ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪ : ಮೃತರ ಸಂಖ್ಯೆ 238ಕ್ಕೆ ಏರಿಕೆ

Last Updated 25 ಸೆಪ್ಟೆಂಬರ್ 2013, 11:08 IST
ಅಕ್ಷರ ಗಾತ್ರ

ಕರಾಚಿ (ಪಿಟಿಐ): ಪಾಕಿಸ್ತಾನದ ನೈರುತ್ಯ ಭಾಗದಲ್ಲಿ ಮಂಗಳವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸತ್ತವರ ಏರಿಕೆಯಾಗಿದ್ದು, ಇದುವರೆಗೆ 238 ಮಂದಿ ಸಾವನ್ನಪ್ಪಿದ್ದಾರೆ ಎಂದು ಬಲೂಚಿಸ್ತಾನ್ ಪ್ರಾಂತ್ಯದ ಸರ್ಕಾರದ ವಕ್ತಾರರು ಬುಧವಾರ ತಿಳಿಸಿದ್ದಾರೆ.

ಬಲೂಚಿಸ್ತಾನದ ಆರೂ ಜಿಲ್ಲೆಗಳಲ್ಲಿ ಭೂಮಿ ಕಂಪಸಿದ್ದು, ಆವಾರನ್ ಜಿಲ್ಲೆಯ ಮೇಲೆ ಭೂಕಂಪನದ ಪ್ರಭಾವ ತೀಕ್ಷ್ಣವಾಗಿದೆ ಎಂದು ಅವರು ತಿಳಿಸಿದರು.

ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಮಂಗಳವಾರ ಸ್ಥಳೀಯ ಕಾಲಮಾನ ಸಂಜೆ 4.29ಕ್ಕೆ  ಭೂಕಂಪನ ಸಂಭವಿಸಿತ್ತು.ಬಲೂಚಿಸ್ತಾನ್ ಸರ್ಕಾರವು ಭೂಕಂಪ ಪೀಡಿತ ಜಿಲ್ಲೆಗಳಲ್ಲಿ ತುರ್ತುಪರಿಸ್ಥಿತಿ ಘೋಷಿಸಿದೆ. ಸೇನಾ ಸಿಬ್ಬಂದಿ ಮತ್ತು ಇತರೆ ರಕ್ಷಣಾ ಪಡೆಗಳ ನೆರವಿನಿಂದ ರಕ್ಷಣಾ ಕಾರ್ಯ ಮುಂದುವರಿದಿದೆ.

ಪಾಕ್ ಸೇನೆಯು ಬುಧವಾರ 600ಕ್ಕೂ ಹೆಚ್ಚು ಸೈನಿಕರನ್ನು ನೆರವಿಗಾಗಿ ಕಳುಹಿಸಿದ್ದು, ಒಟ್ಟು 900 ಸೈನಿಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವುದಾಗಿ ಸೇನಾ ಮೂಳಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT