ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಹಿಳಾ ಸಹಕಾರ ಸಂಘ ಶೀಘ್ರ'

Last Updated 3 ಸೆಪ್ಟೆಂಬರ್ 2013, 6:28 IST
ಅಕ್ಷರ ಗಾತ್ರ

ಗದಗ: ಶಿಕ್ಷಣ, ಸಂಘಟನೆಯಲ್ಲಿ ವಿನೂತನ ಯೋಜನೆ ಹಮ್ಮಿಕೊಳ್ಳುವ ಮೂಲಕ ಸಮಾಜವನ್ನು ಸದೃಢ ಗೊಳಿಸಬೇಕು ಎಂದು ಉದ್ಯಮಿ ಎಸ್.ಎಸ್. ವೆಂಕಟಾಪೂರ ಹೇಳಿದರು.

ನಗರದ ಕರಿಯಮ್ಮನಕಲ್ಲು ಬಡಾವಣೆಯಲ್ಲಿ ಪರಶುರಾಮ ಜಂಬಗಿ ಅವರ ಮನೆಯಲ್ಲಿ ನಡೆದ  ಕುರುಬರ ಒಡ್ಡೋಲಗದಲ್ಲಿ ಮಾತನಾಡಿ, ಸುಮಾರು 25 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದರು ಸಂಘಟನೆಯಲ್ಲಿ ತೀರಾ ಹಿಂದುಳಿದಿದೆ. ಶೈಕ್ಷಣಿಕವಾಗಿ, ಅರ್ಥಿಕವಾಗಿ ಹಾಗೂ ರಾಜಕೀಯವಾಗಿ ಸಾಕಷ್ಟು ಪ್ರಬಲವಾಗಿದ್ದರೂ ಕೀಳರಿಮೆ, ಇಚ್ಚಾಶಕ್ತಿಯ ಕೊರತೆ ಯಿಂದ ಹಿಂದುಳಿದಿದ್ದೇವೆ. ಸಮಾಜ ಬಲಿಷ್ಠಗೊಳಿಸಲು ಯುವಶಕ್ತಿಯನ್ನು ಸಂಘಟನೆಯಲ್ಲಿ ಬಳಸಿಕೊಳ್ಳ ಬೇಕಾಗಿದೆ ಎಂದು ತಿಳಿಸಿದರು.

ಹಿರಿಯ ಮುಖಂಡ ರುದ್ರಣ್ಣ ಗುಳಗುಳಿ ಮಾತನಾಡಿ, ಹಿರಿಯರ ಸಹಾಯ-ಸಹಕಾರದಿಂದ  25 ನೇ  ಕುರುಬರ ಒಡ್ಡೋಲಗದ ಬೆಳ್ಳಿ ಮಹೋತ್ಸವ ಅಂಗವಾಗಿ  ಸಮಾಜದ ಗುರು ತಿಂಥಣಿ ಶ್ರೀಗಳಿಂದ ನಗರದಲ್ಲಿ ಬೃಹತ್ ಪ್ರಮಾಣದ ಗುರುಬೋಧ ಕಾರ್ಯಕ್ರಮ ಹಾಗೂ ನಗರದಲ್ಲಿ ಮಹಿಳೆಯರ ಸಹಕಾರ ಸಂಘವನ್ನು ಶೀಘ್ರವಾಗಿ ಪ್ರಾರಂಭಿಸಲು ನಿರ್ಣಯ  ಕೈಗೊಳ್ಳಲಾಗಿದೆ ಎಂದು ನುಡಿದರು.

ಪ್ರಕಾಶಕ ಜಯದೇವ ಮೆಣಸಗಿ ಮಾತನಾಡಿ, ಸಮಾಜವನ್ನು ಕೆಳ ಹಂತದಿಂದ ಗಟ್ಟಿಗೊಳಿಸಲು ಪ್ರತಿ  ವಾರ್ಡ್‌ಗಳಲ್ಲಿ ಪುರುಷ ಹಾಗೂ ಮಹಿಳಾ ಸಂಘ ಸ್ಥಾಪಿಸುವ ಮೂಲಕ  ಸಮಾಜದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಲಾಗುವುದು ಎಂದರು.

ಡಾ. ಎಸ್.ಬಿ. ಗೋವಿಂದಪ್ಪನವರ ಮಾತನಾಡಿ, ಕಹಿ ಘಟನೆ ಮರೆತು ಎಲ್ಲರೂ ಸಮಾಜ ಕಾರ್ಯ ಗಳಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಬಿ.ಡಿ ಹರ್ತಿ ಮಾತನಾಡಿ, ಡಾ. ಅಶೋಕ ಮತ್ತಿಗಟ್ಟಿ,  ನಾಗರಾಜ ಮೆಣಸಗಿ ಮಾತನಾಡಿದರು. ಮಹಿಳಾ ಕೋ ಆಪರೇಟಿವ್ ಸೊಸೈಟಿಗೆ ಗೀತಾ ಗುಡೇನಕಟ್ಟಿ, ಕೆ.ಬಿ.ಹರ್ತಿ, ಡಾ. ತನುಜಾ ಗೋವಿಂ ದಪ್ಪನವರ,  ರಾಜೇಶ್ವರಿ ಗುಳಗುಳಿ,  ರೇಣುಕಾ ಪೂಜಾರ, ಸುಜಾತಾ ಕಳ್ಳಿಮನಿ, ವಿನುತಾ ದುರಗಣ್ಣ ವರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದರು.

24 ನೇ ಒಡ್ಡೋಲಗವನ್ನು ಇದೇ 29 ರಂದು ಸಂಜೆ 4.30ಕ್ಕೆ ಅಂಜುಮನ್ ಕಾಲೇಜು ಸಮೀಪದ ರುದ್ರಣ್ಣ ಗುಳಗಳಿ ಅವರ ನಿವಾಸದಲ್ಲಿ ನಡೆಯುವುದರಿಂದ ಬಾಂಧವರಿಂದ ವೀಳ್ಯ  ಪಡೆದರು.

ಮೋಹನ ದುರಗಣ್ಣವರ,  ಎಚ್.ಎನ್.ಗದಗ, ಲಕ್ಷ್ಮೀ ಜಂಬಗಿ,  ಕೆ.ಬಿ.ಹರ್ತಿ, ಶೋಭಾ ಗದಗ, ಡಾ. ತನಜಾ ಗೋವಿಂದಪ್ಪನವರ,  ಮೀನಾಕ್ಷಿ ಮತ್ತಿಗಟ್ಟಿ,  ರಾಜೇಶ್ವರಿ ಗುಳಗುಳಿ ಹಾಜರಿದ್ದರು. ಮೊದಲಿಗೆ ಪರಶುರಾಮ ಜಂಬಗಿ ಅವರು ಡೊಳ್ಳು ಬಾರಿಸುವುದ ರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಕ್ಷ್ಮಿ ಜಂಬಗಿ ಸ್ವಾಗತಿಸಿದರು. ರವಿ ಜೋಗಿನ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಬಡಗೂಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT