದಲ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದರು.

* ವಿಜಯಾ ಬ್ಯಾಂಕ್ 2004 ರ ಮಾರ್ಚ್‌ನಲ್ಲಿ ಬೆಂಗಳೂರು ವೀಸಾಕಾರ್ಡ್ ಬಿಡುಗಡೆ ಮಾಡಿತು. ಇದಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಇತ್ತು.

* ಬೆಂಗಳೂರಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರ ಆರಂಭವಾಗಿದ್ದು ಆರಂಭಿಸಿದ್ದು 1999 ರಲ್ಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT