ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೂವರೆ ವರ್ಷದಲ್ಲಿ ಭದ್ರೆ ನೀರು

Last Updated 6 ಜೂನ್ 2011, 5:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುಂದಿನ ಮೂರೂವರೆ ವರ್ಷದಲ್ಲಿ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ಮುಗಿಯುವ ಲಕ್ಷಣಗಳಿವೆ ಎಂದು ಸಂಸದ ಜನಾರ್ದನಸ್ವಾಮಿ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ್ಙ 500 ಕೋಟಿ ಬಿಡುಗಡೆಯಾಗಿದ್ದು, ಅಂದಾಜು ್ಙ 300 ಕೋಟಿಯಷ್ಟು ಕಾಮಗಾರಿ ಮುಗಿದಿದೆ. ಯೋಜನೆಗಾಗಿ 400 ಕೋಟಿ ರೂಪಾಯಿಯಷ್ಟು 20 ಮೋಟಾರ್ ಮತ್ತು 20 ಪಂಪ್‌ಸೆಟ್‌ಖರೀದಿಸಲಾಗಿದೆ ಎಂದು ವಿವರಿಸಿದರು.

ಈಚಗೆ ತಾವು ವೈಯಕ್ತಿಕವಾಗಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿಯನ್ನು ಪರಿಶೀಲಿಸಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಮುಗಿಯಬೇಕು ಮತ್ತು ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಅಧಿಕಾರಿಗಳು, ಎಂಜಿನಿಯರ್, ಸಾರ್ವಜನಿಕರ ಜತೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.

ಒಂದು ಮೋಟಾರ್ ಮತ್ತು ಒಂದು ಪಂಪ್‌ಸೆಟ್‌ಗೆ ಅಂದಾಜು ್ಙ  18 ಕೋಟಿ ವೆಚ್ಚವಾಗುತ್ತದೆ. ವಿವಿಧ ಹಂತಗಳಲ್ಲಿ ವಿವಿಧ ಅಶ್ವಶಕ್ತಿ ಪಂಪ್‌ಸೆಟ್‌ಗಳು ಬೇಕಾಗುತ್ತವೆ. ಯೋಜನೆಗೆ 160 ಮೆಗಾವಾಟ್ ಬೇಕಾಗಿದ್ದು, ಎರಡು ಗ್ರಿಡ್‌ಗಳ ಸ್ಥಾಪನೆಗೆ ಒಪ್ಪಿಗೆ ಸಿಕ್ಕಿವೆ.
 
ಮುಖ್ಯವಾಗಿ ಈ ಯೋಜನೆಗೆ ಸುಮಾರು 200 ಮೆಗಾವಾಟ್‌ಸೌರಶಕ್ತಿ ಮತ್ತು ಪವನ ವಿದ್ಯುತ್‌ನಿಂದ ಉತ್ಪಾದಿಸುವ ಬಗ್ಗೆ ಚಿಂತನೆ ನಡೆಸುವಂತೆ ಎಂಜಿನಿಯರಿಂಗ್ ತಂಡಕ್ಕೆ ಸೂಚಿಸಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಆರಂಭಿಸಲು ಪ್ರಯತ್ನಿಸಲಾಗುವುದು. ಯೋಜನಾ ಆಯೋಗದ ಸದಸ್ಯ ಡಾ.ಕಸ್ತೂರಿ ರಂಗನ್ ಅವರ ಜತೆಯೂ ಈ ಬಗ್ಗೆ ಚರ್ಚಿಸಲಾಗುವುದು ಎಂದು ವಿವರಿಸಿದರು.

ಎರಡನೇ ಪ್ಯಾಕೇಜ್ ಅಡಿಯಲ್ಲಿ ಭದ್ರಾ ಜಲಾಶಯದಿಂದ ಎರಡು ಹಂತದಲ್ಲಿ ಅಂದರೆ ಪ್ರತಿ ಹಂತದಲ್ಲಿ 5 ಮೋಟಾರ್ ಮತ್ತು 5 ಪಂಪ್‌ಸೆಟ್‌ಗಳನ್ನು ಬಳಸಿ ನೀರು ತಂದು ಗುರುತ್ವಾಕರ್ಷಣೆ ಮೂಲಕ ನೀರು ಹರಿಸುವ ಯೋಜನೆ ಇದೆ. ಮೊದಲನೇ ಪ್ಯಾಕೇಜ್‌ನಲ್ಲಿ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 5 ಮೋಟಾರ್ ಮತ್ತು 5 ಪಂಪ್‌ಸೆಟ್‌ಗಳ ಮೂಲಕ ಎತ್ತಿ ನೀರು ಹರಿಸಲಾಗುವುದು ಎಂದು ವಿವರಿಸಿದರು.
 
ಆದರೆ, ತುಂಗಾ ನದಿ ಬಳಿಯ ಜಮೀನು ಸ್ವಾಧೀನ ಪಡಿಸಿಕೊಂಡಿದ್ದರೂ ರೈತರಿಗೆ ಸೂಕ್ತ ಪರಿಹಾರ ದೊರೆಯದ ಕಾರಣ ಮೊದಲನೇ ಪ್ಯಾಕೇಜ್ ಕಾಮಗಾರಿ 18 ದಿನಗಳಿಂದ ಸ್ಥಗಿತಗೊಂಡಿರುವುದು ತಾವು ಭೇಟಿ ನೀಡಿದಾಗ ಗಮನಕ್ಕೆ ಬಂತು. ಈ ಬಗ್ಗೆ ರೈತರು ಹಾಗೂ ಕಂದಾಯ ಸಚಿವರಾದ ಜಿ. ಕರುಣಾಕರರೆಡ್ಡಿ ಅವರ ಜತೆ ಸಮಾಲೋಚಿಸಿದ್ದು, ಹಣ ಬಿಡುಗಡೆಗೆ ಸಚಿವರು ಒಪ್ಪಿದ್ದಾರೆ. ರೈತರಿಗೆ ಇನ್ನೂ ಒಂದು ತಿಂಗಳಲ್ಲಿ ಪರಿಹಾರ ಹಣ ದೊರೆಯಲಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT