ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಟೈಗರ್ ಟೆಕ್ಸ್ಟ್ :ಹೊಸ ತಲೆನೋವು

Last Updated 21 ಜೂನ್ 2011, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮೊಬೈಲ್ `ಎಸ್‌ಎಂಎಸ್~ಗಳ ತೀವ್ರ ನಿಗಾ ವಹಿಸುತ್ತಿರುವ ಭದ್ರತಾ ಸಿಬ್ಬಂದಿಗೆ ಈಗ `ಮೊಬೈಲ್ ಟೈಗರ್ ಟೆಕ್ಸ್ಟ್~ ತಂತ್ರಾಂಶ ಹೊಸ ತಲೆನೋವು ಸೃಷ್ಟಿಸಿದೆ. 

ಇದನ್ನು ಅಮೆರಿಕ ಮೂಲದ ಕಂಪೆನಿಯೊಂದು ಅಭಿವೃದ್ಧಿ ಪಡಿಸುತ್ತಿದೆ. ಟೈಗರ್ ಟೆಕ್ಸ್ಟ್ ತಂತ್ರಾಂಶ ಬಳಸಿ  ಸಂದೇಶ ಕಳುಹಿಸುವ ವ್ಯಕ್ತಿ ಸಂದೇಶದ ಸ್ವೀಕರಿಸುವ ವ್ಯಕ್ತಿಯ ಮೊಬೈಲ್‌ನಲ್ಲಿರುವ ಎಲ್ಲ ಮೆಸೇಜ್, ವಿಡಿಯೊ ಮತ್ತು ಚಿತ್ರಗಳನ್ನು ಡಿಲೀಟ್ ಮಾಡಬಹುದಾಗಿದೆ. ಈ ರೀತಿ ಡಿಲೀಟ್ ಮಾಡಿದರೆ ನಂತರ ಭದ್ರತಾ ಸಂಸ್ಥೆಗಳಿಗೆ `ಸಂದೇಶ~ ಬಂದ ಮೂಲ ಮೊಬೈಲ್ ಸಂಖ್ಯೆ ಪತ್ತೆಯಾಗುವುದಿಲ್ಲ. `ಟೈಗರ್ ಟೆಕ್ಟ್ಸ್~ ತಂತ್ರಾಂಶ ಬಳಕೆದಾರನಿಗೆ ತನ್ನ ಖಾಸಗಿ ಸಂದೇಶಗಳ ಮೇಲೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತದೆ. ಇದರಲ್ಲಿರುವ `ಆಟೊ ಡಿಲೀಟ್~ ಸೌಲಭ್ಯ ಬಳಸಿ ಯಾವಾಗ ಬೇಕಾದರೂ, ಸಂದೇಶ ಸ್ವೀಕರಿಸುವ ವ್ಯಕ್ತಿಯ ಮೊಬೈಲ್‌ನಿಂದ ಮಸೇಜ್ ಅನ್ನು ಅಳಿಸಿ ಹಾಕಬಹುದಾಗಿದೆ. ಆದರೆ, ಈ ತಂತ್ರಾಂಶವನ್ನು ಗ್ರಾಹಕ ಬಳಕೆಗೆ ಮುಕ್ತಗೊಳಿಸುವ ಮುನ್ನ ನಿಗಾ ವ್ಯವಸ್ಥೆ ತಂತ್ರಜ್ಞಾನವನ್ನು ಒದಗಿಸುವಂತೆ  ಭದ್ರತಾ ಸಂಸ್ಥೆಗಳು ಸೂಚಿಸಿವೆ. ಈಗಾಗಲೇ ಐಫೋನ್, ಬ್ಲ್ಯಾಕ್‌ಬೆರಿ, ಆಂಡ್ರಾಯ್ಡ ಮೆಸೇಜ್ ಸೇವೆಗಳ ನಿಗಾ ವ್ಯವಸ್ಥೆಯ ಬಗ್ಗೆ ಭದ್ರತಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT