ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿನ ಮೇಲೆ ಹಿಡಿತ ಸಾಧಿಸಿ

Last Updated 19 ಫೆಬ್ರುವರಿ 2012, 9:00 IST
ಅಕ್ಷರ ಗಾತ್ರ

ಹಾವೇರಿ: `ಫ್ಯಾಷನ್ ಜಗತ್ತಿನಿಂದ ವಿದ್ಯಾರ್ಥಿಗಳ ಮನಸ್ಸು ಚಂಚಲ ಗೊಂಡು ಅವರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಆತ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳವುದರ ಜೊತೆಗೆ ಮನಸ್ಸಿನ ಮೇಲೆ ಹಿಡಿತ ಸಾಧಿಸಬೇಕು~ ಎಂದು ಹುಕ್ಕೇರಿಮಠದ ಸದಾಶಿವ ಶ್ರೀಗಳು ಸಲಹೆ ಮಾಡಿದರು.

ನಗರದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲದಲ್ಲಿ ಗುರವಾರ ನಡೆದ ಸಾಂಸ್ಕೃತಿಕ ಕ್ರೀಡೆ, ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದುಂಬಿ ವಿವಿಧ ಹೂವುಗಳಿಂದ ಮಕರಂದವನ್ನು ಶೇಖರಿಸುವಂತೆ, ವಿದ್ಯಾರ್ಥಿಗಳು ಜ್ಞಾನವನ್ನು ವಿವಿಧ ಮೂಲಗಳಿಂದ ಸಂಪಾದಿಸಿದಾಗ ಮಾತ್ರ ಜ್ಞಾನಾರ್ಜನೆ ವೃದ್ಧಿಸುತ್ತದೆ ಎಂದ ಅವರು, ಸತತ ಪರಿಶ್ರಮದಿಂದ ಅದ್ಯಯನ ಕೈಗೊಂಡಾಗ ಮಾತ್ರ ಸಮಾಜದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹೊರ ಹೊಮ್ಮಲು ಸಾಧ್ಯ ಎಂದರು.

ಧಾರವಾಡ ಕುರಕಡ್ಲಿ ಅಜ್ಜ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಭಾರತಿ ಹಿರೇಮಠ ಮಾತನಾಡಿ, ಇಂದಿನ ಜಾಗತೀಕರಣ ಯುಗದಲ್ಲಿ ಮಹಿಳೆ ಉದ್ಯೋಗ ಹಾಗೂ ಕೌಟುಬಿಂಕ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಬೆಳೆಯುತ್ತಿದ್ದಾಳೆ. ಮಹಿಳೆಯ ಬದುಕಿಗೆ ಶಿಕ್ಷಣ ಎಷ್ಟು ಮುಖ್ಯಯೋ  ಕೌಟುಂಬಿಕ ನಿರ್ವಹಣೆ ಕೂಡ ಅಷ್ಟೇ ಮಖ್ಯವಾಗಿದ್ದು, ವಿದ್ಯಾರ್ಥಿನಿಯರು ಕೇವಲ ಮದುವೆ ಕಾರ್ಡಿಗಾಗಿ ಶಿಕ್ಷಣ ಪಡೆಯುವಂತೆ ಆಗಬಾರದೆಂದು ಕವಿಮಾತು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್. ಮುಷ್ಠಿ ಮಾತನಾಡಿ, ಒಂದು ಶಿಕ್ಷಣ ಸಂಸ್ಥೆ ಕಟ್ಟಲು ಸಾಕಷ್ಟು ಶ್ರಮ, ತಾಳ್ಮೆ ಹಾಗೂ ಹಣ ಬೇಕಾಗುತ್ತದೆ. ಅದನ್ನು ಲಿಂಗೈಕ್ಯ ಶಿವಲಿಂಗೇಶ್ವರ ಶ್ರೀಗಳು ನಮಗೆ ನೀಡಿದ್ದರ ಫಲವಾಗಿಯೇ ಇಷ್ಟು ವರ್ಷಗಳ ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಶಿವಲಿಂಗೇಶ್ವರ ವಿದ್ಯಾಪೀಠದ ಉಪಾಧ್ಯಕ್ಷ ಸಿದ್ದಣ್ಣ ಚೌಶೆಟ್ಟಿ, ಕಾರ್ಯದರ್ಶಿ ವೀರಣ್ಣ ಅಂಗಡಿ, ಸದಸ್ಯ ಬಿ.ಬಸವರಾಜ, ಅಧಿಕಾರಿ ವಿ.ಕೆ.ಹಲಗಣ್ಣನವರ, ಸಮಾರಂಭದಲ್ಲಿ ಹಾಜರಿದ್ದರು.
ಬಿ.ವಿ.ಹಿರೇಮಠ ಮಹಾವಿದ್ಯಾಲಯದ ವಾರ್ಷಿಕ, ಎಸ್.ಎಸ್. ಹಿರೇಮಠ ಕ್ರೀಡಾ,  ಅಶ್ವಿನಿ ಕುಮಾರಿ ಎನ್‌ಎಸ್‌ಎಸ್ ವರದಿ ವಾಚಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ     ಬಹುಮಾನ ವಿತರಿಸುವುದರ ಜತೆಗೆ ಗ್ರಂಥಾಲಯಕ್ಕೆ 25 ಸಾವಿರ ರೂ.ದೇಣಿಗೆ ನೀಡದ ಭಾಗವತ್ ಗಜಾನನ ಕಡಗಿ ದಂಪತಿಗಳನ್ನು ಸನ್ಮಾನಿಸಲಾಯಿತು
.
ಶ್ರೀದೇವಿಮಹಾಂತ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಎಸ್.ಬಿ. ಅಣ್ಣಿಗೇರಿ ಸ್ವಾಗತಿಸಿದರು. ಪುಷ್ಪಾ ಶಲವಡಿಮಠ ನಿರೂಪಿಸಿದರು. ಸೌಮ್ಯಾ ಬಸೇಗಣ್ಣಿ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT