ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವರಾತ್ರಿ ವಿಶೇಷ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮುನೇಶ್ವರಸ್ವಾಮಿ ದೇವಸ್ಥಾನ: ಜ್ಞಾನಭಾರತಿ ಆವರಣ ವಿಶ್ವವಿದ್ಯಾಲಯ, ಮುನಿಯಪ್ಪ ದಾಸರಿಂದ `ಭಕ್ತ ಮಹಾಂದಾತ~ ಹರಿಕತೆ. ಮುನಿರಾಜು (ಹಾರ್ಮೋನಿಯಂ) ವೆಂಕಟರಾಮಣ್ಣ ಸ್ವಾಮಿ (ತಬಲ). ರಾತ್ರಿ 9.30.

ಬ್ರಾಹ್ಮಣ ಸಭಾ: ಗಾಯಿತ್ರಿ ಮಂದಿರ ಕೆಂಗೇರಿ ಉಪನಗರ, ಶಿವರಾತ್ರಿ ಪ್ರಯುಕ್ತ ಕೆಂಗೇರಿಯ ಚಕ್ರಪಾಣಿ ಸಂಗ್ರಹಿಸಿರುವ ರಾಜ್ಯದ ವೈಶಿಷ್ಟ್ಯಪೂರ್ಣ ಶಿವಲಿಂಗಗಳು, ಶಿವ ದೇವಾಲಯ, ಶಿವ ಲೀಲಾಮೃತಗಳ ಚಿತ್ರಪ್ರದರ್ಶನ. ಬೆಳಿಗ್ಗೆ 10.

ಮಹದೇಶ್ವರಸ್ವಾಮಿ ದೇವಸ್ಥಾನ: ರಂಗನಾಥಪುರ, ಕಾಮಾಕ್ಷಿಪಾಳ್ಯ, ಜಾಗರಣೆ ಹಾಗೂ ಸ್ವಾಮಿಗೆ ನೂತನ ಮಂಟಪ ಸಮರ್ಪಣ ಮಹೋತ್ಸವ~. ರಾತ್ರಿ 8ಕ್ಕೆ `ಧರ್ಮ ಜಾಗೃತಿ ಸಮಾರಂಭ~ ಸಾನಿಧ್ಯ-ವಚನಾನಂದ ಸ್ವಾಮೀಜಿ, ಉದ್ಘಾಟನೆ-ಶಾಸಕ ಪ್ರಿಯಕೃಷ್ಣ. ರಾತ್ರಿ 10ಕ್ಕೆ `ಶಿವೆ~ ನೃತ್ಯ ನಿರಂತರ, ರಾತ್ರಿ 11ಕ್ಕೆ ಮಂಜುನಾಥ್ ಭಟ್ ಅವರಿಂದ `ಬ್ರಹ್ಮ ಕಪಾಲ~ ಯಕ್ಷಗಾನ ಕಥಾನಕ.

ಸೋಮೇಶ್ವರ ಸ್ವಾಮಿ ದೇವಸ್ಥಾನ: ಮಾಂಡವ್ಯ ಮಹಾಋಷಿ  ಕ್ಷೇತ್ರ, ಹಲಸೂರು, ಬೆಳಿಗ್ಗೆ  7.30ಕ್ಕೆ ಮಹಾಮಂಗಳಾರತಿ, ಬೆಳಿಗ್ಗೆ 10ಕ್ಕೆ ಗಣಪತಿ ಗಾನ ಸಭಾ ಸುಜಾತ, ಸತೀಶ್ ವೃಂದದಿಂದ ಸಂಗೀತ ಕಾರ್ಯಕ್ರಮ.

ಶರಣರ ಬಳಗ: ಎಡೆಯೂರು ತೋಂಟದ ಸಿದ್ದಲಿಂಗೇಶ್ವರ ಸಮುದಾಯ ಭವನ, 5ನೇ ಕ್ರಾಸ್, 16ನೇ ಮುಖ್ಯರಸ್ತೆ, ಬಿ.ಟಿ.ಎಂ. ಬಡಾವಣೆ 2ನೇ ಹಂತ, ಶಿವರಾತ್ರಿ ಪ್ರಯುಕ್ತ `ಸಾಮೂಹಿಕ ಶಿವಪೂಜೆ~ ಸಂಜೆ 5.

ಗುರುದೇವ ದತ್ತ ಅನುಗ್ರಹ ಪೀಠ: ಗುರುಕೃಪ, ನಂ.388,14ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಪೋಸ್ಟ್ ಆಫೀಸ್ ಎದುರಿನ ರಸ್ತೆ, `ಜಾಗರಣೆ ಮತ್ತು ಯಾಮಪೂಜೆ~. ಸಂಜೆ 6.

ಸದಾಶಿವ ದೇವಾಲಯ: ಆರ್.ಎಸ್.ಪಾಳ್ಯ, ಕೆಎಸ್‌ಎಫ್‌ಸಿ ಲೇಔಟ್ ಹತ್ತಿರ, ಲಿಂಗರಾಜಪುರಂ, ಬೆಳಿಗ್ಗೆ 6ಕ್ಕೆ ರುದ್ರಾಭಿಷೇಕ ಮತ್ತು ಮಹಾಮಂಗಳಾರತಿ, ಬೆಳಿಗ್ಗೆ 9ಕ್ಕೆ ಮೃತ್ಯುಂಜಯ ಹೋಮ.

ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ಕೃಷ್ಣರಾಜಪುರಂ, ಚಂದ್ರೇಶಾನಂದ ಸ್ವಾಮೀಜಿ ಅವರಿಂದ `ಮಹಾಶಿವರಾತ್ರಿ-ಶಿವಾನಂದಲಹರಿ~ ವಿಷಯದ ಕುರಿತು ಉಪನ್ಯಾಸ. ಸಂಜೆ 4.

ವಿಜಯನಗರ ಆರ್ಯ ವೈಶ್ಯ ಮಂಡಳಿ:
ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನ, ನಂ.66, ವಿಜಯನಗರ. ಬೆಳಿಗ್ಗೆ 8ಕ್ಕೆ `ದಾನ್ಯಲಿಂಗಂ ಪ್ರತಿಷ್ಠೆ~, ಬೆಳಿಗ್ಗೆ 9.30ಕ್ಕೆ ರುದ್ರಹೋಮ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ.

ಮುನೀಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್: ನಂ.105, 4ನೇ ಅಡ್ಡರಸ್ತೆ, ನ್ಯೂ ಕಲಾಸಿಪಾಳ್ಯಂ ಎಕ್ಸ್‌ಟೆನ್‌ಷನ್, ಜಯಚಾಮರಾಜೇಂದ್ರ ರಸ್ತೆ, ಮಧ್ಯಾಹ್ನ 12ಕ್ಕೆ ಪೂಜೆ, ಸಂಜೆ  6ಕ್ಕೆ ಶಿವರಾತ್ರಿ ಜಾಗರಣೆ ಪ್ರಯುಕ್ತ ಕೃಷ್ಣಪ್ಪದಾಸರಿಂದ  `ಭಕ್ತಮಾರ್ಕಂಡಯ್ಯ~ ಹರಿಕತೆ.

ಪರಮಹಂಸ ಸನ್ಯಾಸ ಆಶ್ರಮ: ನಂ.61, 9ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ರಹೇಜಾ ಅಪಾರ್ಟ್‌ಮೆಂಟ್ ಎದುರು, ಗೋವಿಂದರಾಜನಗರ, `71ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವ~ ಬೆಳಿಗ್ಗೆ 6ಕ್ಕೆ ಅಖಂಡ ಶಿವಪಂಚಾಕ್ಷರಿ, ಸಂಜೆ 6ಕ್ಕೆ ಪರಮಹಂಸ ಸನ್ಯಾಸ ಆಶ್ರಮದ ಭಕ್ತವೃಂದದವರಿಂದ `ಭಜನೆ~, ರಾತ್ರಿ 8ಕ್ಕೆ ಎಂ.ಎಸ್.ಗಿರಿಧರ್ ಮತ್ತು ತಂಡದಿಂದ `ಭಕ್ತಿಮಂಜರಿ~, ರಾತ್ರಿ 12ಕ್ಕೆ `ನಾಮ ಸಂಕೀರ್ತನೆ~.

ಪುಣ್ಯಕ್ಷೇತ್ರ ಧರ್ಮಗಿರಿ ಮಂಜುನಾಥ ಸ್ವಾಮಿ ಟೆಂಪಲ್ ಟ್ರಸ್ಟ್:  30ನೇ ಕ್ರಾಸ್, 18ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಮಹಾಶಿವರಾತ್ರಿ ಪ್ರಯುಕ್ತ `ಶತ ರುದ್ರಾಭಿಷೇಕ~  ಬೆಳಿಗ್ಗೆ 5.

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು:
ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ, ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯರಸ್ತೆ, 8ನೇ ವಿಭಾಗ, ಜಯನಗರ, `ಸಂಗೀತ ಶಿವರಾತ್ರಿ~ ಉದ್ಘಾಟನೆ-ದಿಬ್ಬೂರು ಸಿದ್ದಲಿಂಗಪ್ಪ. ಸ್ನೇಹಾ ಹಂಪಿ ಹೊಳಿ ಅವರಿಂದ ಸಂಗೀತ. ಸಂಜೆ 6.30.

ಪ್ರಸನ್ನ ಚಂದ್ರಶೇಖರ ಆಶ್ರಮ ಟ್ರಸ್ಟ್: ಶಿವಪಂಚಾಯತನ ಸನ್ನಿಧಿ, ಪ್ರಸನ್ನ ಚಂದ್ರಶೇಖರ ಆಶ್ರಮ ಟ್ರಸ್ಟ್, ಚಕ್ರನಗರ, ವಿಶ್ವ ನೀಡಂ, ಅಂದ್ರಹಳ್ಳಿ, ಗಿನ್ನೀಸ್ ವಿಶ್ವದಾಖಲೆಗಾಗಿ ಚಂದ್ರಕುಮಾರ್ ನಾಯಕ ಅವರಿಂದ `ಕಾಲ್ಗಳ ಹೆಬ್ಬೆರಳಲ್ಲಿ ದಶ ಶಿವತಾಂಡವ ನರ್ತನ~.  ಸಂಜೆ 6.

ನಾಟ್ಯಚೇತನ ಫೌಂಡೇಶನ್
: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬ್ಯಾಟರಾಯನಪುರ, ಮೈಸೂರು ರಸ್ತೆ, `ಶಿವರಾತ್ರಿ ಸಂಭ್ರಮ, ಯುವಜಾತ್ರೆ ಹಂಗಾಮ~ ಅಹೋರಾತ್ರಿ ಸಾಂಸ್ಕೃತಿಕ ಉತ್ಸವ. ಉದ್ಘಾಟನೆ-ಮಾಜಿ ಉಪಮೇಯರ್. ಸಂಜೆ 7.
ಮಂಜುನಾಥ ಸ್ವಾಮಿ ಟೆಂಪಲ್ ಟ್ರಸ್ಟ್: 1ನೇ `ಡಿ~ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 2ನೇ ಹಂತ, ರಾಜಾಜಿನಗರ, ಶಿವರಾತ್ರಿಯ `ಜಾತ್ರಾ ರಥೋತ್ಸವ~ ಬೆಳಿಗ್ಗೆ 10ಕ್ಕೆ.

ನಿಡುಮಾಮಿಡಿ ಮಹಾಸಂಸ್ಥಾಪನ ಮಠ ಮತ್ತು ಮಾನವ ಧರ್ಮಪೀಠ ಶಿವೋತ್ಸಾಹ: ಜಚನಿ ಅಧ್ಯಯನ ಪೀಠ ಮತ್ತು ಸಂಶೋಧನ ಸಂಸ್ಥೆ,  `ಶಿವ ಸಂಸ್ಕೃತಿ: ಒಂದು ವಿಚಾರ ಸಂಕಿರಣ~ ಬೆಳಿಗ್ಗೆ 10.

ಗವಿಗಂಗಾಧರೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ಸಮಿತಿ: ನಂ.94, ಅಲ್ಲಮಪ್ರಭು ರಸ್ತೆ, ಗವೀಪುರಂ, ಶಿವರಾತ್ರಿ ಪ್ರಯುಕ್ತ `ಮಹಾಭಿಷೇಕ-ವಜ್ರಾಲಾಂಕಾರ~  ಬೆಳಿಗ್ಗೆ 6.

ಸ್ತ್ರೀ ಶಕ್ತಿ ಮಹಿಳಾ ಸಂಘಗಳು: ವೃಷಭಾವತಿನಗರ, ಕಾಮಾಕ್ಷಿ ಪಾಳ್ಯ. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾಕೂಟ, ಉದ್ಘಾಟನೆ- ಕೆ.ಪಿ.ಸಿ.ಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಎ.ಐ.ಸಿ.ಸಿ.ಯ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕಿ ಮೋಟಮ್ಮ. ಅಧ್ಯಕ್ಷತೆ- ಶಾಸಕ ನೆ.ಲ.ನರೇಂದ್ರಬಾಬು. ರಾತ್ರಿ 7ರಿಂದ ಬೆಳಿಗ್ಗೆ 6.

ಮಡಿವಾಳ ಮಾಚಿದೇವರ ದೇವಸ್ಥಾನ: ಕೆಂಪಾಂಬುಧಿ ಕೆರೆ ಅಂಗಳ, ಕೆಂಪೇಗೌಡನಗರ, ವಿಶೇಷ ಅಭಿಷೇಕ. ಬೆಳಿಗ್ಗೆ 6.30ಕ್ಕೆ, ಶಿವರಾತ್ರಿ ಹಬ್ಬದ ಜಾಗರಣೆ ಪ್ರಯುಕ್ತ `ದಕ್ಷಯಜ್ಞ~ ಯಕ್ಷಗಾನ ಪ್ರದರ್ಶನ. ರಾತ್ರಿ 7.30.

ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯ ಟ್ರಸ್ಟ್: 18ನೇ ಮುಖ್ಯರಸ್ತೆ, 30ನೇ ಅಡ್ಡರಸ್ತೆ, ಬನಶಂಕರಿ 2ನೇ ಹಂತ, ವಿಶೇಷ ಪೂಜೆ (ಬೆಳಿಗ್ಗೆ 5), ಶತರುದ್ರಾಭಿಷೇಕ (ಸಂಜೆ 3.30), ಏಕದಶ ರುದ್ರಾಭಿಷೇಕ (ರಾತ್ರಿ 9.30ರಿಂದ).

ಶರಣ ಸಂಗಮ: ಎಂ.ಇ.ಎಸ್ ಆಟದ ಮೈದಾನ, 4ನೇ ಬಡಾವಣೆ, ಜಯನಗರ. ಮಹದೇವಪ್ಪ ಮತ್ತು ತಂಡದಿಂದ ಜಾನಪದ ನೃತ್ಯ, ಡೊಳ್ಳು ಕುಣಿತ, ನಂದಿಧ್ವಜ, ಪಟ್ಟದ ಕುಣಿತ, ಸಾಂಸ್ಕೃತಿಕ ಕಲಾ ತಂಡದಿಂದ ಪ್ರಾಜೆಕ್ಟ್ ಲೈವ್ ಇನ್ನಿತರ ಕಾರ್ಯಕ್ರಮಗಳು, ಸಂಜೆ 5.

ನಗರೇಶ್ವರ ಸ್ವಾಮಿ ದೇವಾಲಯ: ದೇವಸ್ಥಾನದ ಆವರಣ, ನಗರ್ತರ ಪೇಟೆ, ಶಿವರಾತ್ರಿ ಹಬ್ಬದ ಪ್ರಯುಕ್ತ ಅಭಿಷೇಕ. ರಾತ್ರಿ 9ರಿಂದ.

ಶ್ರೀ ಗುರು ಶನೇಶ್ವರ ಸ್ವಾಮಿ ದೇವಾಲಯ: 40 ಅಡಿ ರಸ್ತೆ, ಆವಲಹಳ್ಳಿ, ಮುನೇಶ್ವರ ಬ್ಲಾಕ್, 24ನೇ ಮಹಾಶಿವರಾತ್ರಿಯ ವಾರ್ಷಿಕೋತ್ಸವ. ಬೆಳಿಗ್ಗೆ 9ಕ್ಕೆ ರುದ್ರಹೋಮ. ರಾತ್ರಿ 11ಕ್ಕೆ ಮುತ್ತಿನ ಪಲ್ಲಕ್ಕಿಯಲ್ಲಿ ದೇವರ ಮೆರವಣಿಗೆ, ನಂತರ ದೇವಸ್ಥಾನದಲ್ಲಿ ಸ್ವಾಮಿಯ ಹರಿಕತೆ.

ಪ್ರಸನ್ನ ಟ್ರಸ್ಟ್:
ನಿರ್ಗುಣ ಮಂದಿರ, ಕೋರಮಂಗಲ, ಮಹಾಶಿವರಾತ್ರಿ ಪ್ರಯುಕ್ತ ಭಜನೆ, ಧ್ಯಾನ. ಸಂಜೆ 6.

ಸಾಯಿಗೋಲ್ಡ್ ಪ್ಯಾಲೇಸ್ ಮತ್ತು ಸಾಯಿ ಸಮರ್ಪಣ ಚಾರಿಟೆಬಲ್ ಟ್ರಸ್ಟ್: ನೆಟ್‌ಕಲ್ಲಪ್ಪ ವೃತ್ತ, ವಾಲಿಬಾಲ್ ಮೈದಾನ, ಸುಬ್ಬರಾಮ ಶೆಟ್ಟಿ ವೃತ್ತ, ಬಸವನಗುಡಿ, ಶಿವಲಿಂಗಕ್ಕೆ ಭಕ್ತಾದಿಗಳಿಂದ ಗಂಗಾಜಲ ಅಭಿಷೇಕ, ಉದ್ಘಾಟನೆ- ಮಾಜಿ ಪ್ರದಾನ ಮಂತ್ರಿ ಎಚ್.ಡಿ.ದೇವೇಗೌಡ ಮತ್ತು ಚೆನ್ನಮ್ಮ ದಂಪತಿ, ಅತಿಥಿಗಳು- ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಶಾಸಕ ಎಲ್.ಎ.ರವಿಸುಬ್ರಮಣ್ಯ, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್. ಸಂಜೆ 6.30.

ಸಂಸ್ಕೃತಿ:
17ನೇ ಎ ಅಡ್ಡ ರಸ್ತೆ, 15ನೇ ಮುಖ್ಯರಸ್ತೆ, ಜೆ.ಪಿ.ನಗರ 5ನೇ ಹಂತ, ಅಹೋರಾತ್ರಿ ನೃತ್ಯೋತ್ಸವ, ಅತಿಥಿಗಳು- ಭಾರತೀಯ ಸಂಗೀತ ನೃತ್ಯ ಕಲಾ ಶಾಲೆ ನಿರ್ದೇಶಕಿ ಅಂಬಲೆ ರಾಜೇಶ್ವರಿ, ಅನನ್ಯ ಸಂಸ್ಥೆಯ ವ್ಯವಸ್ಥಾಪಕ ರಾಘವೇಂದ್ರ, ಎಸ್‌ಎಆರ್‌ಎಎಸ್ ಕಮ್ಯೂನಿಕೇಶನ್ ನಿರ್ದೇಶಕಿ ಸಂಧ್ಯಾ ಎಸ್.ಕುಮಾರ್, ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತೆ ಯಮುನಾ ಮಂಜುನಾಥ್ ರಾಜು, ಸಂಜೆ 6.

ಆರ್‌ವಿಎಂ ಪ್ರತಿಷ್ಠಾನ: ಶಿವ ಮಂದಿರ, ಟೋಟಲ್ ಮಾಲ್ ಹಿಂಬಾಗ, ಹಳೆ ವಿಮಾನ ನಿಲ್ದಾಣ ರಸ್ತೆ, ಶಿವರಾತ್ರಿ ಮಹೋತ್ಸವ, ಸಂಜೆ 6.

 ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ: ಬೃಂಧಾವನ, ಕಾಡುಗೋಡಿ, ವೈಟ್ ಫೀಲ್ಡ್, ಅಖಂಡ ಭಜನೆ. ಸಂಜೆ 6.

ಭೈರಸಂದ್ರ ಭೋವಿ ಜನಾಂಗದ ದೇವಾಲಯಗಳ ಅಭಿವೃದ್ಧಿ ಸಂಘ: ನಂ.7, ಈಶ್ವರ ದೇವಾಲಯ,  ಭೈರಸಂದ್ರ, ಜಯನಗರ 1ನೇ ಬ್ಲಾಕ್ ಪೂರ್ವ, ಅಖಂಡೇಶ್ವರ ಸ್ವಾಮಿ ಜೀರ್ಣೋದ್ಧಾರ, ಕಲಾಕರ್ಷಣ ಪ್ರತಿಷ್ಠಾನ ಹಾಗೂ ಮಹಾಶಿವರಾತ್ರಿ, ರುದ್ರಾಭಿಷೇಕ, ಬಿಲ್ವಾರ್ಚನೆ. ಬೆಳಿಗ್ಗೆ 5.30ರಿಂದ.

ಪೊನ್ನಯ್ಯ ಲಲಿತ ಕಲಾ ಅಕಾಡೆಮಿ:
ಪದ್ಮಿನಿ ರಾವ್ ಪರಂಪರಾ ಕಲೆ ಮತ್ತು ಸಂಸ್ಕೃತಿ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, 3ನೇ ಮುಖ್ಯರಸ್ತೆ, 8ನೇ ಅಡ್ಡ ರಸ್ತೆ, ಸಿಕೆಎ ಲೇಔಟ್, ಬಿಎಸ್‌ಕೆ 3ನೇ ಹಂತ,  ಶಿವರಾತ್ರಿ ಸಾಂಸ್ಕೃತಿಕ ಉತ್ಸವ, ಶ್ರೀರಂಜನಿ ಉಮೇಶ್, ಯಶಸ್ವಿನಿ ಕೊಟ್ಟೂರು ಅವರಿಂದ ಭರತನಾಟ್ಯ. ವಿದ್ಯಾರ್ಥಿಗಳಿಂದ ಸಮೂಹ ನೃತ್ಯ. ಎಸ್.ವಿ.ಗಿರಿಧರ್ ಅವರಿಂದ ವಾದ್ಯಸಂಭ್ರಮ. ಸಂಜೆ 6. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT