ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗ್ಗರಿಸಿ ಬಿದ್ದ ಗಿಲ್ಲಾರ್ಡ್...

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ರಾಜ್‌ಘಾಟ್‌ನಲ್ಲಿ ರಾಷ್ಟ್ರಪಿತನ ಸಮಾಧಿ ಸ್ಥಳಕ್ಕೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿ ಹಿಂತಿರುಗುವಾಗ ಅವರ ಹೈಹೀಲ್ಡ್ ಶೂ ಹುಲ್ಲಿನಲ್ಲಿ ಸಿಕ್ಕಿಹಾಕಿಕೊಂಡು ಮುಗ್ಗರಿಸಿದ ಘಟನೆ ನಡೆದಿದೆ.

ಈ ಘಟನೆಯನ್ನು ತಮಾಷೆಯಾಗಿ ತೆಗೆದುಕೊಂಡ ಗಿಲ್ಲಾರ್ಡ್ `ನನ್ನ ಚಪ್ಪಲಿ ಹುಲ್ಲಿನಲ್ಲಿ ಸಿಕ್ಕಿಹಾಕಿಕೊಂಡಿತು. ಮಹಿಳೆಯರಿಗೆ ಇದೂ ಯಾವಾಗಲೂ ಒಂದು ತೊಂದರೆ. ಪುರುಷರಿಗೆ ಈ ಸಮಸ್ಯೆ ಇಲ್ಲ~ ಎಂದು ನಗುತ್ತಲೇ ಹೇಳಿದರು.

ಈ ಹಿಂದೆ 2 ಬಾರಿ ಗಿಲ್ಲಾರ್ಡ್ ಆಸ್ಟ್ರೇಲಿಯಾದಲ್ಲಿ ಚಪ್ಪಲಿ ಕಳೆದುಕೊಂಡಿದ್ದರು. ಜನವರಿಯಲ್ಲಿ ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾ ದಿನಾಚರಣೆ ಸಂದರ್ಭದದಲ್ಲಿ  ನಡೆದ ಗಲಭೆಯಲ್ಲಿ ಮತ್ತು ಚುನಾವಣೆ ಪ್ರಚಾರದ ವೇಳೆ ಅವರು ಚಪ್ಪಲಿ ಕಳೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT