ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ವಾಹನ ಸಂಚಾರಕ್ಕೆ ನಲುಗಿದ ರಸ್ತೆ...

Last Updated 18 ಡಿಸೆಂಬರ್ 2013, 4:40 IST
ಅಕ್ಷರ ಗಾತ್ರ

ಮುಂಡರಗಿ: ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸರಕುಗಳನ್ನು ಹೇರಿಕೊಂಡು ಸಂಚರಿಸುತ್ತಿರುವ ವಿಪರೀತ ವಾಹನ ಸಂಚಾರ ಹಾಗೂ ನಿಯಮಿತವಾಗಿ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳದೆ ಇರುವುದರಿಂದ ತಾಲ್ಲೂಕಿನ ಕಲಕೇರಿ, ಬೀಡನಾಳ ಹಾಗೂ ಗಂಗಾಪುರ ರಸ್ತೆ ಗಳು ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸವಾರರು ಸಂಚರಿಸಲು ನಿತ್ಯ ಹರಸಾಹಸ ಪಡು ವಂತಾಗಿದೆ.

ತಾಲ್ಲೂಕಿನ ಗಂಗಾಪುರ ಗ್ರಾಮದ ಬಳಿ ಇರುವ ಖಾಸಗಿ ಸಕ್ಕರೆ ಕಾರ್ಖಾ ನೆಯು ಈಗ ಭರದಿಂದ ಕಬ್ಬು ಅರೆ ಯಲು ಪ್ರಾರಂಭಿಸಿದ್ದು, ನಿತ್ಯ ದೊಡ್ಡ ದೊಡ್ಡ ಲಾರಿ, ಎರಡು ಟ್ರೈಲರ್‌ ಒಳಗೊಂಡಿರುವ  ಟ್ರ್ಯಾಕ್ಟರ್‌ ಮೊದ ಲಾದ ಹಲವಾರು ಬೃಹತ್‌ ವಾಹನ ಗಳು ಭಾರಿ ಪ್ರಮಾಣದ ಕಬ್ಬನ್ನು ಹೇರಿಕೊಂಡು ಸಕ್ಕರೆ ಕಾರ್ಖಾ ನೆಗೆ ಬರುತ್ತಿವೆ. 

ಮೊದಲೇ ಹಾಳಾಗಿ ಹೋಗಿದ್ದ ರಸ್ತೆಗಳು ಈಗ ಭಾರಿ ವಾಹನ ಸಂಚಾರದಿಂದಾಗಿ ಮತ್ತಷ್ಟು ಹಾಳಾಗಿದ್ದು, ವಾಹನ ಸವಾರರು ಸರ್ಕಸ್‌ ಮಾಡುತ್ತಾ ರಸ್ತೆ ಮೇಲೆ ಸಂಚರಿಸುವಂತಾಗಿದೆ.

ತಾಲ್ಲೂಕಿನ ಕೊರ್ಲಹಳ್ಳಿ, ಗಂಗಾ ಪುರ, ಶೀರನಹಳ್ಳಿ, ಶಿಂಗಟಾಲೂರ, ಹಮ್ಮಿಗಿ ಮೊದಲಾದ ಗ್ರಾಮಗಳ ನದಿ ದಂಡೆಯ ಮೇಲೆ ಲೋಕೋಪಯೋಗಿ ಇಲಾಖೆಯವರು ತುಂಗಭದ್ರಾ ನದಿಯ ಮರಳನ್ನು ಸಂಗ್ರಹಿಸಿ ಮಾರಾಟ ಮಾಡಲು ಗುತ್ತಿಗೆದಾರರಿಗೆ ಗುತ್ತಿಗೆ ನೀಡಿರುವುದರಿಂದ ಮರಳು ಸಾಗಿಸುವ ವಾಹನಗಳ ಸಂಚಾರವೂ ಇಲ್ಲಿ ವಿಪರೀತ ವಾಗಿರುತ್ತದೆ. ಈ ಎಲ್ಲ ಕಾರಣಗಳಿಂದ ಇಲ್ಲಿಯ ರಸ್ತೆಗಳು ಸಂಪೂರ್ಣವಾಗಿ ಕಿತ್ತುಹೋಗಿವೆ.

ಭಾರಿ ವಾಹನಗಳ ಸಂಚಾರದಿಂದ ರಸ್ತೆಗಳಿಗೆ ಹಾಕಲಾಗಿದ್ದ ಡಾಂಬರ್‌ ಕಿತ್ತುಹೋಗಿದ್ದು, ರಸ್ತೆಯ ಮೇಲೆಲ್ಲ ಆಳವಾದ ಗುಂಡಿಗಳು ನಿರ್ಮಾಣ ವಾಗಿವೆ. ಮುಂಡರಗಿಯಿಂದ ಒಳ ಭಾಗದಲ್ಲಿರುವ ಬೀಡನಾಳ ಮಾರ್ಗ ವಾಗಿ ಬೇರೆ ಬೇರೆ ಇಲಾಖೆಗಳ ವಾಹನ ಗಳಾಗಲಿ, ವಿವಿಧ ಹಂತಗಳ ಜನಪ್ರತಿ ನಿಧಿಗಳ ವಾಹನಗಳಾಗಲಿ ಸಂಚರಿಸು ವುದು ತುಂಬಾ ವಿರಳ. ಹೀಗಾಗಿ ಹಾಳಾಗಿರುವ ರಸ್ತೆಗಳು ಅವರ ಗಮನಕ್ಕೆ ಬರುತ್ತಿಲ್ಲ ಮತ್ತು ದುರಸ್ತಿ ಗೊಳ್ಳುತ್ತಿಲ್ಲ ಎಂದು ಜನ ಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

ಬೀಡನಾಳ ಮತ್ತು ಕೊರ್ಲಹಳ್ಳಿ ರಸ್ತೆಯ ಮಧ್ಯದಲ್ಲಿ ಈಗಾಗಲೆ ಹಲ ವಾರು ಸಣ್ಣ ಪುಟ್ಟ ವಾಹನ ಅಪಘಾತ ಗಳ ಸಂಭವಿಸಿದ್ದು, ಭಾರಿ ಸರಕು ಹೇರಿಕೊಂಡು ಸಂಚರಿಸುವ ವಾಹನ ಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
‘ಕಲಕೇರಿ, ಬೀಡನಾಳ ಕೊರ್ಲಹಳ್ಳಿ ರಸ್ತೆ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಹಾಳಾಗಿ ಹೋಗಿದ್ದು, ಅವುಗಳನ್ನು ದುರಸ್ತಿಗೊ ಳಿಸುವ ಕುರಿತಂತೆ ಲೋಕೋಪಯೋಗಿ ಇಲಾಖೆಯು ತಕ್ಷಣ ಕ್ರಮ ಕೈಗೊಳ್ಳ ಬೇಕು.

ಇಲ್ಲದಿದ್ದಲ್ಲಿ ಮುಂಬರುವ ಜಿಲ್ಲಾ ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗು ವುದು’ ಎಂದು ಹಮ್ಮಿಗಿ ಜಿಲ್ಲಾ ಪಂಚಾಯ್ತಿ ಸದಸ್ಯ ಹೇಮಗಿರಿಶ ಹಾವಿ ನಾಳ ಎಚ್ಚರಿಸಿದರು.

ಹಾಳಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಲೋಕೋಪ ಯೋಗಿ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದು, ಅವರು ರಸ್ತೆ ದುರಸ್ತಿಗೊಳಿಸುವ ಬದಲಾಗಿ ಇಲ್ಲಸಲ್ಲದ ಸಬೂಬುಗಳನ್ನು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ. ತಕ್ಷಣ ರಸ್ಥೆ ದುರಸ್ತಿ ಕಾರ್ಯಕೈಗೊಳ್ಳದಿದ್ದಲ್ಲಿ ಲೋಕೋಪಯೋಗಿ ಇಲಾಖೆಯ ಕಚೇರಿ ಎದುರು ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಬೀಡನಾಳ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT