ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಳಾರೆ ಬಾಣಸಿಗರು

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಅಡುಗೆ ಮಾಡುವುದೆಂದರೆ ಸುಮ್ಮನೆ ಅಲ್ಲ, ಸಮಪಾಕದೊಂದಿಗೆ ಹದವಾದ ಹಿತವಾದ ರುಚಿ ನೀಡುವ ಈ  ನಳಪಾಕದ ಕಲೆ ಎಲ್ಲರಿಗೂ ಸುಲಭವಾಗಿ ಒಲಿಯುವುದಿಲ್ಲ. ಇಂತಹ ವಿಶೇಷ ಕಲೆಯನ್ನು ಗುರುತಿಸುವುದಕ್ಕೆಂದೇ ವಿಭಿನ್ನ ಕಾರ್ಯಕ್ರಮವೊಂದು ಇತ್ತೀಚೆಗೆ ನಡೆಯಿತು.

ತಮ್ಮ ಪಾಕಶಾಲೆಯ ಕೌಶಲ್ಯ ಪ್ರದರ್ಶಿಸಲು ಶೆಫ್‌ಗಳಿಗೆ ಏರ್ಪಡಿಸಿದ್ದ `ಯಂಗ್ ಶೆಫ್ ಕಲಿನರಿ ಚಾಲೆಂಜ್ 2011~ ಎಂಬ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಯುವ ಶೆಫ್‌ಗಳಿಗೆಂದೇ ಹಮ್ಮಿಕೊಂಡಿದ್ದು ವಿಶೇಷವಾಗಿತ್ತು.

ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಮಾಲ್‌ನಲ್ಲಿ ನಳಪಾಕದ ಕಾರ್ಯಕ್ರಮ ನಡೆದದ್ದು ಇತ್ತೀಚೆಗೆ. ಮೂರು ರೀತಿಯ ತಿನಿಸನ್ನು ತಯಾರಿಸುವ ಸ್ಪರ್ಧೆ  ಪ್ರತಿ ಶೆಫ್‌ಗಳ ಎದುರಲ್ಲಿತ್ತು. ವಿಶಿಷ್ಟ ಶೈಲಿಯ ಬಗೆಬಗೆ ಅಡುಗೆಗಳು ಅಲ್ಲಿ ತಯಾರಾಗಿದ್ದವು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆಂದೇ ಫುಡ್ ಲವರ್ಸ್‌ ಕ್ಲಬ್ ಮತ್ತು ಮೆಟ್ರೊ ಕ್ಯಾಶ್ ಅಂಡ್ ಕ್ಯಾರಿ ಜೊತೆಗೂಡಿ ಲಲಿತ್ ಹೋಟೆಲ್‌ನಲ್ಲಿ ಕಾರ್ಯಕ್ರಮ ಏರ್ಪಡಿಸಿತ್ತು.

ಒಟ್ಟು 25 ಶೆಫ್‌ಗಳು ತಮ್ಮ ಕೈಚಳಕವನ್ನು ಪ್ರದರ್ಶಿಸಿ ಅಲ್ಲಿದ್ದವರಿಂದ ಪ್ರಶಂಸೆ ಗಳಿಸಿದರು. ಈ ಹಿಂದೆ ಎಷ್ಟೋ ಅಡುಗೆ ಸ್ಪರ್ಧೆಗಳನ್ನು ನೋಡಿದ್ದೆ. ಅದರಲ್ಲಿ ಅನುಭವಿ ಶೆಫ್‌ಗಳಿರುತ್ತಿದ್ದರು. ಆದರೆ ಚಿಕ್ಕ ವಯಸ್ಸಿಗೇ ಈ ರೀತಿ ಅಡುಗೆ ಕಲೆಯಲ್ಲಿ ಕುಶಲತೆ ಅಳವಡಿಸಿಕೊಂಡಿರುವುದು ಆಶ್ಚರ್ಯಕರ ಎಂದವರು ಲಲಿತ್ ಅಶೋಕ್‌ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಸ್ಯಾಮ್‌ಸನ್.

ತಿನ್ನುವುದು ಒಂದು ಅಭ್ಯಾಸ. ಆದರೆ ತಿನ್ನುವ ಆಹಾರವನ್ನು ಅಚ್ಚುಕಟ್ಟಾಗಿ ತಯಾರಿಸುವುದು ನೈಜ ಕಲೆ. ಅದು ಎಲ್ಲರಿಗೂ ಸಿದ್ಧಿಸುವುದಿಲ್ಲ. ಆದರೆ, ಆ ಕಲೆಯನ್ನು ಈ ಶೆಫ್‌ಗಳು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ ಎಂದ ಫುಡ್ ಕ್ಲಬ್‌ನ ಕೃಪಾಲ್ ಅಮನ್ನಾ, ಶೆಫ್‌ಗಳನ್ನು ಗೌರವಿಸಲೆಂದೇ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮದಲ್ಲಿದ್ದ ಶೆಫ್‌ಗಳಿಗಂತೂ ಉತ್ಸಾಹವೋ ಉತ್ಸಾಹ. ಸ್ಪರ್ಧೆಯಲ್ಲಿ ಯಾರು ವಿಜೇತರಾಗಿರಬಹುದು ಎಂಬ ಕೌತುಕ. ಯಾರೇ ಗೆಲ್ಲಲಿ, ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಮಾತ್ರ ನಿಜಕ್ಕೂ ಸಂತೋಷ ತಂದಿತ್ತು ಎನ್ನುವುದು ಎಲ್ಲಾ ಸ್ಪರ್ಧಿಗಳ ಮಾತಾಗಿತ್ತು.

 ಫುಡ್ ಲವರ್ಸ್‌ ಕ್ಲಬ್‌ನಿಂದ ಬಂದ ಇ-ಮೇಲ್ ನೋಡಿ ನಿಜಕ್ಕೂ ಆಶ್ಚರ್ಯವಾಗಿತ್ತು. ಅದಕ್ಕೇ ತಕ್ಷಣ ಸ್ಪರ್ಧೆಗೆ ನೋಂದಾಯಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ನಮ್ಮ ಹೋಟೆಲನ್ನು ಪ್ರತಿನಿಧಿಸಿದ್ದು ಹೆಮ್ಮೆ ಎನಿಸುತ್ತಿದೆ ಎಂದು ಸಂತಸಗೊಂಡರು ಶೆರಟಾನ್ ಹೋಟೆಲ್‌ನ ರಾಜೀವ್ ಶರ್ಮಾ.
ಅಂತೂ ಇಂತೂ ಕೊನೆಗೆ ಸ್ಪರ್ಧೆಯಲ್ಲಿ ಗೆದ್ದ ಮೂವರ ಹೆಸರನ್ನು ಘೋಷಿಸಲಾಯಿತು.

ಮೊದಲನೇ ಸ್ಥಾನಕ್ಕೆ ಚಿನ್ನದ ಪದಕ, ಎರಡನೇ ಸ್ಥಾನಕ್ಕೆ ಬೆಳ್ಳಿ ಪದಕ ಮತ್ತು ಮೂರನೇ ಸ್ಥಾನಕ್ಕೆ ಕಂಚಿನ ಪದಕ ನೀಡಿ ಗೌರವಿಸಲಾಯಿತು.

ಎಂ.ಜಿ.ರೋಡ್ ತಾಜ್ ವಿವಂತಾ ಹೋಟೆಲಿನ ಪುಷ್ಪೇಂದರ್ ಯಾದವ್‌ಗೆ ಚಿನ್ನದ ಪದಕ ಲಭಿಸಿತು. ಅದೇ ರೀತಿ ವೈಟ್‌ಫೀಲ್ಡ್‌ನಲ್ಲಿನ ತಾಜ್ ವಿವಂತಾ ಹೋಟೆಲಿನ ಅರುಣ್ ಆರ್‌ಜಿಗೆ ಬೆಳ್ಳಿ ಪದಕ ಮತ್ತು ದಿ ಪಾರ್ಕ್ ಹೋಟೆಲ್‌ನ ವಿಘ್ನೇಶ್‌ಗೆ ಕಂಚಿನ ಪದಕದ ಗೌರವ ಸಂದಿತು.
್ಢ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT