ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಉದ್ಯಾನಕ್ಕೆ ಬೇಕಿದೆ ಕಾಯಕಲ್ಪ

Last Updated 17 ಅಕ್ಟೋಬರ್ 2011, 10:45 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಪ್ರಮುಖ ಪ್ರವಾಸಿ ತಾಣವಾಗಿರುವ ರಾಜಾಸೀಟ್‌ಗೆ ಬರುವ ಪ್ರತಿಯೊಬ್ಬರು ಸಮೀಪದಲ್ಲಿರುವ ಪುಟಾಣಿ ರೈಲಿನಲ್ಲಿ ಒಂದು ಸುತ್ತು ಹಾಕಿಯೇ ಮುಂದಕ್ಕೆ ಹೋಗುವರು. ಈ ರೈಲು ಹಳಿಯ ಆ ಬದಿ `ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮಕ್ಕಳ ಉದ್ಯಾನವನ~ ಇದೆ.

ಇಲ್ಲಿಗೆ ಬರುವ ಮಕ್ಕಳಿಗೆ ಮನರಂಜನೆ ನೀಡುವ ಉದ್ದೇಶದಿಂದ ಸುಮಾರು 30 ವರ್ಷಗಳ ಹಿಂದೆಯೇ ನಿರ್ಮಾಣಗೊಂಡ ಈ ಉದ್ಯಾನವನ ಇಂದು ಶೋಚನೀಯ ಸ್ಥಿತಿಯಲ್ಲಿದೆ.

ಮಕ್ಕಳ ಆಟಕ್ಕೆಂದು ಇಡಲಾಗಿದ್ದ ಕಬ್ಬಿಣದ ಜೋಕಾಲಿ ತುಕ್ಕು ಹಿಡಿದಿದೆ. ಡಬಲ್‌ಬಾರ್, ಜಾರುಬಂಡಿ ಸೇರಿದಂತೆ ಯಾವ ಉಪಕರಣಗಳೂ ಸುಸ್ಥಿತಿ ಯಲ್ಲಿಲ್ಲ. ಸಿಮೆಂಟ್‌ನ ಜಾರುಬಂಡಿ ಕೂಡ ಹದೆಗೆಟ್ಟಿದೆ. ಇದರಿಂದಾಗಿ ಈ ಕಡೆ ಮಕ್ಕಳು ತಿರುಗಿ ನೋಡಲು ಸಹ ಹಿಂಜರಿಯುತ್ತಿವೆ.

1998ರಲ್ಲಿ ಕಾಯಕಲ್ಪ:  ರಾಜ್ಯದಲ್ಲಿ 1998ರಲ್ಲಿ ಜನತಾದಳ ಸರ್ಕಾರ ಇದ್ದಾಗ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಸ್ಥಳೀಯವರೆ ಆದ ಎಂ.ಸಿ. ನಾಣಯ್ಯ ಅವರ ಮುತುವರ್ಜಿಯಲ್ಲಿ ಈ ಉದ್ಯಾನಕ್ಕೆ ಕಾಯಕಲ್ಪ ನೀಡ ಲಾಗಿತ್ತು.

ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ನಿಮಿತ್ತ ಅಂದು ಹೊಸ ಆಟಿಕೆ ಸಲಕರಣೆಗಳನ್ನು ಅಳವಡಿಸಲಾಗಿತ್ತು. ಆಗ ರಾಜಾಸೀಟ್‌ಗೆ ಬರುವ ಮಕ್ಕಳಿಗೆ ಆಟವಾಡುವುದು ಸಾಧ್ಯವಾಗುತ್ತಿತ್ತು.

ರಾಜಾಸೀಟ್‌ನಲ್ಲಿ ನಿಂತು ಪಶ್ಚಿಮ ಘಟ್ಟದ ಸೌಂದರ್ಯವನ್ನು ಸವಿಯು ವುದು ಪಾಲಕರಿಗೆ ಖುಷಿ ನೀಡುತ್ತಿದ್ದರೆ, ಮಕ್ಕಳಿಗೆ ಈ ಉದ್ಯಾನವನದಲ್ಲಿ ಆಟ ವಾಡುವುದರಿಂದ ಆ ಖುಷಿ ದೊರಕು ತ್ತಿತ್ತು. ಆದರೆ, ಇಂದಿನ ಪರಿಸ್ಥಿತಿ ನೋಡಿ ದರೆ ಯಾವ ಮಕ್ಕಳೂ ಆ ಕಡೆ ತಿರುಗಿ ಕೂಡ ನೋಡದ ಪರಿಸ್ಥಿತಿ ಇದೆ.

ಪುಟಾಣಿ ರೈಲು ಸ್ಟೇಷನ್ ಪಕ್ಕದಲ್ಲಿ ಕಳ್ಳೆಪುರಿ, ಪಾನಿ ಪುರಿ ಸೇರಿದಂತೆ ಕುರುಕಲು ತಿಂಡಿಗಳನ್ನು ಮಾರಾಟ ಮಾಡಲಾಗುತ್ತದೆ. ಇವುಗಳನ್ನು ಖರೀ ದಿಸಿ, ತಿನ್ನುತ್ತ ಆ ಕಡೆಯಿಂದ ಈ ಕಡೆ ಸುತ್ತಾಡುವ ಸಾಕಷ್ಟು ಜನ ಪ್ರವಾಸಿಗರು ಕಾಗದ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ.

ಇದು ಪಾಕ್‌ರ್ ನಲ್ಲಿ ಗಲೀಜು ಸೃಷ್ಟಿ ಸುತ್ತದೆ. ಇದ ನ್ನು ತಡೆಯಲು ಅಥವಾ ಅವರಿಗೆ ತಿಳಿ ಹೇಳುವ ಕೆಲಸ ವನ್ನು ಇಲ್ಲಿರುವ ನಗರ ಸಭೆ ಸಿಬ್ಬಂದಿ ಯವರು ಮಾಡುವುದೇ ಇಲ್ಲ. ಅವರು ಕೇವಲ ರಾಜಾಸೀಟ್‌ಗೆ ತೆರಳುವ ಪ್ರವಾಸಿಗರಿಂದ ಹಣ ಸಂಗ್ರಹಿಸುವುದರಲ್ಲಿಯೇ `ಬ್ಯುಸಿ~ ಆಗಿರುತ್ತಾರೆ.

ಪುಟಾಣಿ ರೈಲು ಸ್ಟೇಷನ್ ಅಕ್ಕಪಕ್ಕ ಸಾಕಷ್ಟು ಗಲೀಜು ಇರುತ್ತದೆ. ಇದರ ಸ್ವಚ್ಛತೆ ಬಗ್ಗೆ ಯಾರೂ ಗಮನ ಹರಿಸಲ್ಲ. ಇಲ್ಲಿಗೆ ಬರುವ ಪ್ರವಾಸಿಗರು ಮತ್ತೊಮ್ಮೆ ಈ ಕಡೆ ಬರಲು ಮನಸ್ಸು ಮಾಡಲಾರ. ಪ್ರವಾಸಿಗರಿಂದಲೇ ಸ್ಥಳೀಯರಿಗೆ ಹೆಚ್ಚಿನ ಆದಾಯ ಬರುತ್ತಿದ್ದು, ಇದಕ್ಕೆ ಹೊಡೆತ ಬೀಳುವುದರಲ್ಲಿ ಯಾವ ಅನು ಮಾನಗಳೂ ಇಲ್ಲ.
 
ಆದ್ದರಿಂದ ಈ ಉದ್ಯಾನದಲ್ಲಿ ಹಾಳಾಗಿರುವ ಆಟಿಕೆ ಸಲಕರಣೆಗಳನ್ನು ಬದಲಿಸಿ, ಹೊಸ ಸಲಕರಣೆಗಳನ್ನು ಅಳ ವಡಿಸಬೇಕು. ಮಕ್ಕಳಿಗೆ ಆಟವಾಡಲು ಇನ್ನಷ್ಟು ಹೊಸ ಹೊಸ ಬಗೆಯ ಸಲಕರಣೆಗಳನ್ನು ಹಾಕಬೇಕು. ಸ್ವಚ್ಛತೆ ಕಾಪಾಡಬೇಕು ಎನ್ನುವುದು ಸ್ಥಳಕ್ಕೆ ಭೇಟಿದ ಪಾಲಕರ ಅಭಿಪ್ರಾಯ.

ರೈಲಿನಲ್ಲಿ ಹುಚ್ಚಾಟ: ಪುಟಾಣಿ ರೈಲಿನಲ್ಲಿ ಸಾಮಾನ್ಯವಾಗಿ ಚಿಕ್ಕಮಕ್ಕಳ ಜೊತೆ ಅವರ ಪಾಲಕರು ಸಹ ಪ್ರಯಾಣಿಸುವುದು ಸಾಮಾನ್ಯ. ಅದರಂತೆ ಕಾಲೇಜು ಯುವಕ-ಯುವತಿಯರು ಸಹ ರೈಲಿನಲ್ಲಿ ಒಂದು ರೌಂಡ್ ಹಾಕಿಕೊಂಡು ಬರುತ್ತಾರೆ.

ಕೆಲವು ಪಡ್ಡೆ ಹುಡುಗರು ಚಲಿಸುತ್ತಿ ರುವ ರೈಲಿನಲ್ಲಿ ಹುಚ್ಚಾಟ ನಡೆಸುತ್ತಾರೆ. ಕೇಕೇ ಹಾಕುವುದು, ಹೊರಗೆ ಬಾಗಿ ಕೈಗೆ ಸಿಗುವ ಹೂ-ಎಲೆಗಳನ್ನು ಕಿತ್ತುಕೊಳ್ಳು ವುದು ಮಾಡುತ್ತಾರೆ. ಕಡಿವಾಣ ಹಾಕಲು ರೈಲಿನಲ್ಲಿ ಸಿಬ್ಬಂದಿ ಇರುವುದಿಲ್ಲ (ರೈಲಿನ ಚಾಲಕನನ್ನು ಬಿಟ್ಟು).

ಇದಕ್ಕೆ ನಿಯಂತ್ರಣ ಹಾಕಲೇ ಬೇಕಾಗಿದೆ. ಸುರಕ್ಷತಾ ದೃಷ್ಟಿಯಿಂದ ಹಾಗೂ ಪ್ರಯಾಣಿಕರ ಹುಚ್ಚಾಟವನ್ನು ತಡೆಯಲು ರೈಲಿನಲ್ಲಿ ಒಬ್ಬ ಸಿಬ್ಬಂದಿ ಯನ್ನು ನೇಮಿಸಬೇಕು ಎಂದು ದೂರದ ಊರುಗಳಿಂದ ಬಂದ ಪ್ರವಾಸಿಗರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT