ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊರಾರ್ಜಿ ವಸತಿ ಶಾಲೆಗೆ ಶಂಕುಸ್ಥಾಪನೆ

Last Updated 5 ಸೆಪ್ಟೆಂಬರ್ 2011, 10:35 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬಿಜೆಪಿ ಅಧಿಕಾರಕ್ಕೆ ಬಂದಾ ಗಿನಿಂದಲೂ ಜನಸಾಮಾನ್ಯರಿಗೆ ಹತ್ತಿರವಿದೆ. ಸರ್ಕಾರ ಜನಪರ ಕಾರ್ಯಕ್ರಮಗಳಿಂದ ಜನರ ಪ್ರೀತಿ-ವಿಶ್ವಾಸ ಗಳಿಸಿದೆ. ಜಾತಿ-ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಿ ಗೆದ್ದು ಬರುವ ಜಾಯಮಾನ ನಮ್ಮದಲ್ಲ, ಎಲ್ಲರ ವಿಶ್ವಾಸದ ಅಲೆಯ ಮೇಲೆ ಗೆಲ್ಲುವವರು ನಾವು ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ತಾಲ್ಲೂಕಿನ ಸರಪನಹಳ್ಳಿಯಲ್ಲಿ  ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಶಾಸಕನಾದ ಮೇಲೆ ಈ ಭಾಗದ ಅಭಿವೃದ್ಧಿಗಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಮೊರಾರ್ಜಿ ದೇಸಾಯಿ ಶಾಲೆಗೆ 5 ಕೋಟಿ ರೂಪಾಯಿ ಮಂಜೂರು ಮಾಡಿಸಿ, ಕಟ್ಟಡ ನಿರ್ಮಾಣಕ್ಕೆ ಒತ್ತು ಕೊಡಲಾಗಿದೆ. ಬಿಳೇ ಕಲ್ಲಹಳ್ಳಿ ವಸತಿ ಶಾಲೆ ಕಟ್ಟಡ ಕಾಮಗಾರಿ ಪ್ರಗತಿ ಯಲ್ಲಿದ್ದು, 2 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಬಿಸಿಎಂ ಇಲಾಖೆ ಯಡಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, 5 ನೂತನ ವಿದ್ಯಾರ್ಥಿ ನಿಲಯ ತೆರೆದು ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿ ಕೊಡಲಾಗಿದೆ ಎಂದರು.

ಸುವರ್ಣ ಗ್ರಾಮ ಯೋಜನೆಯಡಿ ಲಕ್ಯಾ ಹೋಬಳಿಯ ಗ್ರಾಮಗಳನ್ನು ಆಯ್ಕೆಮಾಡಿ ಕಾಮ ಗಾರಿ ಆರಂಭಿಸಲಾಗಿದೆ. ಹಿರೇಗೌಜ, ಈಶ್ವರಹಳ್ಳಿ, ಮಾಚಗೊಂ ಡನಹಳ್ಳಿಗೂ ಈ ಯೋಜನೆ ವಿಸ್ತರಿಸಲಾಗುವುದು. ಕ್ಷೇತ್ರದ ಪರಿಶಿಷ್ಟ ಜಾತಿಯ ಕಾಲೋನಿಗಳಿಗೆ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ.
ಅಭಿವೃದ್ಧಿ ಕಾರ್ಯಗಳು ವಿರೋಧಿಗಳ ಟೀಕೆಗೆ ಉತ್ತರವಾಗಲಿವೆ ಎಂದರು. 

ತೆಂಗು, ನಾರುಮಂಡಳಿ ಅಧ್ಯಕ್ಷೆ  ರೇಖಾಹುಲಿ ಯಪ್ಪ ಗೌಡ, ಜಿಪಂ ಅಧ್ಯಕ್ಷೆ  ಪ್ರಫುಲ್ಲಾ ಮಂಜುನಾಥ್, ಸದಸ್ಯ ಕಲ್ಮರುಡಪ್ಪ ಮಾತನಾಡಿದರು.ವಿಧಾನಪರಿಷತ್ ಸದಸ್ಯೆ ಎ.ವಿ. ಗಾಯತ್ರಿಶಾಂತೇಗೌಡ, ತಾ.ಪಂ. ಅಧ್ಯಕ್ಷ ಕನಕರಾಜ್, ಕೋಟೆ ರಂಗನಾಥ್, ತಾ.ಪಂ. ಸದಸ್ಯ ಸೌಮ್ಯ ಪ್ರಕಾಶ್, ಗ್ರಾ.ಪಂ. ಅಧ್ಯಕ್ಷೆ ಕವಿತಾ ರಮೇಶ್, ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಸಿ.ಕೆ.ಜಗದೀಶ್‌ಕುಮಾರ್ ಇನ್ನಿತರರು ಇದ್ದರು.

ಚೆಕ್ ವಿತರಣೆ:  ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ಬಿ. ಕಾವಲು ಗ್ರಾಮದ ಚಾಮುಂಡೇಶ್ವರಿ ಸಮುದಾಯ ಭವನಕ್ಕೆ ಶಾಸಕರ ನಿಧಿಯಿಂದ 2 ಲಕ್ಷ ರೂಪಾಯಿ ಅನುದಾನದ ಚೆಕ್ ಅನ್ನು ಗ್ರಾಮದ ಮುಖಂಡರಾದ ಗೋಪಾಲನಾಯ್ಕ, ಬಾಲಾಜಿ ನಾಯ್ಕ, ಪ್ರಕಾಶ್ ನಾಯ್ಕ, ಶಂಕರನಾಯ್ಕ, ಕೃಷ್ಣ ನಾಯ್ಕರವರಿಗೆ ಶಾಸಕ ಸಿ.ಟಿ. ರವಿ ಚೆಕ್ ನಗರದಲ್ಲಿ ವಿತರಿಸಿದರು. ಎಪಿಎಂಸಿ ನಿರ್ದೇಶಕ ಲಕ್ಷ್ಮಣ ನಾಯಕ್, ಬಿಜೆಪಿ ಮುಖಂಡ ಮಂಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT