ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು-ಹಾಸನ: ಭರದಿಂದ ಸಾಗಿದ ರೈಲ್ವೆ ಕಾಮಗಾರಿ

Last Updated 28 ಮೇ 2012, 5:15 IST
ಅಕ್ಷರ ಗಾತ್ರ

ಹಿರೀಸಾವೆ:  ಹಾಸನ-ಬೆಂಗಳೂರು ರೈಲ್ವೆ ಮಾರ್ಗದ ಕಾಮಗಾರಿ ಬರದಿಂದ ಸಾಗುತ್ತಿದ್ದು, ಮುಂದಿನ ಮಾರ್ಚ್ ಒಳಗೆ ಈ ಮಾರ್ಗದ ಕಾಮಗಾರಿ ಹಿರೀಸಾವೆಯವರೆಗೆ ಪೂರ್ಣವಾಗುವ ಲಕ್ಷಣಗಳು ಕಾಣುತ್ತಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಳೆದ ಬಜೆಟ್‌ನಲ್ಲಿ ಪಟ್ಟಣದವರೆಗೆ ಮಾರ್ಗ ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡಿ, ಶ್ರವಣಬೆಳಗೊಳದಿಂದ ಹಿರೀಸಾವೆಯವರೆಗೆ ರೈಲ್ವೆ ಸಂಚಾರ ಪ್ರಾರಂಭ ಮಾಡುವ ಭರವಸೆ ನೀಡಿದ್ದವು. 

12 ವರ್ಷಗಳ ಹಿಂದೆ ಹಾಸನ-ಬೆಂಗಳೂರು ರೈಲ್ವೆ ಮಾರ್ಗದ ನಿರ್ಮಾಣಕ್ಕೆ ರೈತರಿಂದ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು ಮತ್ತು ಹಾಸನ-ಶ್ರವಣಬೆಳಗೂಳದವರೆಗೆ ಮಾರ್ಗವನ್ನು ಪೂರ್ಣಗೊಳಿಸಿ, ಕೆಲವು ದಿನಗಳು ರೈಲು ಒಡಾಟ ಸಹ ನಡೆಸಿ ನಂತರ ನಿಲ್ಲಿಸಲಾಗಿದೆ. ಅಂದಿನಿಂದ ಇಲ್ಲಿವರೆಗೆ ಕುಂಟುತ್ತಾ ಸಾಗಿದ್ದ ಕೆಲಸವು ಕಳೆದ ತಿಂಗಳಿನಿಂದ ಬಿರುಸಿನಿಂದ ಸಾಗಿದೆ.

ಎರಡು ವರ್ಷಗಳ ಹಿಂದೆ ಶ್ರವಣಬೆಳಗೊಳ-ಹಿರೀಸಾವೆ ರಸ್ತೆಗೆ ಮೇಲು ಸೇತುವೆ ರಸ್ತೆಯನ್ನು ನಿರ್ಮಾಣ ಮಾಡಿ, ವಾಹನಗಳು ಸಂಚಾರ ಮಾಡುತ್ತಿವೆ.

  ಈ ಹಿಂದೆ ನಿರ್ಮಾಣ ಮಾಡಿದ್ದ ರೈಲ್ವೆ ಏರಿಯ ಕೆಲವು ಭಾಗಗಳಲಿ ಮಣ್ಣು ಕುಸಿದಿದ್ದ ಕಡೆಗಳಿಗೆ ಹೊಸದಾಗಿ ಮಣ್ಣನ್ನು ತುಂಬಲಾಗಿದೆ.

ಜೆಲ್ಲಿ, ಹಳಿಗಳು, ಮತ್ತು ಇತರೆ ಸಾಮಗ್ರಿಗಳನ್ನು ಶೇಖರಣೆ ಮಾಡಿ, ಒಂದು ವಾರದಿಂದ ಕಂಬಿಗಳನ್ನು ಜೋಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT