ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಗೂರು: ತಿಬ್ಬಾದೇವಿಗೆ ವಿಶೇಷ ಪೂಜೆ ಇಂದು

Last Updated 19 ಜುಲೈ 2013, 6:56 IST
ಅಕ್ಷರ ಗಾತ್ರ

ಮೈಸೂರು /ತಿ. ನರಸೀಪುರ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮೂಗೂರಿನ    ಶ್ರೀ ತ್ರಿಪುರಸುಂದರಿ ಅಮ್ಮನವರಿಗೆ ಆಷಾಢಮಾಸದ ಶುಕ್ರವಾರ ಅಂಗವಾಗಿ ಜುಲೈ 19ರಂದು ವಿಶೇಷ ಪೂಜೆ ಹಾಗೂ ಹೂವಿನ ಸೀರೆ ಅಲಂಕಾರ ಕಾರ್ಯಕ್ರಮ ಆಯೊಜಿಸಲಾಗಿದೆ.

ಪ್ರತಿವರ್ಷ ಆಷಾಢಮಾಸದಲ್ಲಿ ಈ ಕಾರ್ಯಕ್ರಮವನ್ನು ಬಹುವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವಿಶೇಷ ಸಂದರ್ಭದಲ್ಲಿ ಸುತ್ತಲಿನ ಗ್ರಾಮಗಳು, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಸುಮಾರು 5ರಿಂದ 6ಸಾವಿರ ಭಕ್ತರು ಸೇರುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ದೇವಾಲಯಕ್ಕೆ ದೀಪಾಲಂಕಾರ ಮಾಡಲಾಗುವುದು ಎಂದು ಬೆಂಗಳೂರಿನ ದೇವಿ ಸಿಲ್ಕ್ ಟ್ರೇಡರ್ಸ್‌ನ    ಎಂ.ಎಸ್. ಸುಧಾಕರ್ ಮತ್ತು ಸಹೋದರರು ತಿಳಿಸಿದ್ದಾರೆ.

ವಿವಿಧ ದೇವರ ಚಿತ್ರಗಳುಳ್ಳ ಆರ್ಚ್‌ಗಳಿಗೆ ದೀಪಾಲಂಕಾರ ಮಾಡಲಾಗುವುದು. ಗ್ರಾಮದ ದೇಶೇಶ್ವರ ಸ್ವಾಮಿ, ವೀರಭದ್ರ ಸ್ವಾಮಿ, ರಾಕಸಮ್ಮನ ದೇವಾಲಯದಲ್ಲೂ ವಿಶೇಷ ಪೂಜೆ, ಅಲಂಕಾರಗಳು ಜರುಗುವವು. ದೇವಸ್ಥಾನದ ಆವರಣದಲ್ಲಿ ಭಕ್ತರ ಅನುಕೂಲಕ್ಕಾಗಿ ಪಾರ್ಕಿಂಗ್ ವ್ಯವಸ್ತೆ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT