ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾನರ್‌ ಹರಿದ ಪ್ರಕರಣ: ಜೆಡಿಎಸ್‌ ವಿರುದ್ಧ ಆರೋಪ

Last Updated 16 ಸೆಪ್ಟೆಂಬರ್ 2013, 9:42 IST
ಅಕ್ಷರ ಗಾತ್ರ

ದೇವನಹಳ್ಳಿ: ಸಾವಕನಹಳ್ಳಿ ಗ್ರಾಮದಲ್ಲಿ ಬ್ಯಾನರ್  ಹರಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ನಡೆದ ಹಲ್ಲೆ ಮತ್ತು ಗ್ರಾಮದಲ್ಲಿ  ಶಾಂತಿ ಕದಡುವ ಘಟನೆಯ ಹಿಂದೆ ಜಿಲ್ಲಾ ಜೆ.ಡಿ.ಎಸ್‌ ಸಂಘಟನಾ ಕಾರ್ಯ ದರ್ಶಿ ಮುನಿರಾಮಪ್ಪ ಅವರ ಕೈವಾಡ ವಿದೆ ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಸ್‌.ಪಿ.ಮುನಿರಾಜು ಆರೋ ಪಿಸಿದರು.

ಸುದ್ದಿಗೋಷಿ್ಠಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬದ ಶುಭಾಶಯ ಕೋರಲು ಸ್ಥಳೀಯ ಯುವಕರು ಬ್ಯಾನರ್ ಕಟ್ಟಿದ್ದರು. ಆದರೆ ಹಳೆ ದೇ್ವಷ ದಿಂದ ಬಾ್ಯನರ್‌ ಹರಿದು ಹಾಕಲಾಗಿದೆ. ಇದನ್ನು ಪ್ರಶಿ್ನಸಲು ಹೋದ ಕೃಷ್ಣ ಮತು್ತ ಮುನಿಯಪ್ಪ ಅವರನು್ನ ಅವಾಚ್ಯ ಶಬ್ದ ಗಳಿಂದ ನಿಂದಿಸಿ ಇವರ ಮೇಲೆ ಹಲೆ್ಲ ನಡೆಸಲಾಗಿದೆ. ಅಲ್ಲದೆ ದೂರು ನೀಡಲು ಹೋದಾಗ ಪೊಲೀಸ್‌ ಠಾಣೆ ಮುಂದೆ ಯೇ ಹಲೆ್ಲ ನಡೆಸಿದಾ್ದರೆ. ಇಷೆ್ಟಲಾ್ಲ ಬೆಳವಣಿಗೆಗೆ ಸ್ಥಳೀಯ ಮೇಲಾ್ಜತಿ ಯವರ ದೌರ್ಜ ನ್ಯವೇ ಕಾರಣ ಎಂದು ಅವರು ಆರೋಪಿ ಸಿದರು.

ಗಾ್ರಮದಲ್ಲಿ ಯಾವುದೇ ರೀತಿಯ ಶಾಂತಿ ಕದಡುವ ಘಟನೆಗೆ ಅವಕಾಶ ಬೇಡ ಎಂಬ ಕಾರಣಕೆ್ಕ ರಾಜಿ ಸಂಧಾನ ಮಾಡಲು ಪ್ರಯತಿ್ನಸಿದೆ್ದ. ಆದರೂ ವಿನಾ ಕಾರಣ ರಾಜಕೀಯ ದುರುದೇ್ದಶದಿಂದ ಪ್ರಕರಣದಲ್ಲಿ ನನ್ನ ಹೆಸರು ಥಳಕುಹಾಕಿ ಪ್ರತಿಭಟನೆ ನಡೆಸಲಾಗಿದೆ ಎಂದು ದೂರಿದರು.

ಕಾಂಗೆ್ರಸ್‌ ಸಂಘಟನಾ ಕಾರ್ಯದರ್ಶಿ ಗೋಪಾಲಸಾ್ವಮಿ ಮಾತನಾಡಿ, ‘ಜೆ.ಡಿ. ಎಸ್‌ ಮುಖಂಡ ಮುನಿರಾಮಪ್ಪ ಅನೇಕ ಅಪರಾಧಗಳಲ್ಲಿ ಇದ್ದವರು. ಇತ್ತೀಚೆಗೆ ಅವರನ್ನು ರೌಡಿ ಪಟಿ್ಟಯಿಂದ ಕೈಬಿಡ ಲಾಗಿದೆ. ಕಳೆದ ಐದು ವರ್ಷದಲ್ಲಿ ತಾಲೂ್ಲಕಿನ ಪರಿಶಿಷ್ಟರ ಮೇಲೆ ಯಾವು ದೇ ದೌರ್ಜನ್ಯ ಪ್ರಕರಣ ವರದಿಯಾಗಿ ರಲಿಲ್ಲ. ಆದರೆ ಈಗ ಮತ್ತೆ ಕಂಡು ಬಂದಿದೆ. ಇದು ಗಾ್ರಮದಲ್ಲಿ ದಲಿತರನು್ನ ಒಕ್ಕಲೆಬಿ್ಬಸುವ ವ್ಯವಸಿ್ಥತ ಸಂಚು. ಇಡೀ ಪ್ರಕರಣದ ಕುರಿತು ಸಮಗ್ರ ತನಿಖೆ ಯಾಗಬೇಕು’ ಎಂದು ಆಗ್ರಹಿಸಿದರು.

ಕರ್ನಾಟಕ ದಲಿತ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ದೊಡ್ಡ ರಂಗಪ್ಪ ಮಾತನಾಡಿ, ‘ಅಮಾಯಕ ಕೂಲಿಕಾರ್ಮಿಕರನು್ನ ಗಂಭೀರವಾಗಿ ಹಲೆ್ಲ ಮಾಡಿರುವವರನು್ನ ಪೊಲೀಸರ ಸ್ವಯಂ ದೂರು ದಾಖಲಿಸಿ ಬಂಧಿಸ ಬೇಕು’ ಎಂದು ಒತ್ತಾಯಿಸಿದರು.

ಪ್ರಕರಣದಲ್ಲಿ ಹಲೆ್ಲಗೊಳಗಾದ ಕೃಷ್ಣ, ಹರಿಕೃಷ್ಣ, ಮುನಿಯಪ್ಪ ಹಾಗೂ ತಾಲೂ್ಲಕು ಡಿ.ಎಸ್‌.ಎಸ್‌ ಕಾರ್ಯಧ್ಯಕ್ಷ ಎಂ.ಶ್ರೀನಿವಾಸ್‌, ಎಂ.ಪಿ.ಸಿ.ಎಸ್‌ ಅಧ್ಯಕ್ಷ ಚಿಕ್ಕನಾರಾಯಣಸಾ್ವಮಿ, ಮಾಜಿ ಅಧ್ಯಕ್ಷ ರಾಜಶೇಖರ್‌ ಉಪಸಿ್ಥತರಿದ್ದರು.

ಜೆಡಿಎಸ್‌ ಪ್ರತಿಭಟನೆ
ದೇವನಹಳಿ್ಳ: ತಾಲ್ಲೂಕಿನ ಸಾವಕನ ಹಳ್ಳಿಯಲ್ಲಿ ಬಾ್ಯನರ್‌ ಕಿತು್ತಹಾಕಿರುವ ಪ್ರಕರಣಕೆ್ಕ ಸಂಬಂಧಿಸಿದಂತೆ ಕಾಂಗೆ್ರಸ್‌ ವಿರುದ್ಧ ತಾಲೂ್ಲಕು ಜೆ.ಡಿ.ಎಸ್‌ ಮುಖಂ ಡರು ಚಪ್ಪರಕಲು್ಲ (ಬಿ.ಜಿ.ಎಸ್‌ ನಗರ) ಗೇಟ್‌ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿ ಮಾತ ನಾಡಿದ ಜಿಲಾ್ಲ ಜೆಡಿಎಸ್‌ ಸಂಘಟನಾ ಕಾರ್ಯದರ್ಶಿ ಮುನಿರಾಮಪ್ಪ,
ಸಾವಕನಹಳಿ್ಳಯಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮುಖ್ಯ ಸ್ಥಳದಲ್ಲಿ ಕಟ್ಟಿದ್ದ ಬಾ್ಯನರ್‌ ಅನ್ನು ಯಾರೋ ಕಿಡಿಗೇಡಿಗಳು ಕಿತು್ತ ಹಾಕಿ ದಾ್ದರೆ. ಈ ಪ್ರಕರಣದಲ್ಲಿ ಇಬ್ಬರು ಯುವ ಕರ ಮೇಲೆ ಹಲ್ಲೆ ನಡೆದಿದೆ. ಈ ಬಗ್ಗೆ ವಿಶ್ವ ನಾಥಪುರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ, ಹಲ್ಲೆ ಕೋರರನ್ನೇ ರಕ್ಷಿಸಲು ಪೊಲೀಸರು ಮುಂದಾಗಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿ ಗಳ ಬಗೆ್ಗ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಲೂ್ಲಕು ಜೆ.ಡಿ.ಎಸ್‌ ಅಧ್ಯಕ್ಷ ಮುನಿಶಾ್ಯಮೇಗೌಡ, ಪಿ.ಎಲ್‌.ಡಿ ಬಾ್ಯಂಕ್‌ ಅಧ್ಯಕ್ಷ ಮುನಿರಾಜು, ಎಂ.ಪಿ.ಸಿ.ಎಸ್‌ ಮಾಜಿ ಕಾರ್ಯದರ್ಶಿ ಗೋಪಾಲಸಾ್ವಮಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT