ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಾನ್ಯತೆ ಸಿಗಲು ಸಲಹೆ ನೀಡಿ'

ಒಲಿಂಪಿಕ್ ಸಂಸ್ಥೆಯಿಂದ ಪತ್ರ
Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):   ಭಾರತದಲ್ಲಿ ಒಲಿಂಪಿಕ್ ಚಟುವಟಿಕೆಗಳ ಮೇಲೆ ಹೇರಲಾಗಿರುವ ನಿರ್ಬಂಧ ಅಂತ್ಯಗೊಳ್ಳಲು ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗದರ್ಶನ ಮಾಡುವಂತೆ ಕೋರಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಗೆ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ)ಯು ಮನವಿ ಮಾಡಿದೆ.

ಐಒಎ, ಕೇಂದ್ರ ಕ್ರೀಡಾ ಸಚಿವಾಲಯ ಮತ್ತು ಐಒಸಿ ನಡುವೆ ಆಯೋಜಿಸಲಾಗಿದ್ದ ಜಂಟಿ ಸಭೆ ಕಳೆದ ಎರಡು ತಿಂಗಳಲ್ಲಿ ಎರಡು ಬಾರಿ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಐಒಎ ಹಂಗಾಮಿ ಮುಖ್ಯಸ್ಥ ವಿ.ಕೆ ಮಲ್ಹೋತ್ರಾ ಐಒಸಿ ಮುಖ್ಯಸ್ಥ ಜಾಕ್ ರಾಗ್ ಅವರಿಗೆ ಪತ್ರ ಬರೆದಿದ್ದಾರೆ.

ಮಲ್ಹೋತ್ರಾ ಅವರು ತಮ್ಮ ಪತ್ರದಲ್ಲಿ, `ಕ್ರೀಡಾ ಸಚಿವಾಲಯವು ಐಒಎಗೆ ಪುನಃ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿಲ್ಲ' ಎಂದು ಆರೋಪಿಸಿದ್ದಾರೆ. `ಕ್ರೀಡಾ ಸಚಿವಾಲಯವು ವಿವಾದಾತ್ಮಕ ಕ್ರೀಡಾ ನೀತಿಯನ್ನು ಪುನರ್‌ಪರಿಶೀಲಿಸಲು ಸಮಿತಿಯೊಂದನ್ನು ನೇಮಿಸಿದೆ. ಇದು ಒಲಿಂಪಿಕ್ ನೀತಿಯ ಉಲ್ಲಂಘನೆ' ಎಂದು ಅವರು ಆರೋಪಿಸಿದ್ದಾರೆ.


`ಸರ್ಕಾರ ನಮ್ಮನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಅಮಾನತು       ಅಂತ್ಯಗೊಳಿಸುವಲ್ಲಿ ಐಒಸಿ ಸೂಚಿಸಿದ ಕ್ರಮಗಳನ್ನು ಅನುಸರಿಸಿಲ್ಲ. ನಮ್ಮಂದಿಗೆ ಮಾತಾಡುವ ಪ್ರಯತ್ನವೂ ಮಾಡಿಲ್ಲ. ಈ ಪರಿಸ್ಥಿತಿಯಲ್ಲಿ ನಿಮ್ಮನ್ನು        (ಐಒಸಿ) ಭೇಟಿಯಾಗುವ ಮೊದಲು ನಾವು ಯಾವ ಕ್ರಮಗಳನ್ನು       ತೆಗೆದುಕೊಳ್ಳಬೇಕು ಎಂದು ಸೂಚಿಸಿ   ಎಂದು ಪತ್ರದಲ್ಲಿ ಮಲ್ಹೋತ್ರಾ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT