ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಬ್ಯಾಂಕಿಂಗ್: ವಹಿವಾಟು ಹೆಚ್ಚಳ

Last Updated 15 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಮೊಬೈಲ್ ಮೂಲಕ ನಡೆಯುವ ಜಾಗತಿಕ ಬ್ಯಾಂಕಿಂಗ್ ವಹಿವಾಟು 2014ರ ವೇಳೆಗೆ 245 ಶತಕೋಟಿ ಡಾಲರ್ (ರೂ.12,25,000 ಕೋಟಿ) ಗಡಿ ದಾಟಲಿದೆ ಎಂದು ಉದ್ಯಮ ಸಲಹಾ ಸಂಸ್ಥೆ ಅರ್ನೆಸ್ಟ್ ಅಂಡ್ ಯಂಗ್ ಹೇಳಿದೆ.

ಭಾರತವೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ತಂತ್ರಜ್ಞಾನ ತ್ವರಿತವಾಗಿ ಬೆಳೆಯುತ್ತಿದೆ. ಇದರಿಂದ ಮೊಬೈಲ್ ಆಧಾರಿತ ಮೌಲ್ಯವರ್ಧಿತ ಸೇವೆಗಳು ಶ್ರೀಸಾಮಾನ್ಯನನ್ನೂ ತಲುಪುತ್ತಿದೆ. ವಿತ್ತೀಯ ಸೇರ್ಪಡೆಯ ಪ್ರಮುಖ ಮಾಧ್ಯಮವನ್ನಾಗಿ ಬ್ಯಾಂಕುಗಳು ಮೊಬೈಲ್ ಬಳಸುತ್ತಿವೆ ಎಂದು ಸಮೀಕ್ಷೆ ಹೇಳಿದೆ.

ಇದೇ ವೇಳೆ `ಮೊಬೈಲ್ ಮನಿ~ ಸೇವೆ ಬಳಸುತ್ತಿರುವ ಗ್ರಾಹಕರ ಪಟ್ಟಿಗೆ ಮುಂದಿನ ಮೂರು ವರ್ಷಗಳಲ್ಲಿ 340 ದಶಲಕ್ಷದಷ್ಟು ಹೊಸ ಗ್ರಾಹಕರು ಸೇರ್ಪಡೆಯಾಗಲಿದ್ದಾರೆ ಎಂದು ಸಂಸ್ಥೆ ಅಂದಾಜಿಸಿದೆ. 2009ರಲ್ಲಿ ಸುಮಾರು 81 ದಶಲಕ್ಷ ಜನರು `ಮೊಬೈಲ್ ಪಾವತಿ~ ಬಳಸುತ್ತಿದ್ದರು. 

 ಭಾರತೀಯ ರಿಸರ್ವ್ ಬ್ಯಾಂಕ್ ತಂತ್ರಜ್ಞಾನ ಆಧಾರಿತ ಬ್ಯಾಂಕಿಂಗ್ ಸೇವೆಗಳಿಗೆ ಚಾಲನೆ ನೀಡಿರುವುದು ಮತ್ತು ಮೊಬೈಲ್ ಬಳಕೆದಾರರ ಸಂಖ್ಯೆ ದ್ವಿಗುಣಗೊಂಡಿರುವುದು `ಮೊಬೈಲ್ ಪಾವತಿ~ ಮಾರುಕಟ್ಟೆ ವಿಸ್ತರಣೆಗೆ ಮುಖ್ಯ ಕಾರಣ.
 
`ಎಂ-ಮೊಬೈಲ್~ ಸುರಕ್ಷತಾ ತಂತ್ರಜ್ಞಾನಗಳಿಗೂ ಬ್ಯಾಂಕುಗಳು ಆದ್ಯತೆ ನೀಡಿರುವುದರಿಂದ ಗ್ರಾಹಕರಲ್ಲಿ ವಿಶ್ವಾಸ ಮೂಡಿದೆ.
 
ಏಷ್ಯಾ-ಪೆಸಿಫಿಕ್ ವಲಯದಲ್ಲಿ  ಮೊಬೈಲ್ ಪಾವತಿ ವ್ಯವಸ್ಥೆ ಹೆಚ್ಚಿದೆ. ಮೌಲ್ಯವರ್ಧಿತ ಸೇವೆಗಳನ್ನು ಒದಗಿಸಲು ಸೇವಾ ಪೂರೈಕೆ ಕಂಪೆನಿಗಳಿಗೆ ಮೊಬೈಲ್ ಅತ್ಯುತ್ತಮ ಮಾಧ್ಯಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT