ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗತ್ ಸಿಂಗ್ ನೆನಪಿನಲ್ಲಿ ನಾಣ್ಯ

Last Updated 7 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮಶತಮಾನೋತ್ಸವದ ನೆನಪಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಅವರ ಭಾವಚಿತ್ರ ಇರುವ ಐದು ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಚಲಾವಣೆಗೆ ಬಿಡಲಿದೆ.

ಈ ನಾಣ್ಯದ ಒಂದು ಬದಿಯಲ್ಲಿ ಭಗತ್ ಸಿಂಗ್ ಅವರ ಭಾವಚಿತ್ರ ಇರಲಿದೆ. ಭಾವಚಿತ್ರದ ಎಡ ಅಂಚಿನಲ್ಲಿ `ಶಹೀದ್ ಭಗತ್ ಸಿಂಗ್ ಜನ್ಮಶತಾಬ್ದಿ~ ಎಂದು ದೇವನಾಗರಿ ಲಿಪಿಯಲ್ಲಿ, ಬಲಭಾಗದಲ್ಲಿ ಇದೇ ವಾಕ್ಯವನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿರುತ್ತದೆ. ಭಾವಚಿತ್ರದ ಕೆಳಭಾಗದಲ್ಲಿ `1907-2007~ (ಭಗತ್ ಸಿಂಗ್ ಅವರ ಜನನದ ಇಸವಿ ಹಾಗೂ ಅವರು ಜನಿಸಿ ನೂರು ವರ್ಷ ತುಂಬಿದ ಇಸವಿ) ಎಂದು ಬರೆಯಲಾಗಿರುತ್ತದೆ.

ನಾಣ್ಯದ ಇನ್ನೊಂದು ಭಾಗದಲ್ಲಿ ಸಾರನಾಥದ ಅಶೋಕ ಸ್ತಂಭದ ಸಿಂಹದ ಲಾಂಛನ, ಅದರ ಕೆಳಗೆ `ಸತ್ಯಮೇವ ಜಯತೆ~ ಎಂದೂ ಬರೆಯಲಾಗಿದೆ ಎಂದು ಆರ್‌ಬಿಐ ಪ್ರಾದೇಶಿಕ ನಿರ್ದೇಶಕಿ ಉಮಾ ಶಂಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT