ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಮಾನ್ಯತೆ: ಹರ್ಷ

Last Updated 4 ಅಕ್ಟೋಬರ್ 2012, 18:30 IST
ಅಕ್ಷರ ಗಾತ್ರ

ಮಂಗಳೂರು:  ದೇಶದ ಇತರ ನಾಲ್ಕು ವಿಮಾನ ನಿಲ್ದಾಣಗಳ ಜತೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಹ ಅಂತರರಾಷ್ಟ್ರೀಯ ಮಾನ್ಯತೆ ನೀಡಲು ಗುರುವಾರ ಸಂಜೆ ಕೇಂದ್ರ ಸಚಿವ ಸಂಪುಟ ನಿರ್ಧರಿಸಿದ್ದಕ್ಕೆ ನಗರದ ಉದ್ಯಮಿಗಳು, ರಫ್ತುದಾರರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ನಗರದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಮಂಗಳೂರು ವಿಮಾನ ನಿಲ್ದಾಣಕ್ಕೆ ಕಸ್ಟಮ್ಸ ವಿಮಾನ ನಿಲ್ದಾಣ ಸ್ಥಾನಮಾನ ನೀಡಬೇಕೆಂದು ಕೋರಿ ಮಂಗಳೂರಿನ ಕಸ್ಟಮ್ಸ ಆಯುಕ್ತರಿಗೆ ಮನವಿ ನೀಡಿದ ಸಂದರ್ಭದಲ್ಲೇ ಸಂಪುಟವು ಅಂತರರರಾಷ್ಟ್ರೀಯ ಮಾನ್ಯತೆ ನೀಡಲು ಸಮ್ಮತಿಸಿದ ಮಾಹಿತಿಯನ್ನು ವಿಮಾನ ನಿಲ್ದಾಣದ ನಿರ್ದೇಶಕ ಎಂ.ಆರ್.ವಾಸುದೇವ್ ತಿಳಿಸಿದರು. ಸಭೆಯಲ್ಲಿದ್ದ ಉದ್ಯಮಿಗಳೆಲ್ಲಾ ಚಪ್ಪಾಳೆ ತಟ್ಟಿ ಈ ಸುದ್ದಿಯನ್ನು ಸ್ವಾಗತಿಸಿದರು.

ಮಂಗಳೂರು ವಿಮಾನ ನಿಲ್ದಾಣದಿಂದ 4-5 ದೇಶಗಳಿಗೆ ಹಲವು ವರ್ಷಗಳಿಂದ ನೇರ ವಿಮಾನ ಹಾರಾಟ ನಡೆಯುತ್ತಿದ್ದು, ಇಲ್ಲಿಗೆ ಅಂತರರಾಷ್ಟ್ರೀಯ ಮಾನ್ಯತೆ ನೀಡಬೇಕೆಂಬುದು ಉದ್ಯಮಿಗಳು, ಈ ಭಾಗದ ಜನರ ಬೇಡಿಕೆಯಾಗಿತ್ತು. ಹಳೆ ವಿಮಾನ ನಿಲ್ದಾಣದಲ್ಲಿ ಸರಕು ಸಾಗಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಹಲವು ದಿನಗಳೇ ಕಳೆದಿದ್ದರೂ ಕಸ್ಟಮ್ಸ ಇಲಾಖೆಯ ಅನುಮತಿ ಇನ್ನೂ ದೊರಕದ ಕಾರಣ ಕಾರ್ಗೊ ವಿಮಾನಗಳ ಹಾರಾಟಕ್ಕೆ ಅಡಚಣೆ ಉಂಟಾಗಿದೆ. 

ಅಂತರರಾಷ್ಟ್ರೀಯ ಸ್ಥಾನಮಾನ ದೊರಕಿರುವುದರಿಂದ ಕಸ್ಟಮ್ಸ ಇಲಾಖೆಯಿಂದಲೂ ಶೀಘ್ರ ಅನುಮತಿ ದೊರಕುವ ವಿಶ್ವಾಸವನ್ನು ಕಸ್ಟಮ್ಸ ಇಲಾಖೆಯ ಆಯುಕ್ತ ಡಿ.ಪುರೊಷೋತ್ತಮ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT