ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನ ವಿವಿಧ ರಸ್ತೆಗಳ ಅಭಿವೃದ್ಧಿಗೆ ಚಾಲನೆ

Last Updated 22 ಡಿಸೆಂಬರ್ 2012, 6:25 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ವಾರ್ಡ್‌ನಂ. 17 ವಲಯ ಕಚೇರಿ-3ರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ 130 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಶುಕ್ರವಾರ ಚಾಲನೆ ನೀಡಿದರು.

ಕುವೆಂಪು ನಗರದ ವಿವಿಧ ಪ್ರದೇಶಗಳಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಿಂದ ಈ ಪ್ರದೇಶದ ವಾಹನ ಸಂಚಾರ ಸಾಕಷ್ಟು ಸುಗಮ ವಾಗಲಿದೆ. ನಗರ ಪ್ರದೇಶ ವ್ಯಾಪ್ತಿಯಲ್ಲಿ ಇನ್ನು ಹಲವಾರು ಅಭಿವದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಕುವೆಂಪುನಗರ ಎಂ.ಬ್ಲಾಕ್‌ನ ಆಯ್ದ ರಸ್ತೆಗಳ ಡಾಂಬರೀಕರಣ: ಅಂದಾಜು ಮೊತ್ತ 21 ಲಕ್ಷ ರೂ.ಗಳು. ಡಾಂಬರೀಕರಣದ ಉದ್ದ: 1000 ಮೀ., ಅಗಲ: 4ಮೀ. ಡಾಂಬರೀಕರಣಕ್ಕೆ ಒಳಪಡುವ ರಸ್ತೆಗಳು- ಎಂ.ಬ್ಲಾಕ್ ಮೂರನೇ ಮುಖ್ಯ ರಸ್ತೆ, 4,5,6, ನೇ ಮುಖ್ಯ ರಸ್ತೆ. ಕುವೆಂಪು ನಗರದ 3 ಮತ್ತು 4ನೇ ಹಂತದ ಆಯ್ದ ರಸ್ತೆಗಳ ಡಾಂಬರೀಕರಣ: ಅಂದಾಜು ಮೊತ್ತ 25 ಲಕ್ಷ ರೂ.ಗಳು.

ಡಾಂಬರೀಕರಣದ ಉದ್ದ: 1250 ಮೀ., ಅಗಲ: 4ಮೀ. ಡಾಂಬರೀಕರಣಕ್ಕೆ ಒಳಪಡುವ ರಸ್ತೆಗಳು- 3ನೇ ಹಂತದ ಕೆ.ಎಚ್.ಬಿ. 110 ರಿಂದ 216 ರವರೆಗಿನ ಅಡ್ಡರಸ್ತೆ. ನೃಪತುಂಗ ರಸ್ತೆಯಿಂದ ಆದಿಚುಂಚನಗಿರಿ ರಸ್ತೆಯವರೆಗೆ. ಪೂಜಾ ಬೇಕರಿ ರಸ್ತೆಯ ಅಭಿವೃದ್ಧಿ: ಅಂದಾಜು ಮೊತ್ತ 6.25 ಲಕ್ಷ ರೂ.ಗಳು. ಡಾಂಬರೀಕರಣದ ಉದ್ದ: 141 ಮೀ., ಅಗಲ: 5ಮೀ., ಜಯನಗರ 18ನೇ ಅಡ್ಡರಸ್ತೆಯಲ್ಲಿ ಬರುವ ಇಸ್ಕಾನ್ ದೇವಸ್ಥಾನದ ಬಳಿ ಸೇತುವೆ ಅಗಲೀಕರಣ: ಅಂದಾಜು ಮೊತ್ತ 50 ಲಕ್ಷ ರೂ.ಗಳು. ಕುವೆಂಪುನಗರದ 2ನೇ ಹಂತದ ಆಕಾಶ್ ಕೇಬಲ್ ಹಿಂಭಾಗದ ರಸ್ತೆಯ ಅಭಿವೃದ್ಧಿ:ಅಂದಾಜು ಮೊತ್ತ 10 ಲಕ್ಷ ರೂ.ಗಳು. ಡಾಂಬರೀಕರಣದ ಉದ್ದ: 450 ಮೀ. ಅಗಲ: 4ಮೀ. ಡಾಂಬರೀಕರಣಕ್ಕೆ ಒಳಪಡುವ ರಸ್ತೆಗಳ ವಿವರ. ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಿಂದ 4ನೇ ಹಂತದ ರಸ್ತೆ ಅಭಿವೃದ್ಧಿ:ಅಂದಾಜು ಮೊತ್ತ 10 ಲಕ್ಷ ರೂ.ಗಳು ಡಾಂಬರೀಕರಣದ ಉದ್ದ: 150 ಮೀ. ಅಗಲ: 4ಮೀ. ಡಾಂಬರೀಕರಣಕ್ಕೆ ಒಳಪಡುವ ರಸ್ತೆಗಳ ವಿವರ. 4ನೇ ಹಂತದ ಎಲ್.ಐ.ಜಿ. 173 ರಿಂದ 232 ರವರೆಗಿನ ಅಡ್ಡರಸ್ತೆ ಹಾಗೂ ಮುಖ್ಯ ರಸ್ತೆ. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಕೆ.ರಮೇಶ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT