ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಮನೆ ಮೇಲೆ ಬಿದ್ದ ಮರ

Last Updated 13 ಜುಲೈ 2013, 9:54 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಮಳೆ ಉತ್ತಮವಾಗಿ ಸುರಿದಿದೆ. ಬಹುತೇಕ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದು, ಮನೆ ಜಖಂಗೊಂಡಿರುವ ಹಾಗೂ ಬರೆ ಕುಸಿತ ಸೇರಿದಂತೆ ಮತ್ತಿತರರ ಹಾನಿ ಪ್ರಕರಣಗಳು ವರದಿಯಾಗಿವೆ..

ಕಳೆದ ಮೂರ‌್ನಾಲ್ಕು ದಿನಗಳಿಂದ ಕೊಂಚ ಕಡಿಮೆಯಾಗಿದ್ದ ಮಳೆಯು ಪುನಃ ತನ್ನ ಆರ್ಭಟ ಮುಂದುವರೆಸಿದೆ.

ಮಡಿಕೇರಿಯಲ್ಲೂ ಮಳೆಯ ಆರ್ಭಟ ಶುಕ್ರವಾರ ಕಂಡುಬಂತು. ಆಗಾಗ ತುಸು ಬಿಡುವು ನೀಡುತಿದ್ದ ಮಳೆ ಸಂಜೆಯ ವೇಳೆಗೆ ಮತ್ತಷ್ಟು ರಭಸದಿಂದ ಸುರಿದಿದೆ. ನಗರದಲ್ಲಿ ಸಂತೆಯ ದಿನವಾದ ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಬಿಡುವು ನೀಡಿದ್ದ ಮಳೆರಾಯ ಸಂಜೆಯ ವೇಳೆ ಆರ್ಭಟಿಸಿದ. ಮಳೆಯಿಂದಾಗಿ ವ್ಯಾಪಾರಸ್ಥರು ಪರದಾಡುವ ಸ್ಥಿತಿ ಎದುರಾಗಿತ್ತು.

ಮಳೆ ಹಾನಿ
ಚಟ್ಟಳ್ಳಿ ಸಮೀಪದ ಚೇರಳ ಶ್ರೀಮಂಗಲ ಗ್ರಾಮದ ಯೂಸೂಫ್ ಎಂಬುವವರ ಮನೆಯ ಮೇಲೆ ಶುಕ್ರವಾರ ಬೆಳಿಗ್ಗೆ ಮರ ಬಿದ್ದು, ಮನೆ ಜಖಂಗೊಂಡಿತ್ತು. ಮನೆಯಲ್ಲಿದ್ದ ನಾಲ್ಕು ಜನರು ಗಾಯಗೊಂಡಿದ್ದಾರೆ.

ಗಾಯಳುಗಳಾದ ರಶೀದ್, ನೌಶದ್, ಸುಬೇದಾ, ಖದಿಜ ಅವರಿಗೆ ಚೆಟ್ಟಳ್ಳಿ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಅವರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು.

ಮಡಿಕೇರಿಯ ಚೈನ್‌ಗೇಟ್ ಬಳಿಯ ನಿವಾಸಿ ಜೋಸೆಫ್ ಎಂಬುವವರ ಮನೆ ಬಳಿಯ ಬರೆ ಕುಸಿತ ಉಂಟಾಗಿದೆ. ಸೋಮವಾರಪೇಟೆಯ ಚಂದ್ರೇಖರ್ ಎಂಬುವವರ ದನದ ಕೊಟ್ಟಿಗೆಯ ಗೋಡೆ ಜಖಂಗೊಂಡಿದೆ.  ಬೆಳಗುಂದ ಗ್ರಾಮದ ರಂಗಮ್ಮ ಎಂಬುವವರ ವಾಸದ ಮನೆ ಗೋಡೆ ಕುಸಿದು ಜಖಂಗೊಂಡಿದೆ.

ಮಳೆ ವಿವರ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ 8ಗಂಟೆಗೆ ಅವಧಿಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಯಲ್ಲಿ 35.67 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 11.10 ಮಿ.ಮೀ. ಮಳೆ ದಾಖಲಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1440.37 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 54.4 ಮಿ.ಮೀ., ವೀರಾಜಪೇಟೆ ತಾಲ್ಲೂಕಿನಲ್ಲಿ 15.87 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 36.75 ಮಿ.ಮೀ. ಮಳೆ ದಾಖಲಾಗಿದೆ. ಮಡಿಕೇರಿ ಕಸಬಾ 68 ಮಿ.ಮೀ., ನಾಪೋಕ್ಲು 28.8 ಮಿ.ಮೀ., ಸಂಪಾಜೆ 64.4 ಮಿ.ಮೀ., ಭಾಗಮಂಡಲ 56.4 ಮಿ.ಮೀ., ವೀರಾಜಪೇಟೆ ಕಸಬಾ 19.6 ಮಿ.ಮೀ., ಹುದಿಕೇರಿ 17.3 ಮಿ.ಮೀ., ಶ್ರಿಮಂಗಲ 26.4 ಮಿ.ಮೀ., ಪೊನ್ನಂಪೇಟೆ 11,4 ಮಿ.ಮೀ., ಅಮ್ಮತ್ತಿ 15.5 ಮಿ.ಮೀ. ಬಾಳಲೆ 5 ಮಿ.ಮೀ., ಸೋಮ ವಾರಪೇಟೆ ಕಸಬಾ 39.8 ಮಿ.ಮೀ., ಶನಿವಾರಸಂತೆ 43.8 ಮಿ.ಮೀ., ಶಾಂತಳ್ಳಿ 86.2 ಮಿ.ಮೀ., ಕೊಡ್ಲಿಪೇಟೆ 23.7 ಮಿ.ಮೀ., ಕುಶಾಲನಗರ 5.4 ಮಿ.ಮೀ., ಸುಂಟಿಕೊಪ್ಪ 21.6 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ:
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2856.76 ಅಡಿಗಳು, ಕಳೆದ ವರ್ಷ ಇದೇ ದಿನ 2823.74 ಅಡಿ ನೀರ ಸಂಗ್ರಹವಾಗಿತ್ತು.

ಹಾರಂಗಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ 8.4 ಮಿ.ಮೀ. ಮಳೆಯಾಗಿದೆ. ಜಲಾಶಯಕ್ಕೆ ಇಂದಿನ ನೀರಿನ ಒಳ ಹರಿವು 6937 ಕ್ಯೂಸೆಕ್ ಆಗಿದೆ. ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 789 ಕ್ಯೂಸೆಕ್ ಆಗಿತ್ತು. ಇಂದಿನ ನೀರಿನ ಹೊರ ಹರಿವು ನದಿಗೆ 6800      ಕ್ಯೂಸೆಕ್, ನಾಲೆಗೆ 592 ಕ್ಯೂಸೆಕ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT