ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತವಿನ್ನು ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ಹೊಂದಿದ ದೇಶ

Last Updated 23 ಜನವರಿ 2012, 6:00 IST
ಅಕ್ಷರ ಗಾತ್ರ

ಮಾಸ್ಕೊ (ಐಎಎನ್ಎಸ್) : ರಷ್ಯವು ಅಣು ಶಕ್ತಿ ಚಾಲಿತ ತನ್ನ ಕೆ-152  ನೆರ್ಪಾ ಜಲಾಂತರ್ಗಾಮಿ ಯುದ್ಧ ನೌಕೆಯನ್ನು ಭಾರತದ ನೌಕಾ ಪಡೆಗೆ ಹಸ್ತಾಂತರಿಸಿದೆ ಎಂದು ಆರ್ ಐ ಎ ನೋವಸ್ಟಿಯ ವರದಿಗಾರ ಸೋಮವಾರ ವರದಿ ಮಾಡಿದ್ದಾರೆ.

ಒಟ್ಟು 900 ದಶಲಕ್ಷ ಡಾಲರ್ ಮೊತ್ತದ ಒಪ್ಪಂದದ ಯೋಜನೆಯ ಅಂಗವಾಗಿ ಈ ಜಲಾಂತರ್ಗಾಮಿಯನ್ನು ಭಾರತೀಯ ನೌಕಾಪಡೆಗೆ 10 ವರ್ಷಗಳ ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಈ ನೌಕೆಯನ್ನು ಐಎನ್ಎಸ್ ಚಕ್ರ ಎಂದು ಪುನರ್ ನಾಮಕರಣ ಮಾಡಲಾಗಿದೆ.

ಜಲಾಂತರ್ಗಾಮಿ ಯುದ್ಧ ನೌಕೆಯ ಹಸ್ತಾಂತರ ಪ್ರಕ್ರಿಯೆಯ ಸಮಾರಂಭವು  ರಷ್ಯದ ಪೂರ್ವ ಪ್ರೈಮೋರ್ ಪ್ರದೇಶದ ತೀರದಲ್ಲಿ ನಡೆದಿದೆ. ರಷ್ಯದ ಜಲಾಂತರ್ಗಾಮಿ ನೌಕೆಯ ಚಾಲಕ ಸಿಬ್ಬಂದಿ ಭಾರತದ ನೌಕಾ ಪಡೆಯ ಸಿಬ್ಬಂದಿಗೆ ನೆರ್ಪಾ ನೌಕೆಯನ್ನು ಚಾಲನೆ ಮಾಡುವ ಕುರಿತು ಪೆಸಿಫಿಕ್ ಸಾಗರದಲ್ಲಿ ತರಬೇತಿ ನೀಡಿದ್ದಾರೆ.

ಜಲಾಂತರ್ಗಾಮಿ ನೌಕೆಯ ಹಸ್ತಾಂತರ ಪ್ರಕ್ರಿಯೆಯ ಸಮಾರಂಭದಲ್ಲಿ ರಷ್ಯದಲ್ಲಿನ ಭಾರತದ ರಾಯಭಾರಿ ಅಜಯ್ ಮಲ್ಹೋತ್ರಾ, ಹಾಗೂ ರಷ್ಯದ ಸೇನೆಯ ಹಿರಿಯ  ಅಧಿಕಾರಿಗಳು ಭಾಗವಹಿಸಿದ್ದರು.

ಈ ಜಲಾಂತರ್ಗಾಮಿ ನೌಕೆಯು ಗರಿಷ್ಠ 30 ನಾಟಿಕಲ್ ಮೈಲಿ ದೂರ ಸಾಗುವ ಸಾಮರ್ಥ್ಯ ಹೊಂದಿದೆ. ಗರಿಷ್ಠ 600 ಮೀಟರ್ ಆಳದಲ್ಲಿ ಕಾರ್ಯ ನಿರ್ವಹಿಸುವ ಈ ಯುದ್ಧ ನೌಕೆಯಲ್ಲಿ 73 ಜನ ಸಿಬ್ಬಂದಿ 100 ದಿನಗಳ ಕಾಲ ಇರಬಹುದಾಗಿದೆ. ಇದರಲ್ಲಿ 533 ಮತ್ತು 650 ಮಿಮಿ ವ್ಯಾಸದ ನಳಿಕೆಯ  ತಲಾ ನಾಲ್ಕು ನೌಕಾ ಸ್ಫೋಟಕಗಳನ್ನು ಅಳವಡಿಸಲಾಗಿದೆ.

ಇದರೊಂದಿಗೆ ಅಮೆರಿಕ, ರಷ್ಯ, ಫ್ರಾನ್ಸ್, ಬ್ರಿಟನ್ ಮತ್ತು ಚೈನಾ ದೇಶಗಳ ನಂತರ ಭಾರತವು ಅಣು ಶಕ್ತಿ ಚಾಲಿತ ಜಲಾಂತರ್ಗಾಮಿ ಯುದ್ಧ ನೌಕೆಯನ್ನು ಹೊಂದಿದ ಆರನೇ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT