ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್: ಆರ್‌ವಿಇಸಿಗೆ ಗೆಲುವು

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌ವಿಇಸಿ ಕಾಲೇಜು ತಂಡ ಇಲ್ಲಿ ನಡೆಯುತ್ತಿರುವ ಎಂ.ಎಸ್. ರಾಮಯ್ಯ ಸ್ಮಾರಕ ರಾಜ್ಯ ಮಟ್ಟದ ಅಂತರ ಕಾಲೇಜುಗಳ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಬಾಲಕರ ವಿಭಾಗದ ಗುರುವಾರದ ಪಂದ್ಯದಲ್ಲಿ 29-23 ಪಾಯಿಂಟ್ಸ್‌ನಿಂದ ಡಾ. ಎಐಟಿ ತಂಡವನ್ನು ಸೋಲಿಸಿತು. ವಿಜಯಿ ತಂಡದ ಸುಜನ್ ಆರು ಪಾಯಿಂಟ್‌ಗಳನ್ನು ಕಲೆ ಹಾಕಿದರು.

ಇತರ ಪಂದ್ಯಗಳಲ್ಲಿ ಎನ್‌ಎಂಐಟಿ 36-18ರಲ್ಲಿ ಆಕ್ಸ್‌ಫರ್ಡ್ ಮೇಲೂ, ಡಿಎಸ್‌ಸಿಇ 44-33ರಲ್ಲಿ ಎಂವಿಐಟಿ ವಿರುದ್ಧವೂ, ಎಂಎಸ್‌ಆರ್‌ಐಟಿ 46-26ರಲ್ಲಿ ಬಿಎಂಎಸ್‌ಐಟಿ ಮೇಲೂ, ಆರ್‌ಎನ್‌ಎಸ್‌ಐಟಿ 48-42ರಲ್ಲಿ ಎಂಎಸ್‌ಆರ್‌ಐಟಿ ವಿರುದ್ಧವೂ ಗೆಲುವು ಸಾಧಿಸಿದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT