ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಗೇಡ್‌ನಲ್ಲಿ ದೇವ ಮೇಳ.....

Last Updated 22 ಮೇ 2012, 19:30 IST
ಅಕ್ಷರ ಗಾತ್ರ

ನಗರದ ಬ್ರಿಗೇಡ್ ರಸ್ತೆಯಲ್ಲಿ ಸ್ವರ್ಗಲೋಕದ ಶಾಪಗ್ರಸ್ತ ದೇವರೆಲ್ಲ ಪ್ರತಿಮೆಗಳಾಗಿ ನಿಂತಿದ್ದಾರೆ..!ಕಾಷ್ಠಕಲೆಯಲ್ಲಿ ದೇವಲೋಕವೇ ಅರಳಿದೆ. ಆನೆ ಸಾಲೊಂದು ಈ ಲೋಕಕ್ಕೆ ಕರೆದೊಯ್ಯಲು ಸಿದ್ಧವಾಗಿದೆ.

ಇದು ಪೂಂಪುಹಾರ್ ಮಳಿಗೆಯ ನೋಟ. ತಮಿಳುನಾಡು ಕರಕುಶಲ ವಸ್ತುಗಳ ಮೇಳ. ಅಪ್ಪಟ ತಂಜಾವೂರು ಶೈಲಿಯಲ್ಲಿರುವ ಲೋಹದ ಪ್ರತಿಮೆಗಳು, ದೀಪ, ದೀಪಸ್ತಂಭ ಹಾಗೂ ಮರದಲ್ಲಿ ಅರಳಿರುವ ಕಲಾಕೃತಿಗಳು ಪ್ರದರ್ಶನ ಹಾಗೂ ಮಾರಾಟಕ್ಕಿವೆ.
ಕಳೆದ 39 ವರ್ಷಗಳಿಂದ ಪ್ರಾಚೀನ ಶೈಲಿಯಲ್ಲಿರುವ ಪ್ರತಿಮೆಗಳ ಮಾರಾಟದಲ್ಲಿ ಪೂಂಪುಹಾರ್ ಹೆಸರುವಾಸಿಯಾಗಿದೆ.

ಈ ಪ್ರದರ್ಶನದ ಸಂದರ್ಭದಲ್ಲಿ ಗ್ರಾಹಕರಿಗೆ ಶೇ. 10ರಷ್ಟು ರಿಯಾಯಿತಿಯೂ ದೊರೆಯುತ್ತದೆ. ಬಹುತೇಕ ಜನರು ಈ ಮೇಳದ ಸಂದರ್ಭದಲ್ಲಿಯೇ ಖರೀದಿಸಲು ಪ್ರಯತ್ನಿಸುತ್ತಾರೆ ಎನ್ನುತ್ತಾರೆ ಪೂಂಪುಹಾರ್‌ನ ಮ್ಯಾನೇಜರ್ ಆರ್. ಶೇಖರ್.
ಇಲ್ಲಿ ಗ್ರಾಹಕರು ಕೊಳ್ಳುವ ಪ್ರತಿ ಖರೀದಿಯ ಲಾಭಾಂಶವೂ ನೇರವಾಗಿ ಕರಕುಶಲಕರ್ಮಿಗೆ ತಲುಪುತ್ತದೆ ಎಂಬ ಭರವಸೆ ಅವರದ್ದು.

ದೇವ ಪ್ರತಿಮೆಗಳು 2700ರಿಂದ ನಾಲ್ಕು ಲಕ್ಷದ ಅರವತ್ತು ಸಾವಿರ ರೂಪಾಯಿವರೆಗಿನ ವಿವಿಧ ಬಗೆಯ ದೇವಾನುದೇವತೆಗಳು ವಿವಿಧ ಅಳತೆಯಲ್ಲಿ ಲಭ್ಯ ಇವೆ.
ಹೆಚ್ಚಿನ ಮಾಹಿತಿಗೆ ಬ್ರಿಗೇಡ್ ರಸ್ತೆಯಲ್ಲಿರುವ ಪೂಂಪುಹಾರ್ ಮಳಿಗೆಗೆ ಭೇಟಿ ನೀಡಬಹುದು. ಮಾಹಿತಿಗೆ: 25880582

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT