ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಅಗತ್ಯ: ಆರ್‌ಎಸ್‌ಎಸ್‌

Last Updated 7 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಮಾಜದಲ್ಲಿ ಅಸಮಾನತೆ ಇನ್ನೂ ದೂರವಾಗಿಲ್ಲ ಎಂದು ಹಲುಬಿರುವ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಮಾನತೆ ಬರುವವರೆಗೂ ಶೋಷಿತ ವರ್ಗಗಳಿಗೆ ಮೀಸಲಾತಿ ಮುಂದುವರಿಸಬೇಕು ಎಂದಿದೆ. ಆದರೆ, ಮೀಸಲಾತಿ ವಿಷಯ­ದಲ್ಲಿ ರಾಜಕೀಯ ಸಲ್ಲ ಎಂದೂ ಎಚ್ಚರಿಕೆ ನೀಡಿದೆ.

‘ಮೀಸಲಾತಿಗೆ ನಮ್ಮ  ಬೆಂಬಲ ಇದೆ. ಸಾಮಾಜಿಕವಾಗಿ ಸಮಾನತೆ ಸಾಧಿಸು­ವವರೆಗೂ ಮೀಸಲಾತಿ ಮುಂದುವರಿ­ಸುವ ಅಗತ್ಯ ಇದೆ. ಆದರೆ, ಇದು ರಾಜಕೀಯದ ವಿಷಯ ಆಗಬಾರದಷ್ಟೆ’ ಎಂದು ಆರ್‌ಎಸ್‌ಎಸ್‌ ಸರ­ಸಂಘ­ಚಾಲಕ (ಮುಖ್ಯಸ್ಥ) ಮೋಹನ್‌ ಭಾಗವತ್‌ ಅವರು ಭಾನುವಾರ ಪುಸ್ತಕ­ವೊಂದರ ಬಿಡುಗಡೆ ಸಂದರ್ಭದಲ್ಲಿ ಹೇಳಿದರು.

‘ಶೋಷಿತ ವರ್ಗಗಳು ದೇಶದ ಒಳಿತಿ­ಗಾಗಿ ಅನ್ಯಾಯವನ್ನು ಶತಮಾನಗಳಿಂದ ಸಹಿಸಿಕೊಂಡಿವೆ. ಇಂತಹ ಸಮುದಾಯ­ಗಳಿಗೆ ಸಾಮಾಜಿಕ ಸಮಾನತೆ ದೊರಕ­ಬೇಕು. ಸಮಾನತೆ ಸಾಧಿಸಲು ಇನ್ನೂ 100 ವರ್ಷಗಳಾದರೂ ಸರಿಯೇ  ಮೀಸಲಾತಿ ಮುಂದುವರಿಸಬೇಕು. ಇದರಿಂದ ಕೆಲವು ಸಮುದಾಯಗಳಿಗೆ ಅನ್ಯಾಯ­ವಾಗಬಹುದು ಆದರೂ ಚಿಂತಿಯಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT