ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ಮಾಯೆ

Last Updated 25 ಜನವರಿ 2011, 19:30 IST
ಅಕ್ಷರ ಗಾತ್ರ

ಮುಕ್ತ ಮಾರುಕಟ್ಟೆಗೂ ಬೊಜ್ಜಿಗೂ ಸಂಬಂಧ
ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾದಂತಹ ಮುಕ್ತ ಮಾರುಕಟ್ಟೆ ವ್ಯವಸ್ಥೆ ಇರುವ ದೇಶಗಳ ಜನರು ಸ್ಥೂಲಕಾಯರಾಗುವ ಸಾಧ್ಯತೆ ಅಧಿಕ. ಏಕೆಂದರೆ ಆರ್ಥಿಕ ಅಭದ್ರತೆಯ ವಿಚಾರ ಬಹಿರಂಗಗೊಂಡಂತೆ ಒತ್ತಡಕ್ಕೆ ಒಳಗಾಗುವ ಜನರು ಹೆಚ್ಚು ಹೆಚ್ಚು ತಿನ್ನುವುದಕ್ಕೆ ಮುಂದಾಗುತ್ತಾರೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ.

ಅಮೆರಿಕದಲ್ಲಿ ಮೂರನೇ ಒಂದರಷ್ಟು ಮಂದಿಗೆ ಬೊಜ್ಜು ಇದೆ, ಆದರೆ ನಾರ್ವೆಯಲ್ಲಿ ಶೇ 5ರಷ್ಟು  ಮಂದಿಗೂ ಬೊಜ್ಜು ಇಲ್ಲ. ಸಾಂಪ್ರದಾಯಿಕವಾಗಿ ಹೆಚ್ಚಿನ ಸಾಮಾಜಿಕ ಭದ್ರತೆ ಒದಗಿಸುವ ನಾರ್ವೆ, ಫಿನ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಸ್ಟೇನ್, ಸ್ವೀಡನ್‌ನಂತಹ ದೇಶಗಳಲ್ಲಿ ಜನರ ಬೊಜ್ಜಿನ ಪ್ರಮಾಣ ಕಡಿಮೆ ಇರುವುದು ಇದೇ ಕಾರಣಕ್ಕೆ ಎಂದು ಅಧ್ಯಯನ ತಿಳಿಸಿದೆ.

ಬ್ರಿಟನ್ ಕಂಪೆನಿಯಿಂದ ಸಮೋಸಾ ಮಾರಾಟ...!
ಬ್ರಿಟನ್‌ನ ಆಹಾರೋತ್ಪನ್ನ ಕಂಪೆನಿ ಯೊಂದು ಭಾರತದಲ್ಲಿ ಸಮೋಸಾ ಮಾರಾಟ ಮಾಡಲು ಶುರುಮಾಡಿದೆ.  ಈಸ್ಟ್ ಮಿಡ್‌ಲ್ಯಾಂಡ್ಸ್ ಲೈಸಿಸ್ಟರ್ ನಲ್ಲಿರುವ ಭಾರತೀಯ ಮೂಲದ ‘ಫರ್ಸಾನ್’ ಎಂಬ ಕಂಪೆನಿಯು, ಬ್ರಿಟನ್ ವ್ಯಾಪಾರ ಮತ್ತು ಹೂಡಿಕೆ  (ಯುಕೆಟಿಐ) ಸಂಸ್ಥೆಯ ಬೆಂಬಲದೊಂದಿಗೆ ಭಾರತದೊಂದಿಗೆ ಈ ಸಂಬಂಧ ಒಪ್ಪಂದ ಮಾಡಿಕೊಂಡಿದೆ. ಸಮೋಸಾ ಹಾಗೂ ಭಜ್ಜಿ ತಯಾರಿಸಲು ಗುಜರಾತ್‌ನಲ್ಲಿ ನೂತನ ಫ್ಯಾಕ್ಟರಿ ತೆರೆದಿದೆ.

ಅಂಚೆ ಕಚೇರಿಗಳಲ್ಲೂ ಕೋರ್ ಬ್ಯಾಂಕಿಂಗ್
ಕೋರ್ ಬ್ಯಾಂಕಿಂಗ್ ಕೇವಲ ಬ್ಯಾಂಕ್‌ಗಳಲ್ಲಿ ನಡೆಯುವ ವ್ಯವಹಾರ ಎಂದು ಭಾವಿಸಬೇಕಿಲ್ಲ. 2011-12ನೇ ಆರ್ಥಿಕ ವರ್ಷದಲ್ಲಿ ಇದೇ ಪ್ರಥಮ ಬಾರಿಗೆ ಅಂಚೆ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಅಂಚೆ ಕಚೇರಿಗಳಲ್ಲಿ ಸಣ್ಣ ಉಳಿತಾಯ ಮಾಡಲಾಗುತ್ತದೆ. ಎಲ್ಲಾ ಅಂಚೆ ಕಚೇರಿಗಳನ್ನು ಕಂಪ್ಯೂಟರೀಕೃತ ಮಾಡುವುದರ ಮೂಲಕ ದೇಶದ ಯಾವುದೇ ಭಾಗದಲ್ಲೇ ಇದ್ದರೂ ನಿರ್ದಿಷ್ಟ ಅಂಚೆ ಕಚೇರಿಯಲ್ಲಿ ಉಳಿತಾಯದ ಹಣ ಪಾವತಿಸಲು ಇದರಿಂದ ಸಾಧ್ಯವಾಗಲಿದೆ.

ಇದಕ್ಕಾಗಿ ದೇಶದಲ್ಲಿರುವ ಮುಖ್ಯ ಅಂಚೆ ಕಚೇರಿಗಳು ಮತ್ತು ಉಪ ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ಸೇವೆ (ಸಿಬಿಎಸ್)  ಆರಂಭಿಸುವ ಪ್ರಸ್ತಾಪ ಇದೆ ಎಂದು ಸಂಪರ್ಕ ಖಾತೆ ರಾಜ್ಯ ಸಚಿವ ಸಚಿನ್ ಪೈಲಟ್ ಈಚೆಗೆ ವಡೋದರದಲ್ಲಿ ತಿಳಿಸಿದ್ದಾರೆ.

ಶಾಪ್‌ನಲ್ಲೂ ಕ್ಯಾಶ್...!
ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ತನ್ನ ಗ್ರಾಹಕರಿಗಾಗಿ ಇದೀಗ ವಿನೂತನ ಸೇವೆ ಆರಂಭಿಸಿದೆ. ನೋಂದಾಯಿತ ವ್ಯಾಪಾರ ಮಳಿಗೆಗಳಲ್ಲಿ ಬ್ಯಾಂಕ್ ಗ್ರಾಹಕರು ಡೆಬಿಟ್ ಕಾರ್ಡ್ ಮೂಲಕ ನಗದು ಹಣ ಪಡೆಯಬಹುದು.

ಡೆಬಿಟ್‌ಕಾರ್ಡ್ ಹೊಂದಿರುವ ಗ್ರಾಹಕರು ದಿನವೊಂದಕ್ಕೆ ಗರಿಷ್ಠ  ್ಙ 1,000  ತೆಗೆದುಕೊಳ್ಳಬಹುದು. ದೇಶದಲ್ಲಿ ಇಂಥದ್ದೊಂದು ವಿನೂತನ ಸೇವೆ ಆರಂಭಿಸಿದ ಮೊಟ್ಟ ಮೊದಲ ಬ್ಯಾಂಕ್ ಎನ್ನುವ ಹೆಗ್ಗಳಿಕೆ ಐಸಿಐಸಿಗೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT