ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ಥಿರ ಕಕ್ಷೆಗೆ `ಜಿಸ್ಯಾಟ್-7'

Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು (ಐಎಎನ್‌ಎಸ್):  ರಾಷ್ಟ್ರದ ಮೊತ್ತಮೊದಲ ಸೇನಾ ಉಪಗ್ರಹ `ಜಿಸ್ಯಾಟ್-7'ನ್ನು ಬುಧವಾರ ಯಶಸ್ವಿಯಾಗಿ ಭೂಸ್ಥಿರ ಕಕ್ಷೆಗೆ ಸೇರಿಸಲಾಗಿದೆ.
185 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ  ಈ ಬಹುಬ್ಯಾಂಡ್ ಸಂವಹನ ಉಪಗ್ರಹ `ಜಿಸ್ಯಾಟ್-7'ನ್ನು ಹಾಸನದಲ್ಲಿರುವ ಉಪಗ್ರಹ ನಿಯಂತ್ರಣ ಕೇಂದ್ರದ ತಜ್ಞರು 36 ಸಾವಿರ ಕಿ.ಮೀ ಎತ್ತರದಲ್ಲಿ ಇರುವ ಭೂಸ್ಥಿರ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದರು ಎಂದು ಇಸ್ರೊ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ) ತಿಳಿಸಿದೆ.

ಈ ಉಪಗ್ರಹವು ಅತ್ಯಧಿಕ ಕಂಪನದ  ಹೆಲಿಕ್ಸ್ ಆ್ಯಂಟೆನಾ, ನಾಲ್ಕು ಟ್ರ್ಯಾನ್ಸ್‌ಪಾನ್‌ಡರ್‌ಗಳನ್ನು ಹೊಂದಿದೆ. ಅಲ್ಲದೆ 108 ಆ್ಯಂಪಿಯರ್-ಹವರ್ ಲಿಥಿಯಮ್ ಅಯಾನ್ ಬ್ಯಾಟರಿ ಅಳವಡಿಸಿರುವುದರಿಂದ ಗ್ರಹಣದ ಸಂದರ್ಭದಲ್ಲಿಯೂ  ಕಾರ್ಯ ನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿದೆ.

ಈ ಉಪಗ್ರಹವು ನೌಕಾಪಡೆಗೆ ಉತ್ತಮ ಸಂವಹನ ಸೇವೆಯನ್ನು ನೀಡುವುದರಿಂದ ವಿದೇಶಿ ಉಪಗ್ರಹ ಇನ್‌ಮಾರ್‌ಸ್ಯಾಟ್ ಅವಶ್ಯಕತೆ ಇರುವುದಿಲ್ಲ ಎಂದು ರಕ್ಷಣಾ ತಜ್ಞರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT