ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ದಾಳಿಯಲ್ಲಿ ಭಾರತೀಯರ ಕೈವಾಡ

ರೆಹಮಾನ್ ಮಲಿಕ್ ಪ್ರತಿಪಾದನೆ
Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ: 26/11ರಂದು ಮುಂಬೈ ಮೇಲೆ ನಡೆದ ದಾಳಿಯಲ್ಲಿ `ದೇಶ ರಹಿತ' ಭಾರತೀಯರ ಕೈವಾಡವಿದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.

 ಮುಂಬೈ ದಾಳಿಯ ಸಂಚು ನಡೆಸಿದ್ದ ಅಬು ಜುಂದಾಲ್ ಭಾರತೀಯ ಬೇಹುಗಾರಿಕಾ ಸಂಸ್ಥೆಗಳ ಏಜೆಂಟ್ ಆಗಿದ್ದ ಎಂದು  ಭಾರತ ಪ್ರವಾಸ ಅಂತ್ಯಗೊಳಿಸುವ ಮುನ್ನ ಮಲಿಕ್ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆ ಡೇವಿಡ್ ಕೋಲ್‌ಮನ್ ಹೆಡ್ಲಿ, ಅಲ್ ಖೈದಾ ಉಗ್ರ ಇಲ್ಯಾಸ್ ಕಾಶ್ಮೀರಿ, ಪಾಕಿಸ್ತಾನ ಸೇನಾಪಡೆಯ ನಿವೃತ್ತ ಮೇಜರ್ ಹಾಗೂ ಭಾರತೀಯ ಮೂಲದ `ದೇಶ ರಹಿತ'ರಾದ ಅಬು ಜುಂದಾಲ್, ಜಬಿಯುಲ್ಲಾ ಹಾಗೂ ಫಾಹೀಮ್ ಅನ್ಸಾರಿ ಈ ದೇಶ ರಹಿತರು ಎಂದು ಮಲಿಕ್ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಭಾರತದ ಬೇಹುಗಾರಿಕಾ ಪಡೆಗಳ ವೈಫಲ್ಯದಿಂದ ಈ ದಾಳಿ ನಡೆದಿದೆ. ಎರಡೂ ದೇಶಗಳ ಬೇಹುಗಾರಿಕಾ ಸಂಸ್ಥೆಗಳ ನಡುವೆ ಸಂವಹನ ಇರದಿರುವುದು ಇದಕ್ಕೆ ಕಾರಣ ಎಂದೂ ಮಲಿಕ್ ಅಭಿಪ್ರಾಯ ಪಟ್ಟಿದ್ದಾರೆ.

ಖಂಡನೆ: ಮಲಿಕ್ ಹೇಳಿಕೆಯನ್ನು ಬಲವಾಗಿ ಖಂಡಿಸಿರುವ ಭಾರತ, ಇದು ಹಾಸ್ಯಾಸ್ಪದ ಹೇಳಿಕೆ. ದಾಳಿ ನಡೆದಾಗ ಅಬು ಜುಂದಾಲ್, `ಲಷ್ಕರ್-ಎ- ತೈಯಬಾ' ಪರವಾಗಿ ಕೆಲಸ ಮಾಡುತ್ತಿದ್ದ ಎಂದು ಸ್ಪಷ್ಟಪಡಿಸಿದೆ.

`ಗಟ್ಟಿ ಸಾಕ್ಷ್ಯ ಬೇಕು'

ಮುಂಬೈ ದಾಳಿಯ ಹಿಂದಿನ ಸಂಚುಕೋರ ಹಫೀಜ್ ಸಯೀದ್ ವಿರುದ್ಧ ಭಾರತ ಬಲವಾದ ಸಾಕ್ಷ್ಯ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ರೆಹಮಾನ್ ಮಲಿಕ್ ತಿಳಿಸಿದ್ದಾರೆ. ಭಾನುವಾರ ಇಲ್ಲಿ ಮಾತನಾಡಿದ ಅವರು, ಹಫೀಜ್ ವಿರುದ್ಧ ಕ್ರಮ ಕೈಗೊಳ್ಳಲು ಬಲವಾದ ಸಾಕ್ಷ್ಯಗಳ ಅಗತ್ಯ ಇದೆ ಎಂದರು. ಸಯೀದ್‌ನನ್ನು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. ಸಾಕ್ಷ್ಯಾಧಾರದ ಕೊರತೆಯ ಕಾರಣ ಕೋರ್ಟ್ ಆದೇಶದಂತೆ ಬಿಡುಗಡೆ ಮಾಡಲಾಯಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT