ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಭತ್ತ ಬೆಳೆ ರಕ್ಷಣೆಗೆ ಹರಳು ರೂಪದ ಕೀಟನಾಶಕ'

Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಪ್ರಮುಖ ಬೆಳೆಗಳಲ್ಲೊಂದಾದ ಭತ್ತಕ್ಕೆ ಕಾಂಡಕೊರಕ(ಸುಳಿ ರೋಗ) ಹುಳಗಳ ಸಮಸ್ಯೆ ತೀವ್ರವಾಗಿದೆ.

ಇದರಿಂದಾಗಿಯೇ ಸಾಕಷ್ಟು ಕೃಷಿಕರು ಕಡಿಮೆ ಇಳುವರಿ ಪಡೆಯುವಂತಾಗಿದೆ ಎಂದು ಡ್ಯುಪಾಂಟ ಕಂಪೆನಿಯ ದಕ್ಷಿಣ ಏಷ್ಯಾ ಮಾರುಕಟ್ಟೆ ನಿರ್ದೇಶಕ ಎಲ್.ಗಿರಿಧರನ್ ಹೇಳಿದರು.

ಕಾಂಡಕೊರಕ ಹುಳು ನಿವಾರಿಸಲೆಂದೇ ಫೆರ್ಟೆರಾ ಹರಳು ರೂಪದ ಕೀಟನಾಶಕವನ್ನು ಪರಿಚಯಿಸಲಾಗಿದೆ. ಇದು ಡೈಅಮೈಡ್ ಗುಂಪಿಗೆ ಸೇರಿದ್ದು, ರೈನಕ್ಸಿಪಿಯರ್ ಎಂಬ ಮೂಲವಸ್ತು ಇದರಲ್ಲಿದೆ. ಭತ್ತ ನಾಟಿಯ 15ರಿಂದ 30 ದಿನಗಳ ನಡುವೆ ಈ ಹರಳು ಉಪಯೋಗಿಸಬಹುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಕಂಪೆನಿ ದೇಶದ 3 ಕಡೆ 6 ತಯಾರಿಕಾ ಘಟಕ ಹೊಂದಿದೆ. ಹೈದರಾಬಾದ್‌ನಲ್ಲಿ ಡ್ಯುಪಾಂಟ ಜ್ಞಾನ ಕೇಂದ್ರ, ಪುಣೆಯಲ್ಲಿ ಸಂಶೋಧನಾ ಕೇಂದ್ರ ಇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT