ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ಇಳುವರಿ 923ಲಕ್ಷ ಟನ್‌ಗೆ ಇಳಿಕೆ?

1,293 ಲಕ್ಷ ಟನ್‌ ಆಹಾರ ಧಾನ್ಯ ಉತ್ಪಾದನೆ ಅಂದಾಜು
Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಪ್ರಸಕ್ತ ಮುಂಗಾರಿ ನಲ್ಲಿ ಭತ್ತ ಇಳುವರಿ 923 ಲಕ್ಷ  ಟನ್‌ಗೆ ಇಳಿಕೆ ಕಾಣುವ ನಿರೀಕ್ಷೆ ಇದೆ ಎಂದು ಕೃಷಿ ಸಚಿವಾಲಯ ಹೇಳಿದೆ.

ಅಸಮರ್ಪಕ ಮಳೆಯಿಂದ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಭತ್ತದ ಇಳುವರಿ ಕುಸಿತ ಕಂಡಿದೆ. ಆದರೆ, ಒಟ್ಟಾರೆ ಆಹಾರ ಧಾನ್ಯಗಳ ಉತ್ಪಾದನೆ ಕಳೆದ ವರ್ಷಕ್ಕೆ ಹೋಲಿಸಿದರೆ ಅಲ್ಪ ಏರಿಕೆ ಕಾಣುವ ನಿರೀಕ್ಷೆ ಇದ್ದು 1,293 ಲಕ್ಷ ಟನ್‌ಗಳ­ಷ್ಟಾಗಲಿದೆ ಎಂದು ವರದಿ ಹೇಳಿದೆ.2012–13ನೇ ಬೆಳೆ ವರ್ಷದಲ್ಲಿ (ಜೂನ್–ಜುಲೈ) ಒಟ್ಟಾರೆ  927 ಲಕ್ಷ  ಟನ್‌ಗಳಷ್ಟು ಭತ್ತ ಉತ್ಪಾದನೆ ದಾಖಲಾಗಿತ್ತು.

ಪ್ರಸಕ್ತ ಅವಧಿಯಲ್ಲಿ 177 ಲಕ್ಷ ಟನ್‌ ಗಳಷ್ಟು ಮೆಕ್ಕೆ ಜೋಳ, 60 ಲಕ್ಷ ಟನ್‌ಗ ಳಷ್ಟು ದ್ವಿದಳ ಧಾನ್ಯ, 132 ಲಕ್ಷ ಟನ್‌ಗ ಳಷ್ಟು ರಾಗಿ ಉತ್ಪಾದನೆ ಆಗುವ ನಿರೀಕ್ಷೆ ಇದೆ ಎಂದು ಕೃಷಿ ಆಯುಕ್ತ ಜೆ.ಎಸ್. ಸಂಧು ಇಲ್ಲಿ ನಡೆದ ಸಭೆಯಲ್ಲಿ ಹೇಳಿದರು.

­ದೇಶದ ಶೇ 53ರಷ್ಟು ಪ್ರದೇಶದಲ್ಲಿ ಈ ಬಾರಿ ಸಹಜ ಮುಂಗಾರು ಮಳೆಯಾ ಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದಾಖಲೆ ಇಳುವರಿ
ಆಹಾರ ಧಾನ್ಯಗಳ ಒಟ್ಟು ಉತ್ಪಾದನೆ 2011–12ನೇ ಸಾಲಿನ ಮುಂಗಾರಿ­ನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟ­ವಾದ 1,312 ಲಕ್ಷ ಟನ್‌ ತಲುಪಿತ್ತು. ಆದರೆ, ಬರ ಪರಿಸ್ಥಿತಿಯಿಂದಾಗಿ 2012–13ನೇ ಸಾಲಿನಲ್ಲಿ 1,282 ಲಕ್ಷ ಟನ್‌ಗಳಿಗೆ ಕುಸಿದಿತ್ತು. ಆದರೆ, ಈ ವರ್ಷ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ಒಟ್ಟು ಉತ್ಪಾದನೆ 1,293 ಲಕ್ಷ ಟನ್‌ಗಳಿಗೆ ಏರಿಕೆ ಕಾಣ­ಬಹುದು ಎಂದು ಕೃಷಿ ಸಚಿವಾಲಯ ಅಂದಾಜು ಮಾಡಿದೆ. 

ಪ್ರಸಕ್ತ ಸಾಲಿನಲ್ಲಿ ಕೃಷಿ ವಲಯ
ಶೇ 4.8ರಷ್ಟು ಪ್ರಗತಿ ಕಾಣಲಿದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ (ಪಿಎಂಇಎಸಿ) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT