ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಬಳಕೆಯಿಂದ ಕ್ಯಾನ್ಸರ್

Last Updated 2 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ): ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ಮಿದುಳಿನ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಂಶೋಧನೆಯ ವಿವರಗಳನ್ನು ಪರಿಶೀಲಿಸಲಾಗುವುದು ಎಂದು ವೈದ್ಯಕೀಯ ಸಂಶೋಧನೆಗಾಗಿನ ಭಾರತೀಯ ಮಂಡಳಿ (ಐಸಿಎಂಆರ್) ತಿಳಿಸಿದೆ.

ಇದೇ ವೇಳೆ ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಸಂಸ್ಥೆ ನಡೆಸುತ್ತಿರುವ ಸ್ವತಂತ್ರ ಅಧ್ಯಯನದ ಫಲಿತಾಂಶ  ಮುಂದಿನ ವರ್ಷ ಹೊರಬರಲಿದೆ ಎಂದೂ ತಿಳಿಸಿದೆ.

`ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನ ಕುರಿತು ಪರಿಶೀಲಿಸಲಾಗುವುದಲ್ಲದೆ ಯಾವ ಅಂಕಿ ಅಂಶಗಳ ಆಧಾರದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂಬುದನ್ನೂ ಪರಿಶೀಲಿಸಲಾಗುವುದು~ ಎಂದು (ಐಸಿಎಂಆರ್) ಮಹಾ ನಿರ್ದೇಶಕ ವಿ. ಎಂ. ಕಟೋಷ್ ಸ್ಪಷ್ಟಪಡಿಸಿದ್ದಾರೆ.

ಮೊಬೈಲ್ ಫೋನ್‌ಗಳ ಬಳಕೆ ಕುರಿತಂತೆ ಐಸಿಎಂಆರ್ ತನ್ನದೇ ಆದ ಸ್ವತಂತ್ರ ಅಧ್ಯಯನವನ್ನೂ ನಡೆಸುತ್ತಿದ್ದು, ಅಂತಿಮ ಫಲಿತಾಂಶದ ಕುರಿತು ಮಾತನಾಡಲು ಇದು ಸೂಕ್ತ ಸಮಯ ಅಲ್ಲ~ ಎಂದು ಅವರು ತಿಳಿಸಿದರು.

ಈ ಕುರಿತು ತಮ್ಮ ಸಂಸ್ಥೆ ಕಳೆದ ಮೇ ತಿಂಗಳಲ್ಲಿ ಸಂಶೋಧನೆ ಆರಂಭಿಸಿದೆ ಎಂದೂ ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT