ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಹುಗಾರಿಕೆ ಪಡೆಗೆ ಇಬ್ರಾಹಿಂ ನೇಮಕ

ಸುದ್ದಿ ಹಿನ್ನೆಲೆ.......
Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ದೇಶದ ಆಂತರಿಕ ಬೇಹುಗಾರಿಕಾ ಪಡೆಗೆ (Intelli­gence Bure­au­-IB) 125 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ಐಪಿಎಸ್ ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸಚಿವ ಸಂಪುಟದ ಆಯ್ಕೆ ಸಮಿತಿಯು ಈ ನೇಮಕ ಅಂತಿಮಗೊಳಿಸಿದೆ.ಸೇವಾ ಹಿರಿತನ ಹೊಂದಿದ್ದ ಮೂವರ ಬದಲಿಗೆ ಇಬ್ರಾಹಿಂ ಅವರ ಹೆಸರನ್ನು ಪರಿಗಣಿಸಿರುವುದು ಮಾತ್ರ ವಿವಾದಕ್ಕೆ ಕಾರಣವಾಗಿದೆ.

ಬ್ರಿಟಿಷರ ಬಳುವಳಿ...

ಬ್ರಿಟಿಷರ ಕಾಲದಿಂದಲೂ `ಬೇಹುಗಾರಿಕೆ ಪಡೆ'ಯ ಮುಖ್ಯಸ್ಥನ ಹುದ್ದೆಗೆ ಮುಸ್ಲಿಂ ಅಧಿಕಾರಿ ನೇಮಿಸುವುದನ್ನು ನಿರ್ಲಕ್ಷಿಸುತ್ತಲೇ ಬರಲಾಗಿದೆ.  1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ  (ಬ್ರಿಟಿಷರ ವಿರುದ್ಧದ ಬಂಡಾಯ) ದಿನದಿಂದಲೂ ಬೇಹುಗಾರಿಕೆಗೆ ಸಂಬಂಧಿಸಿದ ಸೇವೆ ಮತ್ತು ವಿದ್ಯಮಾನಗಳಲ್ಲಿ ಕೆಲ ನಿರ್ದಿಷ್ಟ ಸಮುದಾಯಗಳನ್ನು ದೂರ ಇಡುತ್ತಲೇ ಬರಲಾಗಿತ್ತು. ಸ್ವಾತಂತ್ರ್ಯಾನಂತರದ ವರ್ಷಗಳಲ್ಲೂ ಇದುವರೆಗೂ ಈ ಹುದ್ದೆಗೆ ಮುಸ್ಲಿಂ ಅಧಿಕಾರಿಯ ನೇಮಕ ಸಾಧ್ಯವಾಗಿರಲಿಲ್ಲ.

ಅಧಿಕಾರಾವಧಿ
2013ರ ಜನವರಿ 1ರಿಂದ ಎರಡು ವರ್ಷಗಳ ಕಾಲ ಇವರು `ಐಬಿ' ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ಹೊಸ ವರ್ಷದ ಮೊದಲ ದಿನದಿಂದಲೇ ಸೈಯ್ಯದ್ ಆಸೀಫ್ ಇಬ್ರಾಹಿಂ (59) ಅವರು ಹೊಸ ಹುದ್ದೆ ನಿಭಾಯಿಸಲಿದ್ದಾರೆ.ಮಧ್ಯಪ್ರದೇಶದ ಕೇಡರ್‌ನ 1977ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಇಬ್ರಾಹಿಂ ಅವರು, ಡಿಸೆಂಬರ್ 31ರಂದು ಅಧಿಕಾರದಿಂದ ನಿರ್ಗಮಿಸಲಿರುವ  ಎನ್. ಸಂಧು ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಸಂಧು ಅವರು ಕೂಡ ಈ ಜವಾಬ್ದಾರಿಯುತ ಹುದ್ದೆ ನಿಭಾಯಿಸಿದ ಮೊದಲ ಸಿಖ್ ಆಗಿದ್ದರು.ಇಬ್ರಾಹಿಂ ಅವರು, 1989ರಲ್ಲಿ ದೇಶದ ಮೊದಲ ಮುಸ್ಲಿಂ ಗೃಹ ಸಚಿವರಾಗಿದ್ದ ಮುಫ್ತಿ ಮೊಹಮ್ಮದ್ ಸಯೀದ್ ಅವರ ಆಪ್ತ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಜಾತಿ ಮುಖ್ಯವಲ್ಲ
ಬೇಹುಗಾರಿಕೆ ಪಡೆ (ಐಬಿ) ಸೇರಿದಂತೆ ಇತರ ಯಾವುದೇ ಗುಪ್ತಚರ ಪಡೆಗಳ ಮುಖ್ಯಸ್ಥರಾಗಿ ನೇಮಕಗೊಳ್ಳುವವರ ಜಾತಿ ಯಾವುದು ಎನ್ನುವುದು ಮುಖ್ಯವಾಗುವುದೇ ಇಲ್ಲ. ಅವರೆಲ್ಲ ವೃತ್ತಿಪರ, ದಕ್ಷ ಅಧಿಕಾರಿಗಳು ಆಗಿರುತ್ತಾರೆ. ಜಾತಿ - ಧರ್ಮಗಳ ಎಲ್ಲೆಗಳನ್ನು ಮೀರಿದವರಾಗಿರುತ್ತಾರೆ. ಭದ್ರತಾ ಪಡೆಗಳು ಯಾವತ್ತೂ ಜಾತಿ - ಧರ್ಮ ಮತ್ತಿತರ ಪೂರ್ವಗ್ರಹಗಳಿಂದ ಮುಕ್ತವಾಗಿರುತ್ತವೆ ಮತ್ತು  ಮುಕ್ತವಾಗಿರಲೇಬೇಕು.

ವಿಶೇಷ ಕಾರಣಗಳಿಲ್ಲ
ಸ್ವಾತಂತ್ರ್ಯಾನಂತರವೂ ಇದುವರೆಗೆ ಮುಸ್ಲಿಂರನ್ನು ಈ ಹುದ್ದೆಗೆ ನೇಮಕ ಮಾಡದಿರುವುದಕ್ಕೆ ವಿಶೇಷ ಕಾರಣಗಳೇನೂ ಇಲ್ಲ. ಗುಪ್ತಚರ ಪಡೆಯಲ್ಲಿ ಕೆಲಸ ಮಾಡುವ ಮುಸ್ಲಿಂ ಅಧಿಕಾರಿಗಳ ಸಂಖ್ಯೆ ಸಂಖ್ಯೆ ಕಡಿಮೆ ಇರುವುದೇ ಕಾರಣ ಇರಬಹುದು. ಇಲ್ಲಿ ಸೇವಾ ಹಿರಿತನ ಮತ್ತು ವೃತ್ತಿಪರತೆಯೇ ಮುಖ್ಯ ವಾಗಿ ಪರಿಗಣನೆಗೆ ಬರುತ್ತದೆ. ವೃತ್ತಿಪರತೆ ವಿಷಯದಲ್ಲಿ ಇಬ್ರಾಹಿಂ ದಕ್ಷತೆ ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ.

ಕೋಮು ಬಣ್ಣ ಸಲ್ಲ
ಇಬ್ರಾಹಿಂದ ಅವರ ನೇಮಕದಿಮದ  ನಿರ್ದಿಷ್ಟ ಸಮುದಾಯವೊಂದು ಹೆಮ್ಮೆಪಡುವುದಾಗಲಿ ಇಲ್ಲವೇ ಇತರ ಸಮುದಾಯಗಳಲ್ಲಿ ಅಭದ್ರತೆ ಭಾವನೆ ಕಾಡುವುದು ಸರಿಯಲ್ಲ. `ಐಬಿ' ವ್ಯಕ್ತಿ ಕೇಂದ್ರಿತ ಸಂಘಟನೆಯಲ್ಲ.  ಬೇಹುಗಾರಿಕೆ ಪಡೆಗೆ ಕೋಮು ಬಣ್ಣ ಬಳಿಯುವುದೂ ಮೂರ್ಖತನ.

`ಐಬಿ' ಕಾರ್ಯವೈಖರಿ
ಗುಪ್ತವಾಗಿ ಮಾಹಿತಿ ಕಲೆಹಾಕುವುದು, ಅದನ್ನು ಬೇರೆ, ಬೇರೆ ದೃಷ್ಟಿಕೋನದಿಂದ ಅಧ್ಯಯನ ಮಾಡಿ, ವಿಶ್ಲೇಷಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಪೊಲೀಸರ ವಿವೇಚನೆಗೆ ಬಿಡುವುದು ಬೇಹುಗಾರಿಕೆ ಪಡೆಯ ಪ್ರಾಥಮಿಕ ಕರ್ತವ್ಯ.ಯಾರ ವಿರುದ್ಧವೇ ಆಗಲಿ ಪ್ರಕರಣ ದಾಖಲಿಸಿಕೊಳ್ಳುವ ಇಲ್ಲವೇ ಜನರನ್ನು ವಿಚಾರಣೆಗೆ ಒಳಪಡಿಸುವ ಕೆಲಸವನ್ನು `ಗುಪ್ತಚರ ಪಡೆ' ಮಾಡುವುದಿಲ್ಲ. ಅದಕ್ಕೆ ಅಂತಹ ಅಧಿಕಾರವೂ ಇಲ್ಲ.ಯಾವುದೇ ಜಾತಿಗೆ ಸೇರಿದ ವ್ಯಕ್ತಿಯ ಪೂರ್ವಾಪರ ಮತ್ತು ಆತನ ಕೆಲಸಗಳ ಬಗ್ಗೆ ಮಾಹಿತಿ ಕಲೆಹಾಕಿ ಪರಾಮರ್ಶಿಸಿ ಪೊಲೀಸರಿಗೆ ಹಸ್ತಾಂತರಿಸುವುದು `ಐಬಿ' ಕೆಲಸವಾಗಿರುತ್ತದೆ. ಹೀಗಾಗಿ ಈ ಪಡೆಗೆ ಕೋಮು ಬಣ್ಣ ಬಳಿಯುವುದು ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT