ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ನಲ್ಲಿ `ಜನವರಿ...'

Last Updated 14 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ಜನವರಿ 1 ಬಿಡುಗಡೆ'- ಇದು ಚಿತ್ರವೊಂದರ ಹೆಸರು. ಜನವರಿ ತಿಂಗಳಲ್ಲೇ ತೆರೆ ಕಾಣಲು ಪ್ರಯತ್ನಿಸಿ ಹಿಂದೆ ಬಿದ್ದ ಈ ಚಿತ್ರ ಇದೀಗ ಮಾರ್ಚ್‌ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಅದಕ್ಕೆ ಕಾರಣ ಚಿತ್ರದಲ್ಲಿನ ಸಿಕ್ಕಾಪಟ್ಟೆ ಗ್ರಾಫಿಕ್ಸ್ ಕೆಲಸವಂತೆ.

ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ತಮ್ಮ ಟೈಂಟೇಬಲ್ ಏರುಪೇರಾದುದನ್ನು ವಿಷಾದದಿಂದಲೇ ಹೇಳಿಕೊಂಡ ಚಿತ್ರದ ನಿರ್ಮಾಪಕ ಯುಗಂಧರ್, `ಇಪ್ಪತ್ತು ನಿಮಿಷದ ಗ್ರಾಫಿಕ್ಸ್ ಕೆಲಸ ನಮ್ಮ ಯೋಜನೆಯನ್ನು ಬುಡಮೇಲು ಮಾಡಿತು' ಎಂದರು.
ಹೆಸರಿಗೆ ತಕ್ಕಂತೆ ಜನವರಿಯಲ್ಲಿ ಸಿನಿಮಾ ಬಿಡುಗಡೆ ಆಗದಿದ್ದರೂ ನಿರ್ದೇಶಕ ವರ್ಮಾ ಶ್ರೀನಿವಾಸ್ ಅವರಿಗೆ ತಮ್ಮ ಚಿತ್ರದ ಬಗ್ಗೆ ಭರವಸೆ ಇದೆ.

ದೀಪಕ್ `ಜನವರಿ 1 ಬಿಡುಗಡೆ' ಸಿನಿಮಾದ ನಾಯಕ. ಮೊದಲ ಬಾರಿಗೆ ಖಾಕಿ ತೊಟ್ಟು ನಟಿಸಿರುವ ಖುಷಿ ಅವರದು. ಪೂಜಾ ಗಾಂಧಿ ಅವರಿಗೆ ಚಿತ್ರದಲ್ಲಿ ಕ್ರೈಮ್ ವರದಿಗಾರ್ತಿ ಪಾತ್ರವಂತೆ. `ಚಿತ್ರದಲ್ಲಿ ಇರುವ ನಿಗೂಢ ಪ್ರೇಕ್ಷಕರಿಗೆ ಹೊಸತು ಎನಿಸಲಿದೆ' ಎಂಬುದು ಅವರ ಅನಿಸಿಕೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT