ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತರಲ್ಲೊಬ್ಬ ಭಾರತೀಯ ಸಂಜಾತ

ಅಮೆರಿಕದ ಗುಂಡಿನ ದಾಳಿ ಘಟನೆ: ಸಾವಿನ ಸಂಖ್ಯೆ 13
Last Updated 17 ಸೆಪ್ಟೆಂಬರ್ 2013, 10:32 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಶ್ವೇತ ಭವನದ ಸಮೀಪವಿರುವ ಇಲ್ಲಿಯ ನೌಕಾಪಡೆಗೆ ಸೇರಿದ ವ್ಯಾಪಕ ಭದ್ರತೆ ಹೊಂದಿರುವ ಹಡುಗು ಕಟ್ಟೆಯ ಮೇಲೆ ಏಕಾಂಗಿ ಬಂದೂಕುಧಾರಿ ಸೋಮವಾರ ನಡೆಸಿದ ಗುಂಡಿನ ದಾಳಿಯಲ್ಲಿ ಮೃತರಾದ 12 ಜನರಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬರು ಸೇರಿದ್ದಾರೆ.

ಸೋಮವಾರ ಗುಂಡಿನ ದಾಳಿ ನಡೆಸಿದ ಬಂದೂಕುಧಾರಿಯೂ ಸೇರಿದಂತೆ ಘಟನೆಯಲ್ಲಿ ಸಾವನ್ನಪ್ಪಿದ ಎಲ್ಲರೂ ಸೇನಾ ಗುತ್ತಿಗೆದಾರಾಗಿದ್ದರು ಎಂದು ಶಂಕಿಸಲಾಗಿದೆ.

`ಗುಂಡಿನ ದಾಳಿ ನಡೆಸಿದ ಬಂದೂಕುಧಾರಿ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ' ಎಂದು ಸುದ್ದಿಗೋಷ್ಠಿಯಲ್ಲಿ ವಾಷಿಂಗ್ಟನ್ ಡಿಸಿ ಮೇಯರ್ ವಿನ್ಸೆಂಟ್ ಗ್ರೆಯ್ ತಿಳಿಸಿದ್ದಾರೆ.

ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ಏಳು ಜನರ ಹೆಸರುಗಳನ್ನು ವಾಷಿಂಗ್ಟನ್ ಮಹಾನಗರ ಪೊಲೀಸರು ಸೋಮವಾರ ಬಿಡುಗಡೆಗೊಳಿಸಿದ್ದು, ಅದರಲ್ಲಿ ಭಾರತೀಯ ಸಂಜಾತ 61 ವರ್ಷದ ವಿಷ್ಣು ಪಂಡಿತ್ ಕೂಡ ಸೇರಿದ್ದಾರೆ.

ಪಂಡಿತ್ ಅವರು ರಕ್ಷಣಾ ಗುತ್ತಿಗೆದಾರ ಎಂಬುದು ಬಿಟ್ಟರೇ ಅವರ ಬಗ್ಗೆ ಬೇರೆ ಯಾವುದೇ  ಮಾಹಿತಿ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT